ಕೊಹ್ಲಿ, ರೋಹಿತ್ ಕೋಟಿ ಕೋಟಿ ಸಂಪಾದಿಸಿದ್ದು ಕ್ರಿಕೆಟ್’ನಿಂದಲ್ಲ… ಈ ಅಣ್ಣ-ತಂಗಿ ಹುಟ್ಟುಹಾಕಿದ ಕಂಪನಿಯ ಡೀಲ್’ನಿಂದ!

Virat Kohli and Rohit Sharma: ಬೃಹತ್ ನಿವ್ವಳ ಮೌಲ್ಯವನ್ನು ಹೊಂದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬ್ರ್ಯಾಂಡ್ ಡೀಲ್‌’ಗಳು ಮತ್ತು ಎಂಡಾರ್ಸ್‌ಮೆಂಟ್‌’ಗಳ ಮೂಲಕ ಸಂಪಾದನೆ ಮಾಡಿದ್ದಾರೆ. ಆದರೆ ಇವೆಲ್ಲದಕ್ಕೂ ಮೇಲಾಗಿ ಈ ಅಣ್ಣ ತಂಗಿ ಹುಟ್ಟು ಹಾಕಿದ ಕಂಪನಿಯ ಡೀಲ್’ನಿಂದ ಕೋಟಿ ಕೋಟಿ ಗಳಸಿವಂತಾಗಿದೆ.

Written by - Bhavishya Shetty | Last Updated : Nov 27, 2023, 06:46 PM IST
    • ವಿರಾಟ್ ಮತ್ತು ರೋಹಿತ್ ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.
    • ಡೀಲ್‌’ಗಳು ಮತ್ತು ಎಂಡಾರ್ಸ್‌ಮೆಂಟ್‌’ಗಳ ಮೂಲಕ ಸಂಪಾದನೆ ಮಾಡಿದ್ದಾರೆ
    • ಕಾರ್ನರ್‌ ಸ್ಟೋನ್ ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರಾರಂಭಿಸಿದ ಬಂಟಿ ಸಜ್ದೇಹ್
ಕೊಹ್ಲಿ, ರೋಹಿತ್ ಕೋಟಿ ಕೋಟಿ ಸಂಪಾದಿಸಿದ್ದು ಕ್ರಿಕೆಟ್’ನಿಂದಲ್ಲ… ಈ ಅಣ್ಣ-ತಂಗಿ ಹುಟ್ಟುಹಾಕಿದ ಕಂಪನಿಯ ಡೀಲ್’ನಿಂದ! title=
Virat Kohli and Rohit Sharma

Virat Kohli and Rohit Sharma: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರು ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಇಷ್ಟೊಂದು ಮೊತ್ತದ ಬೃಹತ್ ನಿವ್ವಳ ಮೌಲ್ಯವನ್ನು ಹೊಂದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬ್ರ್ಯಾಂಡ್ ಡೀಲ್‌’ಗಳು ಮತ್ತು ಎಂಡಾರ್ಸ್‌ಮೆಂಟ್‌’ಗಳ ಮೂಲಕ ಸಂಪಾದನೆ ಮಾಡಿದ್ದಾರೆ. ಆದರೆ ಇವೆಲ್ಲದಕ್ಕೂ ಮೇಲಾಗಿ ಈ ಅಣ್ಣ ತಂಗಿ ಹುಟ್ಟು ಹಾಕಿದ ಕಂಪನಿಯ ಡೀಲ್’ನಿಂದ ಕೋಟಿ ಕೋಟಿ ಗಳಸಿವಂತಾಗಿದೆ.

