ಕಾಮನ್ ವೆಲ್ತ್ ಕ್ರೀಡಾಕೂಟ: ಹೀನಾ ಸಿಧುಗೆ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ

    

Last Updated : Apr 10, 2018, 12:27 PM IST
ಕಾಮನ್ ವೆಲ್ತ್ ಕ್ರೀಡಾಕೂಟ: ಹೀನಾ ಸಿಧುಗೆ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ  title=

ನವದೆಹಲಿ: ಕಾಮನ್ವೆಲ್ತ್ ಕ್ರೀಡಾಕೂಟದ 2018 ರ ಆರನೇ ದಿನದಂದು ಹೀನಾ ಸಿಧು  ಮಹಿಳಾ ವಿಭಾಗದ  25 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಮಂಗಳವಾರ ಚಿನ್ನದ ಪದಕ ಪಡೆದಿದ್ದಾರೆ. ಆ ಮೂಲಕ ಭಾರತಕ್ಕೆ ಹನ್ನೊಂದನೆಯ ಚಿನ್ನದ ಪದಕವನ್ನು ತಂದುಕೊಟ್ಟರು.

ಭಾನುವಾರದಂದು ಮಹಿಳಾ 10 ಮಿ ಏರ್ ಪಿಸ್ತೂಲ್ ಸಮಾರಂಭದಲ್ಲಿ ಈಗಾಗಲೇ ಬೆಳ್ಳಿ ಪದಕ ಗೆದ್ದಿದ್ದ ಹೀನಾ. ಈ ಭಾರಿ ಚಿನ್ನವನ್ನು ಗೆಲ್ಲುವುದರ ಮೂಲಕ ತಮ್ಮ ಸ್ಥಾನವನ್ನು ಉತ್ತಮ ಪಡಿಸಿಕೊಂಡರು. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಎಲೆನಾ ಗಾಲಿಯಾಬೊವಿಚ್ 35 ಪಾಯಿಂಟ್ಗಳೊಂದಿಗೆ ಎರಡನೇ ಸ್ಥಾನ ಪಡೆದು ಮತ್ತು ಬೆಳ್ಳಿಯನ್ನು ತಮ್ಮದಾಗಿಸಿಕೊಂಡರೆ, ಇನ್ನೊಂದೆಡೆಗೆ ಮಲೇಷ್ಯಾದ ಅಲಿಯಾ ಸಜಾನ ಅಝಾಹರಿಗೆ 26 ಪಾಯಿಂಟ್ಗಳೊಂದಿಗೆ ಕಂಚಿನ ಪದಕವನ್ನು ಪಡೆದರು.

Trending News