ಎಬಿಡಿ-ಗೇಲ್‌ಗೆ ಆರ್‌ಸಿಬಿಯಿಂದ ಸಿಕ್ತು ʼಮರೆಯಲಾಗದ ಗೌರವʼ: ಭಾವುಕರಾದ ಆಟಗಾರರು

ಲೆಜೆಂಡರಿ ಬ್ಯಾಟ್ಸ್‌ಮನ್‌ಗಳೆಂದೆ ಖ್ಯಾತಿ ಪಡೆದ ಕ್ರಿಸ್‌ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ʼಹಾಲ್ ಆಫ್ ಫೇಮ್ʼ ಗೌರವವನ್ನ ನೀಡಿದೆ. ಇದು ಐಪಿಎಲ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫ್ರಾಂಚೈಸಿಯೊಂದು ತನ್ನ ಆಟಗಾರರಿಗೆ ನೀಡುತ್ತಿರುವ ಗೌರವವಾಗಿದೆ. 

Written by - Bhavishya Shetty | Last Updated : May 17, 2022, 02:45 PM IST
  • ಎಬಿಡಿ-ಗೇಲ್‌ಗೆ ʼಹಾಲ್ ಆಫ್ ಫೇಮ್ʼ ಗೌರವ
  • ಭಾವುಕರಾಗಿ ಸಂದೇಶ ರವಾನಿಸಿದ ಆಟಗಾರರು
  • ಆರ್‌ಸಿಬಿಯಿಂದ ಮೊದಲ ಬಾರಿಗೆ ಈ ಗೌರವ ಸಲ್ಲಿಕೆ
ಎಬಿಡಿ-ಗೇಲ್‌ಗೆ ಆರ್‌ಸಿಬಿಯಿಂದ ಸಿಕ್ತು ʼಮರೆಯಲಾಗದ ಗೌರವʼ: ಭಾವುಕರಾದ ಆಟಗಾರರು title=
Hall of Fame

ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕಿರುವ ಅಭಿಮಾನಿಗಳು ಬೇರೊಂದು ಟೀಂಗೆ ಇರಲು ಸಾಧ್ಯವಿಲ್ಲ. ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಅಭಿಮಾನಿಗಳನ್ನು ಹೊಂದಿರುವ ತಂಡ ಆರ್‌ಸಿಬಿ. ಇನ್ನು ಆರ್‌ಸಿಬಿಯ ಮೇಲೆ ಅಭಿಮಾನ ಹುಟ್ಟಲು ಮುಖ್ಯ ಕಾರಣರೆಂದರೆ ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್‌, ಎಬಿ ಡಿವಿಲಿಯರ್ಸ್‌. ಈ ಮೂವರು ಬೆಂಗಳೂರು ತಂಡದ ಪಿಲ್ಲರ್‌ಗಳಿದ್ದಂತೆ. ಇದೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ತನ್ನ ತಂಡಕ್ಕಾಗಿ ಆಡಿದ್ದ ಇಬ್ಬರು ಘಟಾನುಘಟಿ ಆಟಗಾರರಾದ  ಕ್ರಿಸ್‌ ಗೇಲ್‌ ಮತ್ತು ಎಬಿ ಡಿವಿಲಿಯರ್ಸ್‌ಗೆ ಮರೆಯಲಾಗದಂತಹ ಗೌರವವನ್ನು ನೀಡಿದ್ದಾರೆ. 

ಇದನ್ನು ಓದಿ: ರಾಜ್ಯಸಭೆ ಚುನಾವಣೆ : " ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ನಡೆಸುವುದಾದರೆ ಸ್ವಾಗತ "

ಲೆಜೆಂಡರಿ ಬ್ಯಾಟ್ಸ್‌ಮನ್‌ಗಳೆಂದೆ ಖ್ಯಾತಿ ಪಡೆದ ಕ್ರಿಸ್‌ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ʼಹಾಲ್ ಆಫ್ ಫೇಮ್ʼ ಗೌರವವನ್ನ ನೀಡಿದೆ. ಇದು ಐಪಿಎಲ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫ್ರಾಂಚೈಸಿಯೊಂದು ತನ್ನ ಆಟಗಾರರಿಗೆ ನೀಡುತ್ತಿರುವ ಗೌರವವಾಗಿದೆ. 

ಆಲ್‌ಟೈಂ ಬೆಸ್ಟ್‌ ಕ್ರಿಕೆಟರ್‌ಗಳ ಪಟ್ಟಿಯಲ್ಲಿ ಗೇಲ್‌ ಮತ್ತು ಎಬಿಡಿ ನಿಲ್ಲುತ್ತಾರೆ. ಅಭಿಮಾನಿಗಳ ಮನದಲ್ಲಿ ದೈತ್ಯ ಕ್ರಿಕೆಟರ್‌ ಎಂದು ಗೇಲ್‌ ಎನಿಸಿಕೊಂಡೆರೆ ಮಿಸ್ಟರ್‌ 360 ಎಂದು ಎಬಿಡಿ ಸ್ಥಾನ ಪಡೆದುಕೊಂಡಿದ್ದಾರೆ. ಐಪಿಎಲ್‌ ಯಶಸ್ಸಿನ ಹಿಂದೆ ಉಭಯ ನಾಯಕರ ಕೊಡುಗೆಯು ಅಪಾರವಿದೆ ಎನ್ನಬಹುದು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡುವಂತೆ, ಇದೀಗ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಆರ್‌ಸಿಬಿ ಫ್ರಾಂಚೈಸಿ ತನ್ನ ಬೆಸ್ಟ್ ಆಟಗಾರರಿಗೆ ಈ ಗೌರವ ನೀಡುತ್ತಿದೆ. 