ಇದನ್ನೂ ಓದಿ: 700 ವರ್ಷಗಳ ಬಳಿಕ 5 ರಾಜಯೋಗ: ಈ ರಾಶಿಯ ಜನರ ಬಾಳಲ್ಲಿ ಬಂಪರ್ ಲಾಭ.. ಬಹುದೊಡ್ಡ ಆಸೆ ಈಡೇರುತ್ತೆ

ಬಂಟಿ ಮತ್ತು ರಿತಿಕಾ ಸಜ್ದೇಹ್ ಅವರು ವಿರಾಟ್ ಕೊಹ್ಲಿಗೆ ಕೋಟಿಗಟ್ಟಲೆ ಮೌಲ್ಯದ ಅನೇಕ ಎಂಡಾರ್ಸ್‌ಮೆಂಟ್ ಡೀಲ್‌ಗಳನ್ನು ಮಾಡಲು ಸಹಾಯ ಮಾಡಿದ್ದಾರೆ. ಉದಾಹರಣೆಗೆ ಅಡಿಡಾಸ್ ಮತ್ತು ಇತರ ಪ್ರಮುಖ ಬ್ರ್ಯಾಂಡ್‌’ಗಳೊಂದಿಗಿನ ಕೊಹ್ಲಿ ನಂಟು ಬೆಳೆಯುವಂತೆ ಮಾಡಿದ್ದಾರೆ.

2008ರಲ್ಲಿ ಬಂಟಿ ಸಜ್ದೇಹ್ ಅವರು ಕಾರ್ನರ್‌ ಸ್ಟೋನ್ ಸ್ಪೋರ್ಟ್ಸ್ ಅಂಡ್ ಎಂಟರ್‌ಟೈನ್‌ಮೆಂಟ್ ಪ್ರಾರಂಭಿಸಿದರು. ಈ ಕಂಪನಿಯಲ್ಲಿ ವಿರಾಟ್, ರೋಹಿತ್ ಅಲ್ಲದೆ, ಪಿವಿ ಸಿಂಧು, ಸಾನಿಯಾ ಮಿರ್ಜಾ, ಕುಲದೀಪ್ ಯಾದವ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ವಿಜಯ್ ದೇವರಕೊಂಡ ಹೀಗೆ ಅನೇಕ ಸೆಲೆಬ್ರಿಟಿಗಳು ಸಂಪರ್ಕ ಹೊಂದಿದ್ದಾರೆ.

ಟೋಫ್ಲರ್ ಪ್ರಕಾರ, ಬಂಟಿ ಸಜ್ದೇಹ್ ಮತ್ತು ರಿತಿಕಾ ಸಜ್ದೇಹ್ ಅವರ ಕಂಪನಿ ಕಾರ್ನರ್‌ಸ್ಟೋನ್ 150 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ. ಹಲವಾರು ಪ್ರತಿಷ್ಠಿತ ವ್ಯಕ್ತಿಗಳ ಜೊತೆ ಕಾರ್ಯ ನಿರ್ವಹಿಸುತ್ತಿರುವ ಈ ಕಂಪನಿ, ಕಳೆದ ಕೆಲವು ವರ್ಷಗಳಿಂದ ನಿರಂತರ ಆದಾಯವನ್ನು ಗಳಿಸುತ್ತಿದೆ.

ಇದನ್ನೂ ಓದಿ: ಡ್ಯಾನ್ಸರ್ ಆಗಿ ಕರಿಯರ್ ಆರಂಭಿಸಿದ್ದ ಈತ ಇಂದು ಬಾಲಿವುಡ್’ನ ಸೂಪರ್’ಸ್ಟಾರ್… 1000 ಕೋಟಿ ರೂ. ಸಂಭಾವನೆ ಪಡೆಯುವ ನಟ

ಅಂದಹಾಗೆ ಈ ಹಿಂದೆ ವಿರಾಟ್ ಕೊಹ್ಲಿಯ ಮ್ಯಾನೇಜರ್ ಆಗಿದ್ದ ರಿತಿಕಾ ಸಜ್ದೇಹ್, ಅವರು ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ವಿವಾಹವಾಗಿದ್ದಾರೆ, ಬಂಟಿ ಸಜ್ದೇಹ್ ರಿತಿಕಾ ಅವರ ಸಹೋದರ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News