Women’s Asia Cup 2022 Final: ಮಹಿಳಾ ಏಷ್ಯಾಕಪ್ ಗೆ ಕ್ಷಣಗಣನೆ ಶುರು: ಭಾರತದ ‘ಕನಸಿನ ಪಂದ್ಯ’ ವೀಕ್ಷಿಸಲು ಹೀಗೆ ಮಾಡಿ

ಹರ್ಮನ್‌ಪ್ರೀತ್ ಕೌರ್ 2022 ರ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ಮಹಿಳಾ ನಾಯಕಿಯಾಗಿದ್ದು, ಚಾಮರಿ ಅಥಾಪಥುಸ್ ಶ್ರೀಲಂಕಾ ಮಹಿಳಾ ನಾಯಕಿಯಾಗಿದ್ದಾರೆ. ಭಾರತದ ಮಹಿಳಾಮಣಿಗಳು ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ನ್ನು 74 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

Written by - Bhavishya Shetty | Last Updated : Oct 14, 2022, 11:52 PM IST
    • ಮಹಿಳಾ ಏಷ್ಯಾ ಕಪ್ 2022 ರ ಫೈನಲ್‌ ಹೋರಾಟ
    • ಭಾರತ ಮತ್ತು ಶ್ರೀಲಂಕಾ ತಂಡ ಸಜ್ಜು
    • ಅಕ್ಟೋಬರ್ 15ರಂದು ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ
Women’s Asia Cup 2022 Final: ಮಹಿಳಾ ಏಷ್ಯಾಕಪ್ ಗೆ ಕ್ಷಣಗಣನೆ ಶುರು: ಭಾರತದ ‘ಕನಸಿನ ಪಂದ್ಯ’ ವೀಕ್ಷಿಸಲು ಹೀಗೆ ಮಾಡಿ  title=
World Cup

ಭಾರತ ಮತ್ತು ಶ್ರೀಲಂಕಾದ ಆಟಗಾರ್ತಿಯರು ಮಹಿಳಾ ಏಷ್ಯಾ ಕಪ್ 2022 ರ ಫೈನಲ್‌ನಲ್ಲಿ ಹೋರಾಡಲು ಸಜ್ಜಾಗಿದ್ದಾರೆ. ಭಾರತ ಮಹಿಳಾ vs ಶ್ರೀಲಂಕಾ ಮಹಿಳಾ ಪಂದ್ಯವು ಅಕ್ಟೋಬರ್ 15 ರಂದು (ಶನಿವಾರ) ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿರುವ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: IND vs PAK: 15 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳಲಿದೆ ಟೀಂ ಇಂಡಿಯಾ! ಬಿಸಿಸಿಐ ನೀಡಿದೆಯೇ ಗ್ರೀನ್ ಸಿಗ್ನಲ್?

ಹರ್ಮನ್‌ಪ್ರೀತ್ ಕೌರ್ 2022 ರ ಮಹಿಳಾ ಏಷ್ಯಾ ಕಪ್‌ನಲ್ಲಿ ಭಾರತ ಮಹಿಳಾ ನಾಯಕಿಯಾಗಿದ್ದು, ಚಾಮರಿ ಅಥಾಪಥುಸ್ ಶ್ರೀಲಂಕಾ ಮಹಿಳಾ ನಾಯಕಿಯಾಗಿದ್ದಾರೆ. ಭಾರತದ ಮಹಿಳಾಮಣಿಗಳು ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್ ನ್ನು 74 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಶ್ರೀಲಂಕಾ ಆಟಗಾರರು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 1 ರನ್‌ಗಳಿಂದ ಸೋಲಿಸಿ ಪಂದ್ಯವನ್ನು ಗೆದ್ದಿದ್ದಾರೆ.

ಮಹಿಳೆಯರ ಏಷ್ಯಾ ಕಪ್ 2022 ರಲ್ಲಿ 7 ತಂಡಗಳಿತ್ತು. ಅವುಗಳೆಂದರೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಥೈಲ್ಯಾಂಡ್, ಬಾಂಗ್ಲಾದೇಶ, ಯುಎಇ ಮತ್ತು ಮಲೇಷ್ಯಾ. ಲೀಗ್ ಹಂತದಲ್ಲಿ, ಭಾರತ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 6 ರಲ್ಲಿ 5 ಪಂದ್ಯಗಳನ್ನು ಗೆದ್ದಿದ್ದಾರೆ.

ಇನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಪಂದ್ಯಾವಳಿಯ ಅಧಿಕೃತ ಪ್ರಸಾರಕವಾಗಿದೆ. ಡಿಸ್ನಿ+ ಹಾಟ್‌ಸ್ಟಾರ್ ಲೈವ್ ಸ್ಟ್ರೀಮಿಂಗ್ ಅನ್ನು ಪ್ರಸ್ತುತಪಡಿಸುತ್ತದೆ.

ಇದನ್ನೂ ಓದಿ: Team India: ಟೀಂ ಇಂಡಿಯಾದ ಗೆಲುವಿನ ನಾಗಾಲೋಟ: ಆಸ್ಟ್ರೇಲಿಯಾದ ಈ ದಾಖಲೆ ಉಡೀಸ್

ಭಾರತ ಮಹಿಳೆಯರ ತಂಡ ಹೀಗಿದೆ:

ಹರ್ಮನ್‌ಪ್ರೀತ್ ಕೌರ್ (ಕ್ಯಾ), ಸ್ಮೃತಿ ಮಂಧಾನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಸಬ್ಬಿನೇನಿ ಮೇಘನಾ, ರಿಚಾ ಘೋಷ್ (ವಿ.ಕೀ), ಸ್ನೇಹ ರಾಣಾ, ದಯಾಲನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್ , ರಾಧಾ ಯಾದವ್, ಕೆ.ಪಿ. ನವಗಿರೆ ರಿಸರ್ವ್ ಆಟಗಾರರು: ತಾನಿಯಾ ಸಪ್ನಾ ಭಾಟಿಯಾ, ಸಿಮ್ರಾನ್ ದಿಲ್ ಬಹದ್ದೂರ್

 

 

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News