ವಿಭಿನ್ನ ಗೆಟ್‍ ಅಪ್‍ನಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್.!ಇವರು ಯಾರು ಬಲ್ಲಿರೇನು..?

ಧೋನಿ ಯಾಕೆ ಹೀಗೆ ಕಾಣಿಸಿಕೊಂಡಿದ್ದಾರೆ ಎಂಬುದು ಇಂದಿಗೂ ನಿಗೂಢ. ಈ ಫೋಟೋ ಶೂಟ್ ಎಲ್ಲಿ ನಡೆದಿದೆ ಅನ್ನೋದು ಕೂಡಾ ರಹಸ್ಯವಾಗಿಯೇ ಉಳಿದಿದೆ. ಯಾಕೆ ಈ ಅವತಾರ ಅನ್ನೋದು ಕೂಡಾ ಯಾರೂ ಹೇಳುತ್ತಿಲ್ಲ

Written by - Ranjitha R K | Last Updated : Mar 14, 2021, 08:50 AM IST
  • ಇಲ್ಲೊಂದು ಫೋಟೋ ಇದೆ. ಅದನ್ನು ಗಮನವಿಟ್ಟು ನೋಡಿ.
  • ಇವರು ಯಾರೋ ಒಬ್ಬರು ಬೌದ್ಧ ಭಿಕ್ಷು ಎಂದು ನೀವಂದು ಕೊಂಡರೆ ನಿಮ್ಮ ಊಹೆ ತಪ್ಪು.
  • ಗಮನ ಇಟ್ಟು ನೋಡಿ. ಈ ಫೋಟೋ ಯಾರದ್ದು ಹೇಳಿ..!
ವಿಭಿನ್ನ ಗೆಟ್‍ ಅಪ್‍ನಲ್ಲಿ ನಿಮ್ಮ ನೆಚ್ಚಿನ ಕ್ರಿಕೆಟರ್.!ಇವರು ಯಾರು ಬಲ್ಲಿರೇನು..?  title=
ಇಲ್ಲೊಂದು ಫೋಟೋ ಇದೆ. ಅದನ್ನು ಗಮನವಿಟ್ಟು ನೋಡಿ (photo twitter)

ನವದೆಹಲಿ : ಇಲ್ಲೊಂದು ಫೋಟೋ ಇದೆ. ಅದನ್ನು ಗಮನವಿಟ್ಟು ನೋಡಿ. ಇವರು ಯಾರೋ ಒಬ್ಬರು ಬೌದ್ಧ ಭಿಕ್ಷು ಆಗಿರಬಹುದು..? ಮಾರ್ಷಲ್ ಆರ್ಟ್ನಲಲ್ಲಿ ಪಳಗಿರುವ ಗುರು ಆಗಿರಬಹುದು.? ಎಂದು ನೀವಂದು ಕೊಂಡರೆ ನಿಮ್ಮ ಊಹೆ ತಪ್ಪು. ಗಮನ ಇಟ್ಟು ನೋಡಿ. ಈ ಫೋಟೋ ಮತ್ಯಾರದ್ದೂ ಅಲ್ಲ, ನಿಮ್ಮ ನೆಚ್ಚಿನ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ.  ಧೋನಿಯ ಈ ಹೊಸ ಅವತಾರ ಸಾಕಷ್ಟು ಕ್ರೇಜ್ ಸೃಷ್ಟಿಸಿದೆ.

ಧೋನಿಗೆ ಯಾಕೆ ಈ ಹೊಸ ಗೆಟ್ ಅಪ್..?
ಧೋನಿ (Dhoni) ಯಾಕೆ ಹೀಗೆ ಕಾಣಿಸಿಕೊಂಡಿದ್ದಾರೆ ಎಂಬುದು ಇಂದಿಗೂ ನಿಗೂಢ. ಈ ಫೋಟೋ ಶೂಟ್ (Photo shoot) ಎಲ್ಲಿ ನಡೆದಿದೆ ಅನ್ನೋದು ಕೂಡಾ ರಹಸ್ಯವಾಗಿಯೇ ಉಳಿದಿದೆ. ಯಾಕೆ ಈ ಅವತಾರ ಅನ್ನೋದು ಕೂಡಾ ಯಾರೂ ಹೇಳುತ್ತಿಲ್ಲ. ಆದರೆ, ಧೋನಿಯ ಹೊಸ ಲುಕ್ (Dhoni New look) ಅಭಿಮಾನಿಗಳಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿದೆ. 

ಇದನ್ನೂ ಓದಿ : ಐಪಿಎಲ್ 2022 ರಲ್ಲಿ ಬರಲಿವೆ ಎರಡು ನೂತನ ತಂಡಗಳು..ಹರಾಜಿಗೆ ಮಹೂರ್ತ ಫಿಕ್ಸ್...!

ಎಲ್ಲವೂ ರಹಸ್ಯ..!
ಲಭ್ಯ ಮಾಹಿತಿಗಳ ಪ್ರಕಾರ ಯಾವುದೋ ಒಂದು ಪ್ರಾಜೆಕ್ಟ್ ಗೆ ಧೋನಿ ಹೀಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದು ಕೂಡಾ ಖಚಿತ ಮಾಹಿತಿ ಅಲ್ಲ. ಆ ಪ್ರಾಜೆಕ್ಟ್ ಅನ್ನು ನಿಗೂಢವಾಗಿ ಮಾಡಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ಮಾಧ್ಯಮಗಳಿಗೆ (Media) ಅಥವಾ ಜಾಹೀರಾತು ಕಂಪನಿಗಳಿಗೆ ಇದುವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಸೋರಿಕೆ ಆಗಿಲ್ಲ. 

ಐಪಿಎಲ್ ಗೆ  ತಯಾರುಗುತ್ತಿರುವ ಧೋನಿ :
ಸಿಎಸ್ ಕೆ (CSK) ನಾಯಕ ತನ್ನ ತಂಡದ ಇತರ ಸದಸ್ಯರೊಂದಿಗೆ ಐಪಿಎಲ್‍ ಗೆ (IPL) ತಯಾರಾಗುತ್ತಿದ್ದಾರೆ. ಏಪ್ರಿಲ್, ಮೇನಲ್ಲಿ ನಡೆಯುತ್ತಿರುವ ಐಪಿಎಲ್‍ ಗೆ ತಯಾರಿ ಆರಂಭಿಸಿರುವ ಮೊದಲ ತಂಡವೇ ಸಿಎಸ್ ಕೆ . ಐಪಿಎಲ್ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮೂರು ಸಲ ಕಪ್ ಗೆದ್ದಿದೆ. ಆದರೆ, ಕಳೆದ ಐಪಿಎಲ್ಲ್ ನಲ್ಲಿ ಮಾತ್ರ ಸಿಎಸ್‍ ಕೆ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 
ಧೋನಿ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.

ಇದನ್ನೂ ಓದಿ : India vs England 1st T20I: ಕೆ. ಎಲ್ ರಾಹುಲ್ ಹಿಡಿದ ಆ ಅದ್ಬುತ ಕ್ಯಾಚ್ ಹೇಗಿತ್ತು ಗೊತ್ತೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News