CSKಯ ಆಕರ್ಷಣೆ ಧೋನಿಯಾದ್ರೂ ಅವರಿಗಿಂತ ಅತಿ ಹೆಚ್ಚು ಸಂಬಳ ಪಡೆಯುತ್ತಾರೆ ತಂಡದ ಈ 3 ಸ್ಟಾರ್ ಕ್ರಿಕೆಟಿಗರು

which cricketer has highest salary than ms dhoni in ipl: ನಾವಿಂದು ಈ ವರದಿಯಲ್ಲಿ ಚೆನ್ನೈ ಸೂಪರ್ ನಾಯಕ ಎಂ ಎಸ್ ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ತಂಡದ ಮೂವರು ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Mar 12, 2024, 01:51 PM IST
    • ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪ್ರಾರಂಭಕ್ಕೆ ದಿನಗಣನೆ
    • ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಸೀಸನ್ ಪ್ರಾರಂಭ
    • ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಬಗ್ಗೆ ಮಾಹಿತಿ
CSKಯ ಆಕರ್ಷಣೆ ಧೋನಿಯಾದ್ರೂ ಅವರಿಗಿಂತ ಅತಿ ಹೆಚ್ಚು ಸಂಬಳ ಪಡೆಯುತ್ತಾರೆ ತಂಡದ ಈ 3 ಸ್ಟಾರ್ ಕ್ರಿಕೆಟಿಗರು title=
Ms Dhoni

Indian Premier League: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪ್ರಾರಂಭಕ್ಕೆ ಇನ್ನೇನು 10 ದಿನಗಳಷ್ಟೇ ಬಾಕಿ ಇದೆ. ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಸೀಸನ್ ಪ್ರಾರಂಭವಾಗಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

ಇದನ್ನೂ ಓದಿ: ಐಪಿಎಲ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್ ಶಾಕ್..! ಪಂದ್ಯದಿಂದ ಹೊರಗುಳಿಯಲಿದ್ದಾರೆ ನಂಬರ್‌ ಒನ್‌ ಆಟಗಾರ

ಲೀಗ್‌’ನ ಅತ್ಯಂತ ಪ್ರಸಿದ್ಧ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಆಡಲಿದೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ಚೆನ್ನೈ ಸೂಪರ್ ನಾಯಕ ಎಂ ಎಸ್ ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ತಂಡದ ಮೂವರು ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ನ್ಯೂಜಿಲೆಂಡ್‌’ನ ಡೇರಿಲ್ ಮಿಚೆಲ್ ಐಪಿಎಲ್ 2024ರಲ್ಲಿ 14 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ಧೋನಿ ಸಂಭಾವನೆಗಿಂತ 2 ಕೋಟಿ ಹೆಚ್ಚು.

ಮತ್ತೊಬ್ಬ ಸ್ಟಾರ್ ಆಟಗಾರ ಭಾರತದ ವೇಗಿ ದೀಪಕ್ ಚಹಾರ್. ಇವರಿಗೆ ಕೂಡ ಸಿ ಎಸ್ ಕೆ ಫ್ರಾಂಚೈಸಿ 14 ಕೋಟಿ ನೀಡಿ ಖರೀದಿಸಿದೆ. ಚಹಾರ್ ಆಡಿರುವ 68 ಪಂದ್ಯಗಳಲ್ಲಿ 71 ವಿಕೆಟ್‌ ಕಬಳಿಸಿ, ತಂಡದ ಪ್ರಮುಖ ವೇಗಿ ಎಂದೆನಿಸಿಕೊಂಡಿದ್ದಾರೆ.

ಇದನ್ನೂ ಓದಿ:  IPL 2024: ಚೊಚ್ಚಲ IPLನಲ್ಲಿ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ ಪಡೆದ ಸಂಬಳವೆಷ್ಟು ಗೊತ್ತಾ? ಈಗೆಷ್ಟಾಗಿದೆ?

ಅಗ್ರ ಗಳಿಕೆಯ ಆಟಗಾರರ ಹೆಸರಲ್ಲಿ ರವೀಂದ್ರ ಜಡೇಜಾ ಕೂಡ ಸೇರಿದ್ದಾರೆ. ಜಡೇಜಾ ಅವರಿಗೆ ಬರೋಬ್ಬರಿ 16 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಟಿ 20 ಸ್ವರೂಪದಲ್ಲಿ ಅತ್ಯಮೂಲ್ಯ ಆಲ್‌ರೌಂಡರ್‌’ಗಳಲ್ಲಿ ಜಡೇಜಾ ಕೂಡ ಒಬ್ಬರು,

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News