CWG 2022 Women Hockey: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರ 10 ನೇ ದಿನವಾದ ಇಂದು, ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಇತಿಹಾಸ ಬರೆದಿದೆ. ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ.
ಭಾರತ ಮಹಿಳಾ ಹಾಕಿ ತಂಡ 16 ವರ್ಷಗಳ ಬಳಿಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದೆ. ಭಾರತ ಮಹಿಳಾ ಹಾಕಿ ತಂಡ ಈ ಹಿಂದೆ 2006ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಕಂಚಿನ ಪದಕಕ್ಕಾಗಿ ನಡೆದ ಹಾಕಿ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 2-1 ರಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿ ಕಂಚಿನ ಪದಕವನ್ನು ವಶಪಡಿಸಿಕೊಂಡಿದೆ.
ಗೆಲುವಿನ ಬಳಿಕ ಡಾನ್ಸ್ ಆಡುವ ಮೂಲಕ ಸಂಭ್ರಮಾಚರಿಸಿದ ತಂಡ
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿನ ಈ ಜಬರ್ದಸ್ತ್ ಗೆಲುವಿನ ಬಳಿಕ ಭಾರತೀಯ ಮಹಿಳಾ ಹಾಕಿ ತಂಡ ಸಂಭ್ರಮಾಚರಿಸಿದ ರೀತಿ ನೋಡುವಂತಿತ್ತು. ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸಂಭ್ರಮಾಚರಣೆಯಲ್ಲಿ ತೊಡಗಿರುವುದನ್ನು ನೀವು ಗಮನಿಸಬಹುದು. ವರ್ಷ 1997 ರಲ್ಲಿ ಬಿಡುಗಡೆಯಾದ ಬಾಲಿವುಡ್ ನ 'ದಸ್' ಚಿತ್ರದ 'ಸುನೋ ಗೌರ್ ಸೆ ದುನಿಯಾವಾಲೋ, ಬುರಿ ನಝರ್ ನ ಹಮ್ ಪೆ ಡಾಲೋ' ಹಾಡಿಗೆ ಭಾರತೀಯ ವನಿತೆಯರು ಹೆಜ್ಜೆ ಹಾಕಿ ಸಂಭ್ರಮಾಚರಣೆ ನಡೆಸಿದ್ದಾರೆ.
#CWG2022 : ब्रॉंज़ मेडल जीतने के बाद महिला हॉकी टीम का जश्न, देखें ये वीडियो #CommonwealthGames22 #Hockey @kiri_chopra pic.twitter.com/NXRTUnqKOF
— Zee News (@ZeeNews) August 7, 2022
ಇದನ್ನೂ ಓದಿ-CWG 2022: ಪ್ಯಾರಾ ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾವಿನಾಬೆನ್ ಪಟೇಲ್
ಮಹಿಳಾ ಹಾಕಿತಂಡದ ಕಮಾಲ್
ಕಾಮನ್ವೆಲ್ತ್ ಕ್ರೀಡಾಕೂಟ 2022ರ ಕಂಚಿನ ಪದಕಕ್ಕಾಗಿ ನಡೆದ ಈ ಪಂದ್ಯದಲ್ಲಿ ಭಾರತೀಯ ತಂಡ ಅಂತಿಮ ಹಂತದವರೆಗೂ ಕೂಡ ತನ್ನ ಎದುರಾಳಿ ತಂಡದ ಮೇಲೆ ಪಟ್ಟನ್ನು ಸಡಿಲುಗೊಳಿಸಲೇ ಇಲ್ಲ. ಆದರೆ, ಕೊನೆಯ 30 ಸೆಕೆಂಡ್ ಗೂ ಕಡಿಮೆ ಅವಧಿ ಇರುವಾಗ ಎದುರಾಳಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ನೀಡಿತು. ಇದು ನಂತರ ಪೆನಾಲ್ಟಿ ಸ್ಟ್ರೋಕ್ ಗೆ ಕಾರಣವಾಯಿತು ಹಾಗೂ ಎದುರಾಳಿ ತಂಡದ ಒಲಿವಿಯಾ ಮೇರಿ ನ್ಯೂಜಿಲ್ಯಾಂಡ್ ತಂಡಕ್ಕೆ ಸ್ಕೋರ್ ಮೇಕಪ್ ಮಾಡಿಸಿಯೇ ಬಿಟ್ಟಿದ್ದಾರೆ. ಇದಾದ ಬಳಿಕ ಟೈ ಆದ ಪಂದ್ಯ ಶೂಟ್ ಔಟ್ ಗೆ ಜಾರಿತು. ಈ ವೇಳೆ ಅತ್ಯುತ್ತಮ ಪ್ರದರ್ಶನ ಮೆರೆದ ಭಾರತೀಯ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟ್ ಔಟ್ ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 2-1 ಅಂತರದಿಂದ ಸೋಲಿಸಿತು.
ಇದನ್ನೂ ಓದಿ-CWG 2022: ಫೈನಲ್ನಲ್ಲಿ ಪಾಕಿಸ್ತಾನದ ಕುಸ್ತಿಪಟುವನ್ನು ಮಣಿಸಿ ಚಿನ್ನ ಗೆದ್ದ ನವೀನ್..!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.