ಟೀಂ ಇಂಡಿಯಾಗೆ ಬಿಗ್ ಶಾಕ್: ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲ್ಲ ಈ ಪವರ್ ಫುಲ್ ವೇಗಿ!

India vs South Africa T20: ಇಂದು ಡರ್ಬನ್‌’ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದ ಪ್ಲೇಯಿಂಗ್-11 ರಲ್ಲಿ ದೀಪಕ್ ಚಹಾರ್ ಇಲ್ಲ. ವೈಯಕ್ತಿಕ ಕಾರಣಗಳಿಂದ ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ

Written by - Bhavishya Shetty | Last Updated : Dec 10, 2023, 08:33 PM IST
    • ಭಾರತ vs ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ T20 ಸರಣಿ
    • ದೀಪಕ್ ಚಹಾರ್ ಸಂಪೂರ್ಣ ಸರಣಿಯನ್ನು ಆಡುವುದು ಅನುಮಾನ
    • ವೈಯಕ್ತಿಕ ಕಾರಣಗಳಿಂದ ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ
ಟೀಂ ಇಂಡಿಯಾಗೆ ಬಿಗ್ ಶಾಕ್: ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಲ್ಲ ಈ ಪವರ್ ಫುಲ್ ವೇಗಿ!  title=
Deepak Chahar

India vs South Africa T20: ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ T20 ಸರಣಿಯನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಡರ್ಬನ್‌’ನಲ್ಲಿ ನಡೆಯುತ್ತಿದೆ. ಆದರೆ ಪವರ್‌ ಫುಲ್ ವೇಗಿ ದೀಪಕ್ ಚಹಾರ್ ಈ ಸರಣಿಗೆ ಇನ್ನೂ ಟೀಂ ಇಂಡಿಯಾ ಸೇರಿಕೊಂಡಿಲ್ಲ. ಇದೀಗ ದೀಪಕ್ ಚಹಾರ್ ಸಂಪೂರ್ಣ ಸರಣಿಯನ್ನು ಆಡುವುದು ಅನುಮಾನ ಎಂಬ ಅಪ್ಡೇಟ್ ಬಂದಿದೆ.

ಇದನ್ನೂ ಓದಿ: ಇದ್ದಿಲು ಇದ್ದರೆ ಸಾಕು… ಬಿಳಿಕೂದಲನ್ನು 5 ನಿಮಿಷದಲ್ಲಿ ನೈಸರ್ಗಿಕವಾಗಿ ಬುಡದಿಂದಲೇ ಕಪ್ಪಾಗಿಸಬಹುದು!

ಇಂದು ಡರ್ಬನ್‌’ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯದ ಪ್ಲೇಯಿಂಗ್-11 ರಲ್ಲಿ ದೀಪಕ್ ಚಹಾರ್ ಇಲ್ಲ. ವೈಯಕ್ತಿಕ ಕಾರಣಗಳಿಂದ ಅವರು ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಕುಟುಂಬದ ಸದಸ್ಯರೊಬ್ಬರ ಅನಾರೋಗ್ಯದ ಕಾರಣದಿಂದ ದೀಪಕ್ ಚಹಾರ್ ಪ್ರಸ್ತುತ ಮನೆಯಲ್ಲಿದ್ದಾರೆ.

ಕಳೆದ ಭಾನುವಾರ ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಅಂತಿಮ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ (IND vs AUS 5ನೇ T20) 31 ವರ್ಷದ ಚಹಾರ್‌’ಗೆ ಆಡಲು ಸಾಧ್ಯವಾಗಲಿಲ್ಲ. ಕುಟುಂಬದ ಸದಸ್ಯರೊಬ್ಬರ ಅನಾರೋಗ್ಯದ ಬಗ್ಗೆ ತಿಳಿದ ದೀಪಕ್ ಮನೆಗೆ ಮರಳಿದ್ದರು.

ಇದನ್ನೂ ಓದಿ: ಟಿ20 ವಿಶ್ವಕಪ್’ಗೆ ನಾಯಕ ಯಾರು?: ಸಂದರ್ಶನದಲ್ಲಿ ಸತ್ಯ ಬಹಿರಂಗಪಡಿಸಿದ ಜಯ್ ಶಾ

ಅನಾಮಧೇಯತೆಯ ಷರತ್ತಿನ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿರಿಯ ಅಧಿಕಾರಿಯೊಬ್ಬರು, “ದೀಪಕ್ ಇನ್ನೂ ಡರ್ಬನ್‌’ನಲ್ಲಿ ತಂಡವನ್ನು ಸೇರಿಕೊಂಡಿಲ್ಲ. ಅವರ ಕುಟುಂಬದ ನಿಕಟ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಕುಟುಂಬದ ಸದಸ್ಯರ ಆರೋಗ್ಯದ ಆಧಾರದ ಮೇಲೆ ಅವರು ತಂಡವನ್ನು ಸೇರಿಕೊಳ್ಳಬಹುದು. ಅವರು ಭಾಗವಹಿಸದೆಯೂ ಇರಬಹುದು” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News