India vs New Zealand: ನ್ಯೂಜಿಲೆಂಡ್ ವಿರುದ್ಧದ 3 ಟೆಸ್ಟ್ ಸರಣಿಯ ಸೋಲಿನ ನಂತರ ಭಾರತದ ಅನೇಕ ಸ್ಟಾರ್ ಆಟಗಾರರು, ಟೀಕಾಕಾರರು ಮತ್ತು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಫಾರ್ಮ್ ಬಗ್ಗೆ ಭಾರೀ ಆಕ್ರೋಶ ಭುಗಿಲೆದ್ದಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ)ಯಲ್ಲಿ ವಿರಾಟ್ ಜೊತೆ ಸುದೀರ್ಘ ಕಾಲ ಆಡಿದ ದಿನೇಶ್ ಕಾರ್ತಿಕ್ ಕೊಹ್ಲಿ ಬಗ್ಗೆ ಒಂದಷ್ಟು ಸಲಹೆಗಳನ್ನು ನೀಡಿದ್ದು, ಕೊಹ್ಲಿ ಫಾರ್ಮ್ಗೆ ಮರಳಲು ದೇಶೀಯ ಕ್ರಿಕೆಟ್ನಲ್ಲಿ ಆಡಬೇಕು ಎಂದು ಸಲಹೆ ನೀಡಿದ್ದಾರೆ
ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ!
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಪಿನ್ ವಿರುದ್ಧ ಕೊಹ್ಲಿ ಹೋರಾಟ ಮತ್ತು ಕಳಪೆ ಪ್ರದರ್ಶನದ ಬಗ್ಗೆ ಕಾರ್ತಿಕ್ ಕಳವಳ ವ್ಯಕ್ತಪಡಿಸಿದ್ದಾರೆ. ಪುಣೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶನ ನಿರಾಶಾದಾಯಕವಾಗಿತ್ತು. ಎರಡೂ ಇನ್ನಿಂಗ್ಸ್ಗಳಲ್ಲಿ, ಅವರು ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದ್ದರು.
ಕ್ರಿಕ್ ಬಜ್ನೊಂದಿಗೆ ಮಾತನಾಡಿರುವ ಕಾರ್ತಿಕ್, "ಅವರ (ವಿರಾಟ್ ಕೊಹ್ಲಿ) ಸಾಮರ್ಥ್ಯ ಏನು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಸರಣಿಯು ಅವರಿಗೆ ಉತ್ತಮವಾಗಿಲ್ಲ. ಅಭಿಮಾನಿಗಳು ಹೇಳಿದಂತೆ, ಅವರು ಬಹಳ ದಿನಗಳಿಂದ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ದೇಶೀಯ ಕ್ರಿಕೆಟ್ನಲ್ಲಿ ಕಂಬ್ಯಾಕ್ ಮಾಡಬೇಕು" ಎಂದು ಸಲಗೆ ನೀಡಿದ್ದಾರೆ.
ವಿರಾಟ್ ಕೊಹ್ಲಿಯ ಕೊನೆಯ 12 ಇನ್ನಿಂಗ್ಸ್:
17 ರನ್ (40 ಎಸೆತಗಳು) vs ನ್ಯೂಜಿಲೆಂಡ್, ಪುಣೆ
1 (9) vs ನ್ಯೂಜಿಲೆಂಡ್, ಪುಣೆ
70 (102) vs ನ್ಯೂಜಿಲೆಂಡ್, ಬೆಂಗಳೂರು
0 (9) vs ನ್ಯೂಜಿಲೆಂಡ್, ಬೆಂಗಳೂರು
29 (37)* vs ಬಾಂಗ್ಲಾದೇಶ, ಕಾನ್ಪುರ
47 (35) vs ಬಾಂಗ್ಲಾದೇಶ, ಕಾನ್ಪುರ
17 (37) vs ಬಾಂಗ್ಲಾದೇಶ, ಚೆನ್ನೈ
6 (6) vs ಬಾಂಗ್ಲಾದೇಶ, ಚೆನ್ನೈ
12 (11) vs ದಕ್ಷಿಣ ಆಫ್ರಿಕಾ, ಕೇಪ್ ಟೌನ್
46 (59) vs ದಕ್ಷಿಣ ಆಫ್ರಿಕಾ, ಕೇಪ್ ಟೌನ್
76 (82) vs ದಕ್ಷಿಣ ಆಫ್ರಿಕಾ, ಜೋಹಾನ್ಸ್ಬರ್ಗ್
38 (64) vs ದಕ್ಷಿಣ ಆಫ್ರಿಕಾ, ಜೋಹಾನ್ಸ್ಬರ್ಗ್
ಇದನ್ನೂ ಓದಿ: ದೀಪಾವಳಿ ಬಂಪರ್ ಆಫರ್; ಕೇವಲ 699 ರೂ.ಗಳಿಗೆ ಬಿಡುಗಡೆಯಾದ ಜಿಯೋ ಭಾರತ್ ಫೋನ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.