ನವದೆಹಲಿ: ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ಗುರುವಾರದಂದು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ ಪ್ಯಾರಾ-ಅಥ್ಲೀಟ್ ಮತ್ತು ಅತ್ಯಂತ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದೆ ವೇಳೆ ತರಬೇತಿ ಕಾರಣದಿಂದಾಗಿ ಸಹ-ಪ್ರಶಸ್ತಿ ಪುರಸ್ಕೃತ ಭಜರಂಗ್ ಪುನಿಯಾ ಇಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭಕ್ಕೆ ಗೈರು ಹಾಜರಾದರು. 2016 ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶಾಟ್ ಪುಟ್ ಎಫ್ 53 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮಲಿಕ್, ಏಷ್ಯಾ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಪುನಿಯಾ ಅವರೊಂದಿಗೆ ಜಂಟಿ ವಿಜೇತರಾಗಿದ್ದರು, ಅವರು ಕಜಕಿಸ್ತಾನದಲ್ಲಿ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧರಾಗಲು ರಷ್ಯಾದಲ್ಲಿದ್ದಾರೆ.
Delhi: Para-athlete Deepa Malik receives Rajiv Gandhi Khel Ratna Award from President Ram Nath Kovind. pic.twitter.com/13SO1EyQs4
— ANI (@ANI) August 29, 2019
ಈಗ ದೀಪಾ ಮಲಿಕ್ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಎರಡನೇ ಪ್ಯಾರಾ ಒಲಂಪಿಕ್ ಪಟು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಜಾವಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ಅವರು 2017 ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದರು. ಕಳೆದ ಮೂರು ವರ್ಷಗಳಿಂದ ಪ್ರಶಸ್ತಿಗೆ ನಿರ್ಲಕ್ಷಿಸಲ್ಪಟ್ಟಿದ್ದರಿಂದ ಮಲಿಕ್ ನಾಲ್ಕನೇ ಬಾರಿಗೆ ಅದೃಷ್ಟಶಾಲಿಯಾಗಿದ್ದಾರೆ.
ಪುನಿಯಾ ಹೊರತುಪಡಿಸಿ ಈ ಕಾರ್ಯಕ್ರಮಕ್ಕೆ ಗೈರು ಹಾಜರಾದ ಪ್ರಮುಖ ಆಟಗಾರರಾರೆಂದರೆ ಕ್ರಿಕೆಟಿಗ ರವೀಂದ್ರ ಜಡೇಜಾ, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಶಾಟ್ ಪುಟರ್ ತೇಜಿಂದರ್ ಪಾಲ್ ಸಿಂಗ್ ಟೂರ್, ಮತ್ತು ಬೆಳ್ಳಿ ವಿಜೇತ ಕ್ವಾರ್ಟರ್ ಮೈಲರ್ ಮೊಹಮ್ಮದ್ ಅನಸ್, ಇವರೆಲ್ಲರೂ ಈ ವರ್ಷದ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ:
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ: ದೀಪಾ ಮಲಿಕ್ (ಪ್ಯಾರಾ-ಅಥ್ಲೆಟಿಕ್ಸ್), ಭಜರಂಗ್ ಪುನಿಯಾ (ಕುಸ್ತಿ)
ಅರ್ಜುನ ಪ್ರಶಸ್ತಿಗಳು: ರವೀಂದ್ರ ಜಡೇಜಾ (ಕ್ರಿಕೆಟ್), ಮೊಹಮ್ಮದ್ ಅನಸ್ ಯಾಹಿಯಾ (ಅಥ್ಲೆಟಿಕ್ಸ್), ಗುರ್‌ಪ್ರೀತ್ ಸಿಂಗ್ ಸಂಧು (ಫುಟ್‌ಬಾಲ್), ಸೋನಿಯಾ ಲೆದರ್ (ಬಾಕ್ಸಿಂಗ್), ಚಿಂಗ್ಲೆನ್ಸಾನಾ ಸಿಂಗ್ ಕಂಗುಜಮ್ (ಹಾಕಿ), ಎಸ್ ಭಾಸ್ಕರನ್ (ಬಾಡಿಬಿಲ್ಡಿಂಗ್), ಅಜಯ್ ಠಾಕೂರ್ (ಕಬದ್ದಿ) (ಶೂಟಿಂಗ್), ಬಿ ಸಾಯಿ ಪ್ರಣೀತ್ (ಬ್ಯಾಡ್ಮಿಂಟನ್), ತಾಜಿಂದರ್ ಪಾಲ್ ಸಿಂಗ್ ಟೂರ್ (ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಸ್ಪೋರ್ಟ್ಸ್-ಬ್ಯಾಡ್ಮಿಂಟನ್), ಹರ್ಮೀತ್ ರಾಜುಲ್ ದೇಸಾಯಿ (ಟೇಬಲ್ ಟೆನಿಸ್), ಪೂಜಾ ಧಂಡಾ (ಕುಸ್ತಿ), ಫೌದ್ ಮಿರ್ಜಾ (ಕುದುರೆ ಸವಾರಿ), ಸಿಮ್ರಾನ್ ಸಿಂಗ್ ಶೆರ್ಗಿಲ್ (ಪೊಲೊ), ಪೂನಮ್ ಯಾದವ್ (ಕ್ರಿಕೆಟ್), ಸ್ವಪ್ನಾ ಬರ್ಮನ್ (ಅಥ್ಲೆಟಿಕ್ಸ್), ಸುಂದರ್ ಸಿಂಗ್ ಗುರ್ಜರ್ (ಪ್ಯಾರಾ ಸ್ಪೋರ್ಟ್ಸ್-ಅಥ್ಲೆಟಿಕ್ಸ್) ಮತ್ತು ಗೌರವ್ ಸಿಂಗ್ ಗಿಲ್ (ಮೋಟಾರ್ ಸ್ಪೋರ್ಟ್ಸ್).
ದ್ರೋಣಾಚಾರ್ಯ ಪ್ರಶಸ್ತಿ (ನಿಯಮಿತ ವಿಭಾಗ): ಮೊಹಿಂದರ್ ಸಿಂಗ್ ಧಿಲ್ಲಾನ್ (ಅಥ್ಲೆಟಿಕ್ಸ್), ಸಂದೀಪ್ ಗುಪ್ತಾ (ಟೇಬಲ್ ಟೆನಿಸ್) ಮತ್ತು ವಿಮಲ್ ಕುಮಾರ್ (ಬ್ಯಾಡ್ಮಿಂಟನ್).
ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನದ ವಿಭಾಗ): ಸಂಜಯ್ ಭರದ್ವಾಜ್ (ಕ್ರಿಕೆಟ್), ರಂಬೀರ್ ಸಿಂಗ್ ಖೋಕರ್ (ಕಬಡ್ಡಿ) ಮತ್ತು ಮೆಜ್ಬಾನ್ ಪಟೇಲ್ (ಹಾಕಿ)
ಧ್ಯಾನ್ ಚಂದ್ ಪ್ರಶಸ್ತಿ: ಮನೋಜ್ ಕುಮಾರ್ (ಕುಸ್ತಿ), ಸಿ ಲಾಲ್ರೆಮ್ಸಂಗಾ (ಬಿಲ್ಲುಗಾರಿಕೆ), ಅರೂಪ್ ಬಸಕ್ (ಟೇಬಲ್ ಟೆನಿಸ್), ನಿಟ್ಟನ್ ಕಿರ್ಟಾನೆ (ಟೆನಿಸ್) ಮತ್ತು ಮ್ಯಾನುಯೆಲ್ ಫ್ರೆಡ್ರಿಕ್ಸ್ (ಹಾಕಿ).