2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕುಸ್ತಿಪಟು ದೀಪಕ್ ಪುನಿಯಾ

ಕಜಕಿಸ್ತಾನ್‌ನ ನೂರ್ ಸುಲ್ತಾನ್‌ನಲ್ಲಿ ಶನಿವಾರ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದ ನಂತರ ಭಾರತದ ಕುಸ್ತಿಪಟು ದೀಪಕ್ ಪುನಿಯಾ ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಾಲ್ಕನೇ ಅಥ್ಲೆಟಿಕ್ಸ್ ಆಗಿ ಹೊರಹೊಮ್ಮಿದ್ದಾರೆ 

Last Updated : Sep 21, 2019, 06:18 PM IST
2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕುಸ್ತಿಪಟು ದೀಪಕ್ ಪುನಿಯಾ title=

ನವದೆಹಲಿ: ಕಜಕಿಸ್ತಾನ್‌ನ ನೂರ್ ಸುಲ್ತಾನ್‌ನಲ್ಲಿ ಶನಿವಾರ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿದ ನಂತರ ಭಾರತದ ಕುಸ್ತಿಪಟು ದೀಪಕ್ ಪುನಿಯಾ ಅವರು 2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಾಲ್ಕನೇ ಅಥ್ಲೆಟಿಕ್ಸ್ ಆಗಿ ಹೊರಹೊಮ್ಮಿದ್ದಾರೆ 

ಪುರುಷರ 86 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಕೊಲಂಬಿಯಾದ ಕಾರ್ಲೋಸ್ ಮೆಂಡೆಜ್ ಅವರನ್ನು 7-6ರಿಂದ ಮುನ್ನಡೆಸಿದ ನಂತರ  ಟೋಕಿಯೋ ಒಲಂಪಿಕ್ಸ್ ಗೆ ನಾಲ್ಕನೇ ವ್ಯಕ್ತಿಯಾಗಿ ಪ್ರವೇಶಿಸಿದರು.

ಅವರ ಈ ಸೈಮಿಫೈನಲ್ ಹಾದಿಯಲ್ಲಿ ಪುನಿಯಾ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಜಿಕಿಸ್ತಾನ್‌ನ ಕೊಡಿರೊವ್ ಬಖೋದೂರ್ ಅವರನ್ನು 6-0 ಗೋಲುಗಳಿಂದ ಸೋಲಿಸಿದರೆ  ಮತ್ತು ಆರಂಭಿಕ ಪಂದ್ಯದಲ್ಲಿ ಕಜಕಿಸ್ತಾನ್‌ನ ಅಡಿಲೆಟ್ ದಾವ್ಲುಂಬಾಯೆವ್ ಅವರನ್ನು 8-6 ರಿಂದ ಸೋಲಿಸಿದರು.

ಇದಕ್ಕೂ ಮೊದಲು ವಿನೇಶ್ ಫೋಗಾಟ್, ರವಿ ಕುಮಾರ್ ದಹಿಯಾ ಮತ್ತು ಭಜರಂಗ್ ಪುನಿಯಾ ಎಲ್ಲರೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನವನ್ನು ಗಳಿಸಿದ್ದಾರೆ.

Trending News