Team India : ಅಮೋಘ ದಾಖಲೆ ಬರೆದ ಚೇತೇಶ್ವರ್ ಪೂಜಾರ, ಟೆಸ್ಟ್ ಸರಣಿಗೂ ಮುನ್ನ ಕಾಂಗರೂಗಳಿಗೆ ಶುರುವಾಗಿದೆ ಭಯ!

IND vs AUS : ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯ ತಂಡದಲ್ಲಿ ಭಯದ ಅಲೆ ಶುರುವಾಗಿದೆ. ಅಸಲಿಗೆ, ಟೀಂ ಇಂಡಿಯಾದ ಡ್ಯಾಶಿಂಗ್ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಇಂತಹದೊಂದು ದಾಖಲೆ ಮಾಡಿದ್ದಾರೆ, ಇದರಿಂದ ಆಸ್ಟ್ರೇಲಿಯಾ ತಂಡ ಬೆಚ್ಚಿ ಬಿದ್ದಿದೆ. 

Written by - Channabasava A Kashinakunti | Last Updated : Jan 20, 2023, 04:29 PM IST
  • ಚೇತೇಶ್ವರ ಪೂಜಾರ ಅಮೋಘ ದಾಖಲೆ
  • ಟೆಸ್ಟ್ ಸರಣಿಗೂ ಮುನ್ನ ಕಾಂಗರೂಗಳಿಗೆ ಶುರುವಾಗಿದೆ ಭಯ!
  • ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ
Team India : ಅಮೋಘ ದಾಖಲೆ ಬರೆದ ಚೇತೇಶ್ವರ್ ಪೂಜಾರ, ಟೆಸ್ಟ್ ಸರಣಿಗೂ ಮುನ್ನ ಕಾಂಗರೂಗಳಿಗೆ ಶುರುವಾಗಿದೆ ಭಯ! title=

IND vs AUS : ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯ ತಂಡದಲ್ಲಿ ಭಯದ ಅಲೆ ಶುರುವಾಗಿದೆ. ಅಸಲಿಗೆ, ಟೀಂ ಇಂಡಿಯಾದ ಡ್ಯಾಶಿಂಗ್ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಇಂತಹದೊಂದು ದಾಖಲೆ ಮಾಡಿದ್ದಾರೆ, ಇದರಿಂದ ಆಸ್ಟ್ರೇಲಿಯಾ ತಂಡ ಬೆಚ್ಚಿ ಬಿದ್ದಿದೆ. 

ಫೆಬ್ರವರಿ 9 ರಿಂದ ಭಾರತ ವಿರುದ್ಧ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಚೇತೇಶ್ವರ ಪೂಜಾರ ತಮ್ಮ ಬಿರುಸಿನ ಫಾರ್ಮ್ ಪ್ರದರ್ಶಿಸುವ ಮೂಲಕ ದೊಡ್ಡ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ : IND vs NZ ಸರಣಿ ಮಧ್ಯ ಟೀಂ ಇಂಡಿಯಾಗೆ ಬಿಗ್ ಶಾಕ್ ನೀಡಿದ ಐಸಿಸಿ!

ಚೇತೇಶ್ವರ ಪೂಜಾರ ಅಮೋಘ ದಾಖಲೆ

ಟೀಂ ಇಂಡಿಯಾದ ಅಪಾಯಕಾರಿ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ಭಾರತದಲ್ಲಿ 12,000 ಪ್ರಥಮ ದರ್ಜೆ ರನ್‌ಗಳನ್ನು ಪೂರೈಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಚೇತೇಶ್ವರ ಪೂಜಾರ ಭಾರತದಲ್ಲಿ 12,000 ಪ್ರಥಮ ದರ್ಜೆ ರನ್ ಗಳಿಸುವ ಮೂಲಕ ಶ್ರೇಷ್ಠ ದಾಖಲೆ ಮಾಡಿದ್ದಾರೆ. ಚೇತೇಶ್ವರ ಪೂಜಾರ ಈ ಸಾಧನೆ ಮಾಡಿದ ಭಾರತದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳಿಗೆ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಟೆಸ್ಟ್ ಸರಣಿಗೂ ಮುನ್ನ ಕಾಂಗರೂಗಳಿಗೆ ಶುರುವಾಗಿದೆ ಭಯ!

