ನನ್ನ ಮದುವೆ ಇದೆ… ನನಗೆ ರಜೆ ಕೊಡಿ: ಬಿಸಿಸಿಐ ಮುಂದೆ ವಿಶೇಷ ಮನವಿಯಿಟ್ಟ ಟೀಂ ಇಂಡಿಯಾದ ಸ್ಟಾರ್ ವೇಗಿ

Mukesh Kumar Marriage: ಗುವಾಹಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಮುಖೇಶ್ ಕುಮಾರ್ ಬದಲಿಗೆ ಅವೇಶ್ ಖಾನ್ ಅವರನ್ನು ಪ್ಲೇಯಿಂಗ್ ಇಲೆವೆನ್‌’ನ ಭಾಗವಾಗಿ ಮಾಡಲಾಗಿದೆ. ಇದಕ್ಕೂ ಮುನ್ನ ಎರಡೂ ಟಿ20ಗಳಲ್ಲಿ ಮುಖೇಶ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಲಾಗಿತ್ತು.

Written by - Bhavishya Shetty | Last Updated : Nov 28, 2023, 09:11 PM IST
    • ಭಾರತದ ಸ್ಟಾರ್ ವೇಗಿ ಮುಖೇಶ್ ಕುಮಾರ್
    • ಮುಖೇಶ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ
    • ಮೂರನೇ ಪಂದ್ಯಕ್ಕೂ ಮುನ್ನ ಮದುವೆಗಾಗಿ ಮುಕೇಶ್ ಬಿಸಿಸಿಐನಿಂದ ರಜೆ ಪಡೆದಿದ್ದಾರೆ
ನನ್ನ ಮದುವೆ ಇದೆ… ನನಗೆ ರಜೆ ಕೊಡಿ: ಬಿಸಿಸಿಐ ಮುಂದೆ ವಿಶೇಷ ಮನವಿಯಿಟ್ಟ ಟೀಂ ಇಂಡಿಯಾದ ಸ್ಟಾರ್ ವೇಗಿ title=
Mukesh Kumar

Mukesh Kumar Marriage: ಭಾರತದ ಸ್ಟಾರ್ ವೇಗಿ ಮುಕೇಶ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಮದುವೆಗಾಗಿ ಮುಕೇಶ್ ಬಿಸಿಸಿಐನಿಂದ ರಜೆ ಪಡೆದಿದ್ದಾರೆ. ಮುಖೇಶ್ ಬದಲಿಗೆ ದೀಪಕ್ ಚಹಾರ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಡಿಸೆಂಬರ್ 1ರ ಶುಕ್ರವಾರ ರಾಯ್‌ಪುರದಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಮುಖೇಶ್ ಕಮ್ ಬ್ಯಾಕ್ ಮಾಡಲಿದ್ದಾರೆ.

ಇದನ್ನೂ ಓದಿ: ಬೆಕ್ಕುಗಳು ‘ಮಿಯಾಂವ್’ ಅನ್ನುತ್ತಲ್ಲಾ… ಅದರ ಅರ್ಥವೇನು ಗೊತ್ತಾ? ಏನಕ್ಕೆ ಹಾಗೆ ಕರೆಯುತ್ತೆ?

ಗುವಾಹಟಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಮುಖೇಶ್ ಕುಮಾರ್ ಬದಲಿಗೆ ಅವೇಶ್ ಖಾನ್ ಅವರನ್ನು ಪ್ಲೇಯಿಂಗ್ ಇಲೆವೆನ್‌’ನ ಭಾಗವಾಗಿ ಮಾಡಲಾಗಿದೆ. ಇದಕ್ಕೂ ಮುನ್ನ ಎರಡೂ ಟಿ20ಗಳಲ್ಲಿ ಮುಖೇಶ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಲಾಗಿತ್ತು.

ಮುಕೇಶ್ ಕುಮಾರ್ ಕುರಿತು ಹೇಳಿಕೆ ನೀಡಿರುವ ಬಿಸಿಸಿಐ, "ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಗೂ ಮುನ್ನ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ವೇಗದ ಬೌಲರ್ ಮುಕೇಶ್ ಕುಮಾರ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ರಾಯಪುರದಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಸರಣಿಯ ಉಳಿದ ಪಂದ್ಯಗಳಿಗೆ ವೇಗಿ ದೀಪಕ್ ಚಾಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ” ಎಂದಿದೆ.

ಮುಖೇಶ್ ಕುಮಾರ್ ವರಿಸಲಿರುವ ವಧು ಯಾರು?

ಮುಕೇಶ್ ಕುಮಾರ್ ಗೋರಖ್‌’ಪುರದಲ್ಲಿ ವಿವಾಹವಾಗಲಿದ್ದಾರೆ. ಚಾಪ್ರಾದ ಬನಿಯಾಪುರ ಬೇರುಯಿ ಗ್ರಾಮದ ನಿವಾಸಿಯಾಗಿರುವ ದಿವ್ಯಾ ಸಿಂಗ್ ಎಂಬವರನ್ನು ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಖೇಶ್ ಕುಮಾರ್ ಎಲ್ಲಾ ಮೂರು ಮಾದರಿಗಳಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ ಎಂಬುದು ಗಮನಾರ್ಹ. ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಮತ್ತು ನಂತರ ODIಗೆ ಪಾದಾರ್ಪಣೆ ಮಾಡಿದರು. ಇದರ ನಂತರ ಆಗಸ್ಟ್‌’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಅಂತರರಾಷ್ಟ್ರೀಯ ಪಂದ್ಯಕ್ಕೆ ಎಂಟ್ರಿ ಪಡೆದಿದ್ದಾರೆ.

ಇದನ್ನೂ ಓದಿ: “ವಿಕೆಟ್ ಪಡೆಯಲು ಬ್ಯಾಟರ್’ಗಳಿಗೆ ಶಮಿ ಹಣ ಕೊಡ್ತಾರೆ”- ಮಾಜಿ ಪತ್ನಿ ಹಸೀನ್ ಜಹಾನ್

ಇಲ್ಲಿಯವರೆಗೆ 1 ಟೆಸ್ಟ್, 3 ODI ಮತ್ತು 7 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕೈಕ ಟೆಸ್ಟ್‌’ನಲ್ಲಿ 2 ವಿಕೆಟ್ ಪಡೆದಿದ್ದಾರೆ. ಇದಲ್ಲದೆ ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಲಾ 4 ವಿಕೆಟ್ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News