Champions Trophy: ಟೀಂ ಇಂಡಿಯಾದ, ಪಾಕಿಸ್ತಾನ ಪ್ರವಾಸದ ಪ್ಲಾನ್‌ ಕ್ಯಾನ್ಸಲ್‌..! ಹಾಗಾದರೆ ಪಂದ್ಯ ನಡೆಯೋದು ಎಲ್ಲಿ..?

India-Pakistan Match: ಚಾಂಪಿಯನ್ಸ್‌ ಟ್ರೋಫಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾಕಿಸ್ತಾನ ತಂಡ ಲಾಹೋರ್‌ನಲ್ಲಿ ಹಣಿ ನಡೆಸಿತ್ತು. ಆದರೆ, ಇದೀಗ ಈ ಪಂದ್ಯ ಲಾಹೋರ್‌ನಲ್ಲಿ ನಡೆಯುವುದಿಲ್ಲ ಎನ್ನು ಸುದ್ದಿ ಕೇಳಿಬಂದಿದೆ. ಐಸಿಸಿ ಚಾಂಫಿಯನ್ಸ್‌ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ, ಬದಲಿಗೆ ಪಾಕಿಸ್ತಾನ ತಂಡ ಬಾರತಕ್ಕೆ ಪ್ರಯಾಣ ಬೆಳಸಲಿದೆ ಎಂದು ಮೂಲಗಳು ತಿಳಿಸಿವೆ.  

Written by - Zee Kannada News Desk | Last Updated : Jul 11, 2024, 12:12 PM IST
  • ಚಾಂಪಿಯನ್ಸ್‌ ಟ್ರೋಫಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾಕಿಸ್ತಾನ ತಂಡ ಲಾಹೋರ್‌ನಲ್ಲಿ ಹಣಿ ನಡೆಸಿತ್ತು.
  • ಪಾಕಿಸ್ತಾನ ತಂಡ ಬಾರತಕ್ಕೆ ಪ್ರಯಾಣ ಬೆಳಸಲಿದೆ ಎಂದು ಮೂಲಗಳು ತಿಳಿಸಿವೆ.
  • ಈ ಪಂದ್ಯಾವಳಿಯನ್ನು ಹೈಬ್ರಿಡ್‌ ರೀತಿಯಲ್ಲಿ ಆಯೋಜಿಸಲು ಭಾರತ ಆಗ್ರಹ ಮಾಡುತ್ತಿದೆ.
Champions Trophy: ಟೀಂ ಇಂಡಿಯಾದ, ಪಾಕಿಸ್ತಾನ ಪ್ರವಾಸದ ಪ್ಲಾನ್‌ ಕ್ಯಾನ್ಸಲ್‌..! ಹಾಗಾದರೆ ಪಂದ್ಯ ನಡೆಯೋದು ಎಲ್ಲಿ..? title=

India-Pakistan Match: ಚಾಂಪಿಯನ್ಸ್‌ ಟ್ರೋಫಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾಕಿಸ್ತಾನ ತಂಡ ಲಾಹೋರ್‌ನಲ್ಲಿ ಹಣಿ ನಡೆಸಿತ್ತು. ಆದರೆ, ಇದೀಗ ಈ ಪಂದ್ಯ ಲಾಹೋರ್‌ನಲ್ಲಿ ನಡೆಯುವುದಿಲ್ಲ ಎನ್ನು ಸುದ್ದಿ ಕೇಳಿಬಂದಿದೆ. ಐಸಿಸಿ ಚಾಂಫಿಯನ್ಸ್‌ ಟ್ರೋಫಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗುತ್ತಿಲ್ಲ, ಬದಲಿಗೆ ಪಾಕಿಸ್ತಾನ ತಂಡ ಬಾರತಕ್ಕೆ ಪ್ರಯಾಣ ಬೆಳಸಲಿದೆ ಎಂದು ಮೂಲಗಳು ತಿಳಿಸಿವೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ವರ್ಷ ಅಂದರೆ 2025ರ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಹೈಬ್ರಿಡ್‌ ರೀತಿಯಲ್ಲಿ ಆಯೋಜಿಸಲು ಭಾರತ ಆಗ್ರಹ ಮಾಡುತ್ತಿದೆ.

ಇದನ್ನೂ ಓದಿ: IND vs ZIM: ತಂಡ ಕಟ್ಟುವಲ್ಲಿ ಎಡವಿದ ಶುಭಮನ್‌, ಯಿಂಗ್‌ XI ನಿಂದ ಹೊರಬಿದ್ದ ಅಭಿಷೇಕ್‌ ಶರ್ಮಾ..!

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(PCB) ಸೋಮವಾರ, ಜುಲೈ 08 ರಂದು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ಇದಕ್ಕೆ ಐಸಿಸಿ ಮಂಡಳಿ ಒಪ್ಪಿಗೆ ನೀಡಿದರೆ ಮಾತ್ರ ಈ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಈ ಮುಂಚೆಯೂ ಭಾರತ ತಂಡ ಪಾಕಿಸ್ತಾನಕ್ಕೆ ಪಂದ್ಯವಳಿ ಆಡಲು ಹೋಗುತಿಲ್ಲ ಎನ್ನುವ ದೂರು ಕೇಳಿ ಬಂದಿತ್ತು. ಭಾರತ ತಂಡದ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದ ಪ್ರವಾಸವನ್ನು ಕೈಬಿಡಲಾಗಿತ್ತು. ಇದೇ ಕಾರಣದಿಂದ ಇದೀಗ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(BCCI) ತನ್ನ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಸುವಂತೆ ಐಸಿಸಿ  ಎದುರು ಬೇಡಿಕೆ ಇಡಲಿದೆ.

ಭಾರತ ಹಾಗೂ ಪಾಕಿಸ್ತಾನ ಸೇರಿ 8 ತಂಡಗಳು ಈ ಭಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸೆಣಸಾಡಲಿವೆ. 8 ತಂಡಗಳು ಸೇರಿ ಒಟ್ಟು 15 ಪಂದ್ಯಗಳನ್ನು ಆಡಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News