ತನ್ನ ಉತ್ತರಾಧಿಕಾರಿಯ ಹೆಸರು ಘೋಷಿಸಿದ ಡೇವಿಡ್ ವಾರ್ನರ್… ಇನ್ಮುಂದೆ ಈತನೇ ಆಸೀಸ್ ತಂಡದ ಓಪನರ್!

Australia Opener after David Warner: ಆಸ್ಟ್ರೇಲಿಯಾದ ಅನುಭವಿ ಓಪನರ್ ಡೇವಿಡ್ ವಾರ್ನರ್ ಅವರು ಪಂದ್ಯದ ಸುದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದ ಬಳಿಕ, ಆ ಸ್ಥಾನದಲ್ಲಿ ಮಾರ್ಕಸ್ ಹ್ಯಾರಿಸ್ ಅವರನ್ನು ನೋಡಬೇಕೆಂದಿದ್ದಾರೆ.

Written by - Bhavishya Shetty | Last Updated : Dec 26, 2023, 11:44 PM IST
    • ಆಸ್ಟ್ರೇಲಿಯಾದ ಅದ್ಭುತ ಆರಂಭಿಕ ಮತ್ತು ಮಾಜಿ ಉಪನಾಯಕ ಡೇವಿಡ್ ವಾರ್ನರ್
    • ಟೆಸ್ಟ್ ಸರಣಿಯ ಬಳಿಕ ವಿದಾಯ ಹೇಳುವುದಾಗಿ ಈಗಾಗಲೇ ಘೋಷಿಸಿದ್ದರು
    • ಆಸ್ಟ್ರೇಲಿಯಾ ತಂಡದ ಆರಂಭಿಕ ಜವಾಬ್ದಾರಿಯನ್ನು ಯಾರು ವಹಿಸುತ್ತಾರೆ?
ತನ್ನ ಉತ್ತರಾಧಿಕಾರಿಯ ಹೆಸರು ಘೋಷಿಸಿದ ಡೇವಿಡ್ ವಾರ್ನರ್… ಇನ್ಮುಂದೆ ಈತನೇ ಆಸೀಸ್ ತಂಡದ ಓಪನರ್! title=
david warner

Australia Opener after David Warner: ಆಸ್ಟ್ರೇಲಿಯಾದ ಅದ್ಭುತ ಆರಂಭಿಕ ಮತ್ತು ಮಾಜಿ ಉಪನಾಯಕ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ನಂತರ ಈ ಸ್ವರೂಪಕ್ಕೆ ವಿದಾಯ ಹೇಳುವುದಾಗಿ ಈಗಾಗಲೇ ಘೋಷಿಸಿದ್ದರು. ಹೀಗಾಗಿ ಇವರ ನಂತರದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಜವಾಬ್ದಾರಿಯನ್ನು ಯಾರು ವಹಿಸುತ್ತಾರೆ ಎಂಬುದನ್ನು ಸ್ವತಃ ವಾರ್ನರ್ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: “ನಾನು ವಿಚ್ಛೇದನ ಪಡೆಯುತ್ತಿದ್ದೇನೆ..”- ಐಶ್ವರ್ಯಾಗೆ ಡಿವೋರ್ಸ್ ನೀಡಲು ಕಾರಣ ಹೇಳಿದ ಅಭಿಷೇಕ್

ಆಸ್ಟ್ರೇಲಿಯಾದ ಅನುಭವಿ ಓಪನರ್ ಡೇವಿಡ್ ವಾರ್ನರ್ ಅವರು ಪಂದ್ಯದ ಸುದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದ ಬಳಿಕ, ಆ ಸ್ಥಾನದಲ್ಲಿ ಮಾರ್ಕಸ್ ಹ್ಯಾರಿಸ್ ಅವರನ್ನು ನೋಡಬೇಕೆಂದಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಟೆಸ್ಟ್‌ಗಳ ಸರಣಿಯು ಟೆಸ್ಟ್ ಮಾದರಿಯಲ್ಲಿ ಅವರ ಕೊನೆಯ ಸರಣಿಯಾಗಿದೆ ಎಂದು ವಾರ್ನರ್ ಈಗಾಗಲೇ ಹೇಳಿದ್ದಾರೆ.

“ಇದು ಕಷ್ಟ. ನಿಸ್ಸಂಶಯವಾಗಿ ಎಲ್ಲವೂ ಆಯ್ಕೆದಾರರನ್ನು ಅವಲಂಬಿಸಿರುತ್ತದೆ. ನನ್ನ ಅಭಿಪ್ರಾಯವನ್ನು ಕೇಳಿದರೆ, ದೀರ್ಘಕಾಲದಿಂದ ಸ್ಪರ್ಧಿಯಾಗಿರುವ ಮತ್ತು ದೀರ್ಘಕಾಲದವರೆಗೆ ತಂಡದೊಂದಿಗೆ ಇರುವ ಆಟಗಾರನ ಹೆಸರನ್ನು ತೆಗೆದುಕೊಳ್ಳುತ್ತೇನೆ. ಆ ಸ್ಥಾನಕ್ಕೆ ನನ್ನ ಪ್ರಕಾರ ಹ್ಯಾರಿ (ಹ್ಯಾರಿಸ್) ಉತ್ತಮ” ಎಂದಿದ್ದಾರೆ.

ಇದನ್ನೂ ಓದಿ: ಒಂದೇ ಇನ್ನಿಂಗ್ಸ್’ನಲ್ಲಿ ಇಬ್ಬರು ನಾಯಕರ ದಾಖಲೆ ಮುರಿದ ಕೊಹ್ಲಿ: ಈ ವಿಭಾಗದಲ್ಲಿ ನಂ.1

2018ರಲ್ಲಿ ಪಾದಾರ್ಪಣೆ ಮಾಡಿದ ನಂತರ, ಮಾರ್ಕಸ್ ಹ್ಯಾರಿಸ್ 14 ಟೆಸ್ಟ್‌’ಗಳಲ್ಲಿ 25.29 ಸರಾಸರಿಯಲ್ಲಿ 607 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 3 ಅರ್ಧ ಶತಕಗಳನ್ನು ಸಹ ಬಾರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News