ಟಿ20 ವಿಶ್ವಕಪ್’ಗೆ ನಾಯಕ ಯಾರು?: ಸಂದರ್ಶನದಲ್ಲಿ ಸತ್ಯ ಬಹಿರಂಗಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

Indian Cricket Team: “ಜೂನ್‌’ನಲ್ಲಿ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಅದಕ್ಕೂ ಮೊದಲು ನಾವು ಅಫ್ಘಾನಿಸ್ತಾನ ವಿರುದ್ಧ ಐಪಿಎಲ್ ಮತ್ತು ಟಿ20 ಸರಣಿಗಳನ್ನು ಆಡಬೇಕಿದೆ. ಬಿಸಿಸಿಐನ ಸ್ವಂತ ಭೂಮಿಯಲ್ಲಿ ನಿರ್ಮಿಸಲಿರುವ ಹೊಸ ಎನ್‌’ಸಿಎ ಮುಂದಿನ ವರ್ಷ ಆಗಸ್ಟ್‌ನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ” ಎಂದು ಜಯ್ ಶಾ ಹೇಳಿದರು.

Written by - Bhavishya Shetty | Last Updated : Dec 10, 2023, 08:09 PM IST
    • ಮುಂಬರುವ T-20 ವಿಶ್ವಕಪ್ 2024ರ ಜೂನ್‌’ನಲ್ಲಿ ನಡೆಯಲಿದೆ
    • ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ.
    • ಟೀಂ ಇಂಡಿಯಾದ ನಾಯಕ ಯಾರು ಎಂಬುದೇ ಈಗಿನ ಪ್ರಶ್ನೆ
ಟಿ20 ವಿಶ್ವಕಪ್’ಗೆ ನಾಯಕ ಯಾರು?: ಸಂದರ್ಶನದಲ್ಲಿ ಸತ್ಯ ಬಹಿರಂಗಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ title=
BCCI Secretary Jay Shah

Indian Cricket Team: ಮುಂಬರುವ T-20 ವಿಶ್ವಕಪ್ 2024ರ ಜೂನ್‌’ನಲ್ಲಿ ನಡೆಯಲಿದ್ದು, ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ. ಆದರೆ ಟೀಂ ಇಂಡಿಯಾದ ನಾಯಕ ಯಾರು ಎಂಬುದೇ ಈಗಿನ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮುಂದಿನ 10 ವರ್ಷ ಕ್ರಿಕೆಟ್ ಜಗತ್ತನ್ನೇ ಆಳುತ್ತಾನೆ ಪಾಕಿಸ್ತಾನದ ಈ ಆಟಗಾರ: ಗೌತಮ್ ಗಂಭೀರ್ ಭವಿಷ್ಯ

“ಜೂನ್‌’ನಲ್ಲಿ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಅದಕ್ಕೂ ಮೊದಲು ನಾವು ಅಫ್ಘಾನಿಸ್ತಾನ ವಿರುದ್ಧ ಐಪಿಎಲ್ ಮತ್ತು ಟಿ20 ಸರಣಿಗಳನ್ನು ಆಡಬೇಕಿದೆ. ಬಿಸಿಸಿಐನ ಸ್ವಂತ ಭೂಮಿಯಲ್ಲಿ ನಿರ್ಮಿಸಲಿರುವ ಹೊಸ ಎನ್‌’ಸಿಎ ಮುಂದಿನ ವರ್ಷ ಆಗಸ್ಟ್‌ನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ” ಎಂದು ಜಯ್ ಶಾ ಹೇಳಿದರು.

“ದಕ್ಷಿಣ ಆಫ್ರಿಕಾ ಪ್ರವಾಸ ಮುಗಿದ ನಂತರವೇ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಅವರ ತಂಡದ ಅವಧಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಜಯ್ ಶಾ ಹೇಳಿದ್ದಾರೆ.

“ನಾವು ಅವರ ಅಧಿಕಾರಾವಧಿಯನ್ನು ವಿಸ್ತರಿಸಿದ್ದೇವೆ ಆದರೆ ಇನ್ನೂ ಒಪ್ಪಂದವನ್ನು ಅಂತಿಮಗೊಳಿಸಿಲ್ಲ. ನಮಗೆ ಸಂಪೂರ್ಣವಾಗಿ ಸಮಯವಿರಲಿಲ್ಲ. ನಾನು ದ್ರಾವಿಡ್ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ್ದೇನೆ ಮತ್ತು ನಾವು ಅಧಿಕಾರಾವಧಿಯನ್ನು ವಿಸ್ತರಿಸಲು ಪರಸ್ಪರ ಒಪ್ಪಿದ್ದೇವೆ. ದಕ್ಷಿಣ ಆಫ್ರಿಕಾದಿಂದ ವಾಪಸಾದ ನಂತರ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ಜೈ ಶಾ ಹೇಳಿದ್ದಾರೆ.

ಜನವರಿಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಫಿಟ್ ಆಗಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಇದ್ದಿಲು ಇದ್ದರೆ ಸಾಕು… ಬಿಳಿಕೂದಲನ್ನು 5 ನಿಮಿಷದಲ್ಲಿ ನೈಸರ್ಗಿಕವಾಗಿ ಬುಡದಿಂದಲೇ ಕಪ್ಪಾಗಿಸಬಹುದು!

IND vs AFG ವೇಳಾಪಟ್ಟಿ ಹೇಗಿದೆ?

ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯ ಜನವರಿ 11 ರಂದು ಮೊಹಾಲಿಯಲ್ಲಿ ನಡೆಯಲಿದ್ದು, ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಇಂದೋರ್ ಮತ್ತು ಬೆಂಗಳೂರಿನಲ್ಲಿ ಜನವರಿ 14 ಮತ್ತು 17 ರಂದು ನಡೆಯಲಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News