ವಿರಾಟ್ ಕೊಹ್ಲಿ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ ಬಿಸಿಸಿಐ

       

Last Updated : Apr 26, 2018, 04:48 PM IST
ವಿರಾಟ್ ಕೊಹ್ಲಿ ಹೆಸರನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ ಬಿಸಿಸಿಐ title=

 

ನವದೆಹಲಿ: ಬಿಸಿಸಿಐ ಗುರುವಾರದಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಹೆಸರನ್ನು ಭಾರತದ ಅತ್ಯುನ್ನತ ಕ್ರೀಡಾ ಗೌರವ ಪುರಸ್ಕಾರವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಇದೇ ಸಂದರ್ಭದಲ್ಲಿ ಬಿಸಿಸಿಐ ಮಾಜಿ ಕ್ರೀಡೆಯಲ್ಲಿನ ಜೀವಮಾನದ ಸಾಧನೆಗಾಗಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಧ್ಯಾನ್ ಚಂದ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.ಅಲ್ಲದೆ ಭಾರತೀಯ ಕ್ರಿಕೆಟಿಗರು ಸ್ಮೃತಿ ಮಂಡಾನ ಮತ್ತು ಶಿಖರ್ ಧವನ್ ಅವರನ್ನು ಅರ್ಜುನ ಪ್ರಶಸ್ತಿಗೆ ಹೆಸರಿಸಿದೆ .

ಬಿಸಿಸಿಐ ಈ ಹಿಂದೆ ಕೂಡ  ಕೊಹ್ಲಿಯನ್ನು ಈ ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು ಆದರೆ ಅವರಿಗೆ ದೊರೆತಿರಲಿಲ್ಲ.ಒಂದುವೇಳೆ ಅವರಿಗೆ ಖೇಲ್ ರತ್ನ ಪ್ರಶಸ್ತಿ ದೊರೆತರೆ ಸಚಿನ್, ಧೋನಿ ನಂತರ ಪ್ರಶಸ್ತಿ ಪಡೆದ ಮೂರನೇ  ಕ್ರಿಕೆಟ್ ಆಟಗಾರನಾಗಲಿದ್ದಾರೆ.1997 ರಲ್ಲಿ ತೆಂಡೂಲ್ಕರ್,2007 ರಲ್ಲಿ ಧೋನಿ ಈ ಪ್ರಶಸ್ತಿಯನ್ನು ಪಡೆದಿದ್ದರು ಪ್ರಶಸ್ತಿ ಪಡೆದರು.

ಕ್ರೀಡಾ ಕ್ಷೇತ್ರದಲ್ಲಿ ಸತತ ನಾಲ್ಕು ವರ್ಷಗಳ ಅವಧಿಯ ನೀಡಿದ ಅತ್ಯುತ್ತಮ ಪ್ರದರ್ಶನಕ್ಕಾಗಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ.

Trending News