ಕ್ರಿಕೆಟ್’ನಲ್ಲಿ ಮಿಂಚಿದ್ದು ಮಾತ್ರವಲ್ಲ.. ಈ ಸೂಪರ್ ಹಿಟ್ ಸಿನಿಮಾದಲ್ಲೂ ನಟಿಸಿದ್ರು ಯುವರಾಜ್ ಸಿಂಗ್! ಯಾವುದದು?

Yuvraj Singh Birthday: 'ಯುವರಾಜ್ ಸಿಂಗ್'… ಈ ಹೆಸರನ್ನು ಭಾರತೀಯ ಕ್ರಿಕೆಟ್ ಎಂದಿಗೂ ಮರೆಯಲಾಗದು, ಇಂದು ಈ ದಿಗ್ಗಜ ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ಆಸಕ್ತಿದಾಯಕ ವಿಷಯಗಳನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತಿದ್ದೇವೆ.

Written by - Bhavishya Shetty | Last Updated : Dec 12, 2023, 05:23 PM IST
    • ಕ್ರಿಕೆಟ್ ಜಗತ್ತಿಗೆ ಕಾಲಿಡುವ ಮುನ್ನ ಯುವರಾಜ್ ಸಿಂಗ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು
    • ಯುವರಾಜ್ ಸಿಂಗ್ ಅವರ ಸುಂದರ ಜೀವನದಲ್ಲಿ ಕಹಿಕ್ಷಣವೊಂದು ಬಂದಿತ್ತು
    • ಯುವರಾಜ್ ಸಿಂಗ್ ಅವರ ಸುಂದರ ಜೀವನದಲ್ಲಿ ಕಹಿಕ್ಷಣವೊಂದು ಬಂದಿತ್ತು
ಕ್ರಿಕೆಟ್’ನಲ್ಲಿ ಮಿಂಚಿದ್ದು ಮಾತ್ರವಲ್ಲ.. ಈ ಸೂಪರ್ ಹಿಟ್ ಸಿನಿಮಾದಲ್ಲೂ ನಟಿಸಿದ್ರು ಯುವರಾಜ್ ಸಿಂಗ್! ಯಾವುದದು? title=
Yuvraj Singh

Yuvraj Singh Birthday: ಟೀಂ ಇಂಡಿಯಾ ಎರಡು ಬಾರಿ ವಿಶ್ವಕಪ್ ಗೆಲ್ಲುವಂತೆ ಮಾಡಿದ್ದು… ಕ್ಯಾನ್ಸರ್’ನಂತಹ ಮಾರಕ ಕಾಯಿಲೆ ವಿರುದ್ಧವೂ ಹೋರಾಡಿ ಮೈದಾನಕ್ಕೆ ಮರಳಿದ್ದು… ರಕ್ತ ವಾಂತಿ ಮಾಡುತ್ತಲೇ ಮ್ಯಾಚ್ ಗೆದ್ದಿದ್ದು… 1 ಓವರ್’ನಲ್ಲಿ 6 ಸಿಕ್ಸರ್ ಬಾರಿಸಿದ್ದು... ಇವೆಲ್ಲವೂ ಟೀಂ ಇಂಡಿಯಾದ ಆಲ್‌’ರೌಂಡರ್ ಯುವರಾಜ್ ಸಿಂಗ್ ಅವರ ಜೀವನಗಾಥೆಯ ಪುಟಗಳಲ್ಲೊಂದು.

'ಯುವರಾಜ್ ಸಿಂಗ್'… ಈ ಹೆಸರನ್ನು ಭಾರತೀಯ ಕ್ರಿಕೆಟ್ ಎಂದಿಗೂ ಮರೆಯಲಾಗದು, ಇಂದು ಈ ದಿಗ್ಗಜ ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ಆಸಕ್ತಿದಾಯಕ ವಿಷಯಗಳನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತಿದ್ದೇವೆ.

ಇದನ್ನೂ ಓದಿ: ರೋಹಿತ್, ಹಾರ್ದಿಕ್ ಬದಲು ಈ ಕಿಲಾಡಿ ಬ್ಯಾಟ್ಸ್’ಮನ್’ಗೆ ಟಿ20 ವಿಶ್ವಕಪ್ ನಾಯಕತ್ವ!?

ಕ್ರಿಕೆಟ್ ಜಗತ್ತಿಗೆ ಕಾಲಿಡುವ ಮುನ್ನ ಯುವರಾಜ್ ಸಿಂಗ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಯುವರಾಜ್ ಸಿಂಗ್ 11ನೇ ವಯಸ್ಸಿನಲ್ಲಿ ಪಂಜಾಬಿ ಸಿನಿಮಾ 'ಮೆಹಂದಿ ಸಗ್ನಾ ದಿ' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 1992 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅವರ ತಂದೆ ಹಾಗೂ ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ ಕೂಡ ಅಭಿನಯಿಸಿದ್ದಾರೆ. ಯುವಿ ಈ ಸಿನಿಮಾ ಮಾತ್ರವಲ್ಲದೆ, 'ಪುತ್ತ್ ಸರ್ದಾರ್'ನಲ್ಲೂ ಅಭಿನಯಿಸಿದ್ದರು. ಅವರ ತಂದೆ ಯೋಗರಾಜ್ ಸಿಂಗ್ ಮಾಜಿ ಕ್ರಿಕೆಟಿಗ ಮತ್ತು ಅತ್ಯುತ್ತಮ ನಟ. ಯೋಗರಾಜ್ ಸಿಂಗ್ ಮಿಲ್ಕಾ ಸಿಂಗ್ ಅವರ ಜೀವನಾಧಾರಿತ 'ಭಾಗ್ ಮಿಲ್ಕಾ ಭಾಗ್' ಹಿಂದಿ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಅನೇಕ ಬಾಲಿವುಡ್ ಮತ್ತು ಪಂಜಾಬಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕ್ಯಾನ್ಸರ್ ವಿರುದ್ಧ ಹೋರಾಟ:

