ಕಾಮನ್ ವೆಲ್ತ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಒಲಿದ ಚಿನ್ನದ ಪದಕ

    

Last Updated : Apr 9, 2018, 08:49 PM IST
ಕಾಮನ್ ವೆಲ್ತ್ ಕ್ರೀಡಾಕೂಟ: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಒಲಿದ ಚಿನ್ನದ ಪದಕ  title=

ನವದೆಹಲಿ: ಲಂಡನ್ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆದ 21 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ  ಐದನೇ ದಿನದಂದು  ಚಿನ್ನದ ಪದಕವನ್ನು  ಗೆದ್ದುಕೊಂಡರು.

ಸಾತ್ವಿಕ್ ರಾಂಕಿ ರೆಡ್ಡಿ ಮತ್ತು ಚೈರಾಗ್ ಚಂದ್ರಶೇಖರ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್  ನಲ್ಲಿ ಪಂದ್ಯವನ್ನು ಸೋತ ನಂತರ ಸೈನಾ ನೆಹ್ವಾಲ್ ಮಿಶ್ರ ತಂಡದಲ್ಲಿ  ಚಿನ್ನ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದರು.

 ಸಾತ್ವಿಕ್ ರಾಂಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯ ಆರಂಭಿಕ ಪಂದ್ಯವು ಒಂದು ಗಂಟೆ ಮತ್ತು ಐದು ನಿಮಿಷಗಳ ಕಾಲ ನಡೆಯಿತು. ಇದರಲ್ಲಿ ಭಾರತದ  ಜೋಡಿಯು  21-2, 15-21, 21-15ರಲ್ಲಿ ಪೆಂಗ್ ಸೂನ್ ಚಾನ್ ಮತ್ತು ಲಿಯು ಯಿಂಗ್ ಗೋಹ್ ವಿರುದ್ಧ ಜಯಗಳಿಸಿದರು. ನಂತರ  ಕಿದಾಂಬಿ ಶ್ರೀಕಾಂತ್ ಅವರು 21-17, 21-14ರಲ್ಲಿ ಚೊಂಗ್ ವೀ ಲೀ ರನ್ನು ಸೋಲಿಸಿ  ದಿಗ್ಭ್ರಮೆಗೊಳಿಸಿದರು.

ಆದಾಗ್ಯೂ, ಪುರುಷರ ಡಬಲ್ಸ್ ತಂಡ ಚಿರಾಗ್ ಚಂದ್ರಶೇಖರ್ ಶೆಟ್ಟಿ ಮತ್ತು ಸಾತ್ವಿಕ್ ರಾಂಕಿ ರೆಡ್ಡಿ ಅವರು 15-21, 20-21ರಲ್ಲಿ ಮಲೇಶಿಯನ್ ಜೋಡಿ ವಿ ಶೆಮ್ ಗೋ ಮತ್ತು ವೀ ಕಿಯಾಂಗ್ ಟಾನ್ ವಿರುದ್ದ ಸೋಲು ಅನುಭವಿಸಿದರು.

2-1 ರ ಮುನ್ನಡೆಯೊಂದಿಗೆ ಭಾರತ ತಂಡವು ಇದ್ದಾಗ ಸೈನಾ ನೆಹ್ವಾಲ್ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ  ಸೈನಾ ಚೆಹಾ ವಿರುದ್ಧ 21-11, 19-21, 21-9 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ  ಭಾರತಕ್ಕೆ ಚಿನ್ನದ ಪದಕವನ್ನು ತಂದರು 

Trending News