ಚೇತೇಶ್ವರ ಪೂಜಾರ ಅವರಿಗಿಂತ ಮೊದಲು ವಾಸಿಫ್ ಜಾಫರ್ ಈ ಸಾಧನೆ ಮಾಡಿದ್ದಾರೆ. ವಾಸಿಫ್ ಜಾಫರ್ ಭಾರತದಲ್ಲಿ 14609 ಪ್ರಥಮ ದರ್ಜೆ ರನ್‌ಗಳನ್ನು ನೋಂದಾಯಿಸಿದ್ದಾರೆ. ಆಂಧ್ರಪ್ರದೇಶ ವಿರುದ್ಧ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2022-23 ಪಂದ್ಯದಲ್ಲಿ ಸೌರಾಷ್ಟ್ರ ಪರ ಆಡುವಾಗ ಪೂಜಾರ ಈ ದಾಖಲೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ 91 ರನ್ ಗಳಿಸಿದ್ದರು. ಚೇತೇಶ್ವರ ಪೂಜಾರ 240 ಪ್ರಥಮ ದರ್ಜೆ ಪಂದ್ಯಗಳಲ್ಲಿ 56 ಶತಕ ಮತ್ತು 73 ಅರ್ಧ ಶತಕ ಸೇರಿದಂತೆ 18422 ರನ್ ಗಳಿಸಿದ್ದಾರೆ. ಚೇತೇಶ್ವರ ಪೂಜಾರ ಅವರು ಫೆಬ್ರವರಿ 9 ರಿಂದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಫೆಬ್ರವರಿ 9 ರಂದು ನಾಗ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೇತೇಶ್ವರ ಪೂಜಾರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ತಮ್ಮ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾ ತಂಡವನ್ನು ನಾಶಪಡಿಸಲಿದ್ದಾರೆ. ಪೂಜಾರ ಭಾರತ ಪರ 98 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 44.39 ಸರಾಸರಿಯಲ್ಲಿ 7014 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 19 ಶತಕ ಮತ್ತು 34 ಅರ್ಧ ಶತಕಗಳಿವೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (WK), ಇಶಾನ್ ಕಿಶನ್ (WK), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.

ಭಾರತ vs ಆಸ್ಟ್ರೇಲಿಯಾ ಸರಣಿ ಪಂದ್ಯಗಳು:

ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ

ಮೊದಲ ಟೆಸ್ಟ್, ಫೆಬ್ರವರಿ 9-13, ಬೆಳಿಗ್ಗೆ 9.30, ನಾಗ್ಪುರ

ಎರಡನೇ ಟೆಸ್ಟ್, ಫೆಬ್ರವರಿ 17-21, ಬೆಳಗ್ಗೆ 9.30, ದೆಹಲಿ

ಮೂರನೇ ಟೆಸ್ಟ್, ಮಾರ್ಚ್ 1-5, ಬೆಳಗ್ಗೆ 9.30, ಧರ್ಮಶಾಲಾ

ನಾಲ್ಕನೇ ಟೆಸ್ಟ್, ಮಾರ್ಚ್ 9-13, ಬೆಳಗ್ಗೆ 9.30, ಅಹಮದಾಬಾದ್

ಇದನ್ನೂ ಓದಿ : IND vs NZ : ಭಾರತ - ನ್ಯೂಜಿಲೆಂಡ್ 3ನೇ ODI ಪಂದ್ಯದ ಸ್ಥಳ ಬದಲಾವಣೆ.!? ಹೈಕೋರ್ಟ್‌ನಿಂದ ಮಹತ್ವದ ತೀರ್ಪು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News