CWG 2022: ಭಾರತೀಯ ಪುರುಷರ ತಂಡದ ಕಮಾಲ್ ! ಲಾನ್ ಬೌಲ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ

Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ ಲಾನ್ ಬೌಲ್ಸ್ ಪಂದ್ಯಾವಳಿಯಲ್ಲಿ ಶನಿವಾರ ಚಿನ್ನದ ಪದಕದ ಪಂದ್ಯದಲ್ಲಿ ಭಾರತೀಯ ಪುರುಷರ ತಂಡ ಉತ್ತರ ಐರ್ಲೆಂಡ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ. ಈ ಪಂದ್ಯದಲ್ಲಿ ಉತ್ತರ ಐರ್ಲೆಂಡ್ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡರೆ, ಭಾರತೀಯ ತಂಡ ಬೆಳ್ಳಿಯ ಪದಕಕ್ಕೆ ತೃಪ್ತಿ ಪಡೆದುಕೊಂಡಿದೆ. ವಿಕ್ಟೋರಿಯಾ ಪಾರ್ಕ್, ರಾಯಲ್ ಲಿಮಿಂಗ್ಟನ್ ಸ್ಪಾನಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಸುನಿಲ್ ಬಹದ್ದೂರ್, ನವನೀತ್ ಸಿಂಗ್, ಚಂದನ್ ಕುಮಾರ್ ಸಿಂಗ್ ಮತ್ತು ದಿನೇಶ್ ಕುಮಾರ್ ಅವರನ್ನೊಳಗೊಂಡ ತಂಡ ಐರ್ಲೆಂಡ್ ತಂಡದ ವಿರುದ್ಧ ಸೋಲನ್ನು ಅನುಭವಿಸಿದೆ.  

Written by - Nitin Tabib | Last Updated : Aug 6, 2022, 09:33 PM IST
  • ಕಾಮನ್ವೆಲ್ತ್ ಕ್ರೀಡಾಕೂಟದ ಲಾನ್ ಬೌಲ್ಸ್ ಫೈನಲ್ ನಲ್ಲಿ ಭಾರತೀಯ ಪುರುಷರ ತಂಡ
  • ಶನಿವಾರ ಚಿನ್ನದ ಪದಕಕ್ಕಾಗಿ ಇಳಿದ ಐರ್ಲೆಂಡ್ ತಂಡದ ವಿರುದ್ಧ ಸೋಲನ್ನು ಅನುಭವಿಸಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ.
CWG 2022: ಭಾರತೀಯ ಪುರುಷರ ತಂಡದ ಕಮಾಲ್ ! ಲಾನ್ ಬೌಲ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ title=
Commonwealth Games 2022

Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ  ಲಾನ್ ಬೌಲ್ಸ್ ಫೈನಲ್ ನಲ್ಲಿ ಭಾರತೀಯ ಪುರುಷರ ತಂಡ ಶನಿವಾರ ಚಿನ್ನದ ಪದಕಕ್ಕಾಗಿ ಇಳಿದ ಐರ್ಲೆಂಡ್ ತಂಡದ ವಿರುದ್ಧ ಸೋಲನ್ನು ಅನುಭವಿಸಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಸುನಿಲ್ ಬಹದ್ದೂರ್, ನವನೀತ್ ಸಿಂಗ್, ಚಂದನ್ ಕುಮಾರ್ ಸಿಂಗ್ ಮತ್ತು ದಿನೇಶ್ ಕುಮಾರ್ ಅವರನ್ನೊಳಗೊಂಡ ತಂಡ ಐರ್ಲೆಂಡ್ ತಂಡದ ವಿರುದ್ಧ 5-18 ಅಂಕಗಳಿಂದ ಸೋಲನ್ನು ಅನುಭವಿಸಿದೆ.

ಇದನ್ನೂ ಓದಿ-CWG 2022: ಪಾಕ್ ಕುಸ್ತಿಪಟುವನ್ನು ಸದೆಬಡಿದು ಭಾರತಕ್ಕೆ ಬೆಳ್ಳಿ ಪದಕ ಖಚಿತಪಡಿಸಿದ ರವಿ ದಹಿಯಾ

ಭಾರತೀಯ ಪುರುಷರ ತಂಡದ ಕಮಾಲ್ 
ಇದಕ್ಕೂ ಮೊದಲು ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 2022ರಲ್ಲಿ ಭಾರತೀಯ ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದು ಇತಿಹಾಸ ರಚಿಸಿದೆ. ಇದಾದ ಬಳಿಕ ಇದು ಲಾನ್ ಬೌಲ್ಸ್ ನಲ್ಲಿ ಭಾರತೀಯ ತಂಡದ ಎರಡನೇ ಐತಿಹಾಸಿಕ ಪದಕವಾಗಿದೆ. ಉತ್ತರ ಐರ್ಲೆಂಡ್ ತಂಡಕ್ಕೆ ಕಾಮನ್ ವೆಲ್ತ್ ಕ್ರೀಡಾಕೂಟದ ಲಾನ್ ಬೌಲ್ಸ್ ಪಂದ್ಯಾವಳಿಯಲ್ಲಿ ಇದು ಐದನೇ ಚಿನ್ನದ ಪದಕವಾಗಿದೆ ಹಾಗೂ 1998 ರ ಬಳಿಕ ಪುರುಷರ ತಂಡದ ಎರಡನೇ ಪದಕವಾಗಿದೆ.

ಇದನ್ನೂ ಓದಿ-CWG 2022 : ಅಥ್ಲೆಟಿಕ್ಸ್‌ನಲ್ಲಿ ಅವಿನಾಶ್ ಸೇಬಲ್ ಗೆ ಬೆಳ್ಳಿ ಪದಕ! 

ಲಾನ್ ಬೌಲ್ಸ್ ಪಂದ್ಯಾವಳಿ ಭಾರತಕ್ಕೆ ಬೆಳ್ಳಿ 
ಇಂದಿನ ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭ ಕಂಡ ಉತ್ತರ ಐರ್ಲೆಂಡ್ ತಂದ ನಾಲ್ಕನೇ ಸುತ್ತಿನ ಅಂತ್ಯದ ವೇಳೆಗೆ 7-0ಯಿಂದ ಮುನ್ನಡೆ ಸಾಧಿಸುತ್ತು. ನಂತರ ಐದನೇ ಸುತ್ತಿನಲ್ಲಿ ಭಾರತೀಯ ತಂಡ ತನ್ನ ಮೊದಲ ಅಂಕವನ್ನು ಗಳಿಸಿದೆ. ಆರನೇ ಸುತ್ತಿನ ಅಂತ್ಯದ ವೇಳೆಗೆ ಉತ್ತರ ಐರ್ಲೆಂಡ್ ತಂಡ 7-2 ರಿಂದ ಮುಂದಿತ್ತು. 11 ನೇ ಸುತ್ತಿನ ಅಂತ್ಯದಲ್ಲಿ ಉತ್ತರ ಐರ್ಲೆಂಡ್ ತಂಡ 13-5 ರಿಂದ ಭಾರತವನ್ನು ಸೋಲಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News