ಈ ಇಬ್ಬರು ಭಾರತೀಯ ಆಟಗಾರರು ಸದ್ಯ ಇಡೀ ವಿಶ್ವದಲ್ಲೇ ಶ್ರೇಷ್ಠ ಎಂದ ಬ್ರಿಯಾನ್ ಲಾರಾ

ಬ್ರಿಯಾನ್ ಲಾರಾ ಕ್ರಿಕೆಟ್ ಜಗತ್ತು ಕಂಡಂತಹ ಶ್ರೇಷ್ಠ ಕ್ರಿಕೆಟಿಗ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ದಾಖಲೆಗಳನ್ನು ಸಿಡಿಸಿದ್ದಾರೆ.

Last Updated : Dec 6, 2020, 04:30 PM IST
ಈ ಇಬ್ಬರು ಭಾರತೀಯ ಆಟಗಾರರು ಸದ್ಯ ಇಡೀ ವಿಶ್ವದಲ್ಲೇ ಶ್ರೇಷ್ಠ ಎಂದ ಬ್ರಿಯಾನ್ ಲಾರಾ  title=

ನವದೆಹಲಿ: ಬ್ರಿಯಾನ್ ಲಾರಾ ಕ್ರಿಕೆಟ್ ಜಗತ್ತು ಕಂಡಂತಹ ಶ್ರೇಷ್ಠ ಕ್ರಿಕೆಟಿಗ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ದಾಖಲೆಗಳನ್ನು ಸಿಡಿಸಿದ್ದಾರೆ.

ನಾನು ಆರಾಮವಾಗಿದ್ದೇನೆ: ಅಭಿಮಾನಿಗಳಿಗೆ ಬ್ರಿಯಾನ್ ಲಾರಾ ಸಂದೇಶ

ಟೆಸ್ಟ್ ಕ್ರಿಕೆಟ್ ಕ್ರಿಕೆಟ್ ನಲ್ಲಿ 400 ರನ್ ಸಿಡಿಸಿದ ಏಕೈಕ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಬ್ರಿಯಾನ್ ಲಾರಾ ಅವರು ಪಾತ್ರರಾಗಿದ್ದಾರೆ.ಇತ್ತೀಚೆಗೆ,ಲಾರಾ ತನ್ನನ್ನು ಪಟ್ಟಿಯಲ್ಲಿ ಹೆಸರಿಸದೆ ಕ್ರಿಕೆಟ್‌ನ ಅತ್ಯುತ್ತಮ ಐದು ಹೆಸರಿಸಲು ನಿರ್ಧರಿಸಿದರು.ಪ್ರಸ್ತುತ ಯುಗದ ಅತ್ಯುತ್ತಮ ಐದು ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಲಾರಾ ಹಂಚಿಕೊಂಡಿದ್ದಾರೆ. ಭಾರತದ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಇಂಗ್ಲೆಂಡ್‌ನ ಜೋ ರೂಟ್, ಎಬಿ ಡಿವಿಲಿಯರ್ಸ್, ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಇಂದಿನ ಕಾಲದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳೆಂದು ಲಾರಾ ಹೇಳಿದ್ದಾರೆ.

ಈ ಭಾರತೀಯ ಆಟಗಾರ 'ಲಾರಾ-400' ದಾಖಲೆ ಮುರಿಯುತ್ತಾನೆ ಎಂದ ವಾರ್ನರ್..!

ಇನ್ನೂ ಬೌಲರ್ ವಿಭಾಗದಲ್ಲಿ, ಜಸ್ಪ್ರಿತ್ ಬುಮ್ರಾ, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಮತ್ತು ಜೇಮ್ಸ್ ಆಂಡರ್ಸನ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ, ಮತ್ತು ಅಫಘಾನ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಪ್ರಸ್ತುತ ಯುಗದ ಅತ್ಯುತ್ತಮ ಐದು ಬೌಲರ್ ಗಳು ಎಂದು ಅವರು ಪಟ್ಟಿ ಮಾಡಿದ್ದಾರೆ.ಅವರು ಅತ್ಯುತ್ತಮ ಆಟಗಾರರು ಎಂದು ಭಾವಿಸುವ ಆಟಗಾರರನ್ನು ಸಹ ಪಟ್ಟಿ ಮಾಡಿದ್ದಾರೆ.

ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ ..!

ಲಾರಾ ವಿರುದ್ಧ ಆಡಿದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳೆಂದರೆ ಸಚಿನ್ ತೆಂಡೂಲ್ಕರ್, ಕುಮಾರ್ ಸಂಗಕ್ಕಾರ, ರಾಹುಲ್ ದ್ರಾವಿಡ್, ಜಾಕ್ವೆಸ್ ಕಾಲಿಸ್, ರಿಕಿ ಪಾಂಟಿಂಗ್. ಇನ್ನೂ ಬೌಲಿಂಗ್ ವಿಭಾಗದಲ್ಲಿ ಶೇನ್ ವಾರ್ನ್, ವಾಕರ್ ಯೂನಿಸ್, ವಾಸಿಮ್ ಅಕ್ರಮ್, ಮುತ್ತಯ್ಯ ಮುರಳೀಧರನ್, ಮತ್ತು ಗ್ಲೆನ್ ಮೆಕ್‌ಗ್ರಾತ್ ಅವರು ಎದುರಿಸಿದ ಅತ್ಯುತ್ತಮ ಬೌಲರ್‌ಗಳು ಎಂದು ಲಾರಾ ಹೇಳಿದ್ದಾರೆ.

 

Trending News