CWG 2018: ಭಾರತಕ್ಕೆ ಮೊದಲ ಚಿನ್ನ, ಹೊಸ ದಾಖಲೆ ಬರೆದ ಮೀರಾಬಾಯಿ ಚಾನು

ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ 48 ಕೆ.ಜಿ ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡ ಭಾರತದ ಮೀರಾಬಾಯಿ ಚಾನು.  

Last Updated : Apr 5, 2018, 12:51 PM IST
CWG 2018: ಭಾರತಕ್ಕೆ ಮೊದಲ ಚಿನ್ನ, ಹೊಸ ದಾಖಲೆ ಬರೆದ ಮೀರಾಬಾಯಿ ಚಾನು title=

ನವದೆಹಲಿ: ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21 ನೇ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಮೀರಾಬಾಯಿ ಚಾನು ಭಾರತದ ಪರ ಮೊದಲ ಚಿನ್ನ ಗೆದ್ದಿದ್ದಾರೆ.  48 ಕೆ.ಜಿ ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಒಟ್ಟು 196 ಕೆ.ಜಿ. ಭಾರ ಎತ್ತುವ ಮೂಲಕ ಹೊಸ ದಾಖಲೆ ಕೂಡ ಬರೆದಿದ್ದಾರೆ. ಇದಕ್ಕೂ ಮೊದಲು ಕರ್ನಾಟಕದ ಗುರುರಾಜ್ ಪುರುಷರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟರು.

2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದ ಚಾನು, 48 ಕೆ.ಜಿ ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬಲಿಷ್ಠ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಅವರ ಅತ್ಯುತ್ತಮ ವೈಯಕ್ತಿಕ ಪ್ರದರ್ಶನ 194 ಕೆಜಿ. ಈ ಸಂದರ್ಭದಲ್ಲಿ ಅವರ ಹತ್ತಿರದ ಎದುರಾಳಿಗಿಂತ 10 ಕೆಜಿ ಹೆಚ್ಚು, ಅಂದರೆ 196 ಕೆ.ಜಿ. ಭಾರ ಎತ್ತುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕ ಪಡೆದರು. 

ಈ ವಿಭಾಗದಲ್ಲಿ ಭಾಗವಹಿಸಿರುವ ಯಾವುದೇ ಸ್ಪರ್ಧಿಯು 180 ಕಿಲೊಗಳನ್ನು ಮೀರಿರಲಿಲ್ಲ. ಚಾನು ಅವರ ಹತ್ತಿರದ ಪ್ರತಿಸ್ಪರ್ಧಿ ಕೆನಡಾದ ಅಮಂಡಾ ಬ್ರಾಡೋಕ್, ಅವರ ಅತ್ಯುತ್ತಮ ವೈಯಕ್ತಿಕ ಪ್ರದರ್ಶನ 173 ಕೆಜಿ.

Trending News