ಯುವರಾಜ್ ಸಿಂಗ್ ಅವರ ಸುಂದರ ಜೀವನದಲ್ಲಿ ಕಹಿಕ್ಷಣವೊಂದು ಬಂದಿತ್ತು. 2011ರ ವಿಶ್ವಕಪ್ ವೇಳೆ ಯುವರಾಜ್ ಸಿಂಗ್ ಕ್ಯಾನ್ಸರ್’ಗೆ ತುತ್ತಾಗಿದ್ದರು. ಇದರ ಹೊರತಾಗಿಯೂ, ಅವರು ಇಡೀ ಪಂದ್ಯಾವಳಿಯನ್ನು ಆಡಿದ್ದಲ್ಲದೆ, ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಯುವರಾಜ್ ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಉತ್ತಮ ಚಿಕಿತ್ಸೆ ಪಡೆದು, ಮಾರಣಾಂತಿಕ ಕಾಯಿಲೆಯನ್ನು ಸೋಲಿಸಿದ ಬಳಿಕ ಮತ್ತೆ ಅವರು ಮೈದಾನಕ್ಕೆ ಮರಳಿದ್ದರು. ಇದಾದ ನಂತರ 2014 ರ ಟಿ20 ವಿಶ್ವಕಪ್‌’ನಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದ ಯುವಿ, .ಹಲವು ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಜೂನ್ 10, 2019 ರಂದು ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

2011ರ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅವರು ರಕ್ತ ವಾಂತಿ ಮಾಡಿದ್ದರು, ಅದುವರೆಗೆ ಯಾರೊಬ್ಬರಿಗೂ ಯುವರಾಜ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಿರಲಿಲ್ಲ.

ಈ ಧೈರ್ಯಶಾಲಿ ಬ್ಯಾಟ್ಸ್‌’ಮನ್ 65 ಎಸೆತಗಳಲ್ಲಿ 57 ರನ್‌’ಗಳ ಅಜೇಯ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಅನ್ನು ಆಡಿದರು. ಬೌಲಿಂಗ್ ವೇಳೆ 2 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ, ಕಾಂಗರೂ ಬೌಲರ್‌’ಗಳನ್ನು ಸೋಲಿಸಿದ್ದರು. ಈ ಪ್ರದರ್ಶನದಿಂದಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದರು.

ಎರಡು ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದರು ಯುವರಾಜ್ ಸಿಂಗ್. ಯುವಿ 2011ರ ವಿಶ್ವಕಪ್‌’ನಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿ 362 ರನ್ ಗಳಿಸಿ 15 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕ್ಯಾನ್ಸರ್‌’ನಂತಹ ಮಾರಕ ಕಾಯಿಲೆಯ ನಡುವೆಯೂ ವಿಶ್ವಕಪ್ ಗೆದ್ದಿರುವುದು ಅವರ ಚೈತನ್ಯವನ್ನು ತೋರಿಸುತ್ತದೆ.

2007 ರ ಟಿ20 ವಿಶ್ವಕಪ್ ಅನ್ನು ಯಾರು ಮರೆಯಲು ಸಾಧ್ಯವಿಲ್ಲ, ಇದರಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುವಾಗ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಓವರ್‌’ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ತನಿಷಾಗೆ ಐ ಲವ್ ಯೂ ಎಂದ ವರ್ತೂರ್! ನಾಚಿ ನೀರಾದ ‘ಬೆಂಕಿ’...

ಯುವರಾಜ್ ಸಿಂಗ್ ಭಾರತದ ಪರ 304 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 8701 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು ಒಟ್ಟು 14 ಶತಕಗಳು ಮತ್ತು 52 ಅರ್ಧ ಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. 40 ಟೆಸ್ಟ್ ಪಂದ್ಯಗಳನ್ನಾಡಿದ್ದ, ಯುವರಾಜ್ ಒಟ್ಟು 1900 ರನ್ ಗಳಿಸಿದರು, ಇದರಲ್ಲಿ 3 ಶತಕಗಳು ಮತ್ತು 11 ಅರ್ಧ ಶತಕಗಳು ಸೇರಿವೆ. ಇನ್ನು 58 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 1177 ರನ್ ಗಳಿಸಿದ್ದಾರೆ. ಎಡಗೈ ಸ್ಪಿನ್ನರ್ ಯುವರಾಜ್ ಟೆಸ್ಟ್‌’ನಲ್ಲಿ 9 ವಿಕೆಟ್, ಏಕದಿನದಲ್ಲಿ 111 ಮತ್ತು ಟಿ20ಯಲ್ಲಿ 28 ವಿಕೆಟ್‌’ಗಳನ್ನು ಕಬಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News