Roger Binny : 'ಟೀಂ ಇಂಡಿಯಾ ಪಾಕ್ ಪ್ರವಾಸ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು'

ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಗೆ ಟೀಂ ಇಂಡಿಯಾ ಪ್ರವಾಸದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮ‌ ಎಂದು ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ರೋಜರ್​ ಬಿನ್ನಿ ಸ್ಪಷ್ಟಪಡಿಸಿದ್ದಾರೆ. 

Written by - VISHWANATH HARIHARA | Last Updated : Oct 20, 2022, 07:18 PM IST
  • ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ರೋಜರ್​ ಬಿನ್ನಿ
  • ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಜರ್
  • ಟೀಂ ಇಂಡಿಯಾ ಪ್ರವಾಸದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮ‌
Roger Binny : 'ಟೀಂ ಇಂಡಿಯಾ ಪಾಕ್ ಪ್ರವಾಸ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಿಟ್ಟದ್ದು' title=

ಬೆಂಗಳೂರು : ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಗೆ ಟೀಂ ಇಂಡಿಯಾ ಪ್ರವಾಸದ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮ‌ ಎಂದು ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ರೋಜರ್​ ಬಿನ್ನಿ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ರೋಜರ್, ಈ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಕೇಂದ್ರ ಸರ್ಕಾರದ ನಿರ್ಧರಿಸಬೇಕಾಗುತ್ತದೆ. ತಂಡ ಕ್ರಿಕೆಟ್ ಆಡಲು ಎಲ್ಲಿಗೆ ಪ್ರವಾಸ ಮಾಡಬೇಕು ಎಂದು ನಾವು ಹೇಳಲಾಗದು. ಇದಕ್ಕೆ ನಾವು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ.

ಇದನ್ನೂ ಓದಿ : Sunil Gavaskar : ಕ್ಯಾಪ್ಟನ್ ರೋಹಿತ್​​ಗೆ ಮುಗಿಯದ ಟೆನ್ಷನ್! 'ಪಂತ್-ಕಾರ್ತಿಕ್ ಒಟ್ಟಿಗೆ ಆಡಬೇಕು'

ನಾವು ಬೇರೆ ರಾಷ್ಟ್ರಕ್ಕೆ ತೆರಳಬೇಕಾದರೂ ಹಾಗೂ ಬೇರೆ ರಾಷ್ಟ್ರಗಳು ಇಲ್ಲಿಗೆ ಬರಬೇಕಾದರೂ ಸರ್ಕಾರದ ಅನುಮತಿ ಅಗತ್ಯ. ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗೆ ಟೀಂ ಇಂಡಿಯಾದ ಪಾಕ್ ಪ್ರವಾಸದ ಬಗ್ಗೆ ಸರ್ಕಾರದ ನಿರ್ಧಾರ  ಅವಶ್ಯವಾಗಿದೆ ಎಂದು ಬಿನ್ನಿ ಹೇಳಿದ್ದಾರೆ. ಇನ್ನೂ ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಉತ್ತಮವಾಗಿ‌ ಕೆಲಸ ಮಾಡಿಲ್ಲ ಅಂತಾ ನಾನು ಹೇಳಲ್ಲ. ಪ್ರತಿಯೊಬ್ಬರಿಗೂ ಅವರದೇ ಜವಾಬ್ದಾರಿ ಇರುತ್ತದೆ. ಅಧ್ಯಕ್ಷರಾದ ಮೇಲೆ ಗಂಗೂಲಿ ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದರು. ನಾನು ಕನಸಲ್ಲೂ ಇಂತಹ ಹುದ್ದೆಯನ್ನು ನೀರಿಕ್ಷಿಸಿರಲಿಲ್ಲ. ನನ್ನ ಈ ಜರ್ನಿಯಲ್ಲಿ ಪಾಲುದಾರರಾಗಿರುವ ನನ್ನ ಆಪ್ತರಿಗೂ ಹಾಗೂ ನನಗೆ ಸಾಕಷ್ಟು ಕೊಟ್ಟಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನಾನು ಆಭಾರಿಯಾಗಿರುತ್ತೇನೆ. ನನಗೆ ಸಿಕ್ಕಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ನಂಬಿಕೆ ಇದೆ. ಆಟಗಾರರ ಗಾಯದ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು. ಟಿ20 ವಿಶ್ವಕಪ್ ಗೆ ಬುಮ್ರಾ ಇಲ್ಲದಿರುವುದು ದೊಡ್ಡ ಹೊಡೆತ ಎಂದರು. ಇನ್ನೂ ಮಹಿಳಾ ಕ್ರಿಕಿಟ್ ಸಾಕಷ್ಟು ಅಭಿವೃದ್ದಿಯಾಗುತ್ತಿದೆ. ಮಹಿಳಾ ಐಪಿಎಲ್ ಗೆ ಸಿದ್ಧತೆ ನಡೆಸಲಾಗುತ್ತಿದೆ. ಎನ್ ಸಿಎ ಅಭಿವೃದ್ದಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ರೋಜರ್ ಬಿನ್ನಿ ಹೇಳಿದ್ದಾರೆ.

ಇದಕ್ಕೂ ಪಾಕ್ ಪ್ರವಾಸದ ಬಗ್ಗೆ ಈ ಮುನ್ನ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಹ  ಏಷ್ಯಾ ಕಪ್‌ಗಾಗಿ ಭಾರತ ಕ್ರಿಕೆಟ್ ತಂಡದ ಪ್ರವಾಸದ ಬಗ್ಗೆ ಗೃಹ ಸಚಿವಾಲಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದರು. 

ಇದನ್ನೂ ಓದಿ : Viral Video: ಎಲ್ಲರ ಮುಂದೆಯೇ ಸೂರ್ಯಕುಮಾರ್ ಯಾದವ್‍ಗೆ ಗೇಲಿ ಮಾಡಿದ ರೋಹಿತ್ ಶರ್ಮಾ!

ಮತ್ತೊಂದು ಕಡೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಆಯೋಜಿಸಿರುವ ಏಷ್ಯಾ ಕಪ್‌ಗೆ ಟೀಂ ಇಂಡಿಯಾದ ತೆರಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ವಿಶ್ವಕಪ್​ಗಾಗಿ ಭಾರತಕ್ಕೆ ಪಾಕಿಸ್ತಾನ ತೆರಳುವುದರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News