2011ರಲ್ಲಿ ಗಿಲ್‌ಕ್ರಿಸ್‌ ಗೇಲ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಪಾದಾರ್ಪಣೆ ಮಾಡಿದರು. ಅದಕ್ಕೂ ಮೊದಲು ಮೂರು ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದಲ್ಲಿ ಆಡಿದ್ದರು. ಬಳಿಕ 2017ರವರೆಗೆ ಆರ್‌ಸಿಬಿ ಪರ ಆಡಿದ ಗೇಲ್‌ ಪ್ರಮುಖ ಬ್ಯಾಟ್‌ಮ್ಯಾನ್‌ ಆಗಿ ಗುರುತಿಸಿಕೊಂಡರು. ಬೆಂಗಳೂರು ತಂಡದಲ್ಲಿದ್ದಾಗ ದಾಖಲೆಯ ಸುರಿಮಳೆ ಹರಿಸಿದ ಅವರು 3420 ರನ್, 21 ಅರ್ಧಶತಕ, 5 ಶತಕಗಳು ಸೇರಿದಂತೆ 154.40 ರ ಸ್ಟ್ರೈಕ್ ರೇಟ್‌ಗಳನ್ನು ಕಲೆಹಾಕಿದ್ದಾರೆ. 

ಇನ್ನು ಎಬಿ ಡಿವಿಲಿಯರ್ಸ್‌ ಬಗ್ಗೆ ಹೇಳೋದೆಬೇಡ. ಅಭಿಮಾನಿಗಳ ಬಳಗವೇ ಇವರ ಬಳಿಯಿದೆ. ಎಬಿಡಿಯನ್ನು ಮಿಸ್ಟರ್‌ 360 ಎಂದೇ ಕರೆಯಲಾಗುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಆರ್‌ಸಿಬಿಗಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಬಿಡಿ. 157 ಪಂದ್ಯಗಳಲ್ಲಿ 41.10 ಸರಾಸರಿ, 4,522 ರನ್, 2 ಶತಕ, 37 ಅರ್ಧಶತಕಗಳನ್ನು ಒಳಗೊಂಡಂತೆ 158.33 ಸ್ಟ್ರೈಕ್ ರೇಟ್‌ ಹೊಂದಿದ್ದಾರೆ. 

ಗೌರವ ನೆನೆದು ಭಾವುಕರಾದ ಆಟಗಾರರು: 
ವರ್ಚುವಲ್‌ ಕಾನ್ಫರೆನ್ಸ್‌ ಮೂಲಕ ಹಾಲ್‌ ಆಫ್‌ ಫೇಮ್‌ ಗೌರವ ಕಾರ್ಯಕ್ರಮಕ್ಕೆ ಭಾಗಿಯಾದ ಎಬಿ ಡಿವಿಲಿಯರ್ಸ್‌ ಭಾವುಕ ನುಡಿಗಳನ್ನಾಡಿದ್ದಾರೆ. "ಇದು ಅದ್ಭುತ ಗೌರವ. ಆರ್‌ಸಿಬಿ ಆಟವನ್ನು ನಾನು ಟಿವಿಯಲ್ಲಿ ನೋಡುತ್ತಿದ್ದೇನೆ. ಈ ಗೌರವ ನನಗೆ ತುಂಬಾ ಭಾವನಾತ್ಮಕವಾಗಿದೆ. ಈ ಸೀಸನ್‌ನಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ ಎಂನ ಉತ್ಸುಕನಾಗಿದ್ದೇನೆ. ಈ ಗೌರವ ನೀಡಿದಕ್ಕಾಗಿ ಫ್ರಾಂಬೈಸಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ. 

​ಇದನ್ನು ಓದಿ: Heavy rainfall: ರಾಜ್ಯದ ಈ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಿಸಿದ IMD

ಇನ್ನು ಗಿಲ್‌ ಕ್ರಿಸ್‌ ಗೇಲ್‌ ಮಾತನಾಡಿ, "ಆರ್‌ಸಿಬಿಯು ನನಗೆ ಹಲವಾರು ನೆನಪುಗಳನ್ನು ನೀಡಿದೆ. ಈ ಫ್ರಾಂಚೈಸಿಯಲ್ಲಿ ಉತ್ತಮ ಸಮಯವನ್ನ ಕಳೆದಿದ್ದೇನೆ. ಈ ಗೌರವ ನೀಡಿದಕ್ಕೆ ನಾನು ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News