ಬಿಸಿಸಿಐ ನ ಜನರಲ್ ಮ್ಯಾನೇಜರ್ ಆಗಿ ಸಾಬಾ ಕರೀಂ ಆಯ್ಕೆ

   

Last Updated : Dec 23, 2017, 06:58 PM IST
  • ಜನವರಿ 1997 ರಿಂದ ನವೆಂಬರ್ 2000 ರ ವರೆಗೆ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತ ತಂಡದ ಪರ ಒಂದು ಟೆಸ್ಟ್ ಮತ್ತು 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಅಲ್ಲದೆ ಅವರು 2012 ರಲ್ಲಿ ಪೂರ್ವ ವಲಯದಿಂದ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.
  • ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ)ಯು ಎಮ್.ವಿ. ಶ್ರೀಧರ್ ಅವರ ರಾಜೀನಾಮೆ ನಂತರ ಜನರಲ್ ಮ್ಯಾನೇಜರ್ ಹುದ್ದೆ ಖಾಲಿಯಾಗಿ ಉಳಿದಿದ್ದ ಈ ಹುದ್ದೆಗೆ ಈ ಮಾಜಿ ಆಟಗಾರ ಸಾಬಾ ಕರೀಂ ರವರನ್ನು ನೇಮಕ ಮಾಡಲಾಗಿದೆ.
ಬಿಸಿಸಿಐ ನ ಜನರಲ್ ಮ್ಯಾನೇಜರ್ ಆಗಿ ಸಾಬಾ ಕರೀಂ ಆಯ್ಕೆ  title=

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ)ಯು  ಎಮ್.ವಿ. ಶ್ರೀಧರ್ ಅವರ ರಾಜೀನಾಮೆ ನಂತರ  ಜನರಲ್ ಮ್ಯಾನೇಜರ್ ಹುದ್ದೆ ಖಾಲಿಯಾಗಿ ಉಳಿದಿದ್ದ ಈ ಹುದ್ದೆಗೆ  ಈ ಮಾಜಿ ಆಟಗಾರ ಸಾಬಾ ಕರೀಂ ರವರನ್ನು  ನೇಮಕ ಮಾಡಲಾಗಿದೆ. ಈ ಮಾಜಿ ಆಟಗಾರ  ಶುಕ್ರವಾರ  ಕ್ರಿಕೆಟ್ ಕಾರ್ಯಾಚರಣೆಯ ಜನರಲ್ ಮ್ಯಾನೇಜರ್ ಎಂದು ಜನವರಿ 1 ರಂದು ಅಧಿಕಾರ ವಹಿಸಲಿದ್ದಾರೆ

ಬಿಸಿಸಿಐ ನ ಹೇಳುವಂತೆ ಕರೀಮ್ ಅವರ ಹೊಸ ಹುದ್ದೆಯು ಪ್ರಮುಖವಾಗಿ ಕ್ರಿಕೆಟ್ ಗೆ  ಸಂಬಂಧಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಬಜೆಟ್ ನಿಗದಿಪಡಿಸುವುದು , ಪಂದ್ಯ ಆಡುವ ನಿಯಮಗಳ ಅನುಷ್ಠಾನವನ್ನು ನಿರ್ಧರಿಸುವ ಮತ್ತು ಮೇಲ್ವಿಚಾರಣೆ ಮಾಡುವಿಕೆ, ಮತ್ತು ದೇಶೀಯ  ಕ್ರಿಕೆಟ್ ಆಡಳಿತಕ್ಕೆ ಸಂಬಂಧಿಸಿದ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಮಾಜಿ ವಿಕೆಟ್ ಕೀಪರ್  ಸಾಬಾ ಕರೀಂ ರವರು  ಬಿಸಿಸಿಐ ಸಿಇಒ ರಾಹುಲ್ ಜೋಹ್ರಿಗೆ ವರದಿ ಮಾಡುತ್ತಾರೆ ಮತ್ತು ಮಂಡಳಿಯ ದೃಷ್ಟಿ ಮತ್ತು ಕಾರ್ಯತಂತ್ರವನ್ನು ಹೆಣೆಯಲು ಅವರಿಗೆ ಸಹಾಯ ಮಾಡುತ್ತಾರೆ ಎಂದು ತಿಳಿದುಬಂದಿದೆ,

ಜನವರಿ 1997 ರಿಂದ ನವೆಂಬರ್ 2000 ರ ವರೆಗೆ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಭಾರತ ತಂಡದ ಪರ ಒಂದು ಟೆಸ್ಟ್ ಮತ್ತು 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಅಲ್ಲದೆ ಅವರು 2012 ರಲ್ಲಿ ಪೂರ್ವ ವಲಯದಿಂದ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. 

Trending News