Avani Lekhara Story: ಭಾರತದ ಶೂಟರ್ ಅವನಿ ಲೇಖರಾ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ʼನಲ್ಲಿ ಇತಿಹಾಸ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಅವರ ಸತತ ಎರಡನೇ ಪ್ಯಾರಾಲಿಂಪಿಕ್ ಚಿನ್ನವಾಗಿದೆ. ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲೂ ಚಿನ್ನ ಗೆದ್ದಿದ್ದರು.
ಈ ಹಿಂದೆ ನಿರ್ಮಿಸಿದ ದಾಖಲೆಯನ್ನು ಬ್ರೇಕ್ ಮಾಡಿದ ಅವರು, ಪ್ಯಾರಿಸ್ʼನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ಸ್ಪರ್ಧೆಯಲ್ಲಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಇನ್ನು ಅವನಿ ಸತತ ಎರಡು ಚಿನ್ನದ ಪದಕಗಳನ್ನು ಗೆಲ್ಲುವುದರ ಹಿಂದೆ ಹಲವು ವರ್ಷಗಳ ಪರಿಶ್ರಮ ಮತ್ತು ಉತ್ಸಾಹವಿದೆ. ಬಾಲ್ಯದಲ್ಲಿ ಭೀಕರ ರಸ್ತೆ ಅಪಘಾತದಿಂದ ಪಾರ್ಶ್ವವಾಯುವಿಗೆ ಒಳಗಾದ ಅವರ ಹೋರಾಟದ ಕಥೆ ಈಗ ಚಿನ್ನ ಗೆಲ್ಲುವವರೆಗೆ ಎಲ್ಲರಿಗೂ ಸ್ಫೂರ್ತಿಯಾಗಿದೆ.
ಅವನಿ ರಾಜಸ್ಥಾನದ ಜೈಪುರ ಮೂಲದವರು. 2012ರಲ್ಲಿ, ರಸ್ತೆ ಅಪಘಾತಕ್ಕೀಡಾಗಿ ಜೀವನವೇ ತಿರುವು ಪಡೆದುಕೊಂಡಿತು. ರಸ್ತೆ ಅಪಘಾತದಲ್ಲಿ ಆಕೆಯ ಬೆನ್ನುಹುರಿಗೆ ಗಂಭೀರ ಗಾಯಗಳಾಗಿದ್ದು, ಇದರಿಂದಾಗಿ ಪಾರ್ಶ್ವವಾಯುವಿಗೆ ಒಳಗಾದರು. ಇದಾದ ನಂತರ ಗಾಲಿಕುರ್ಚಿಯಲ್ಲೇ ಜೀವನ ಕಳೆಯಬೇಕಾಯಿತು.ಆದರೆ ಅವನಿ ಎಂದಿಗೂ ಛಲ ಬಿಡಲಿಲ್ಲ.
ಅವನಿಯ ತಂದೆ ಆಕೆಯ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದರು. ದೈಹಿಕ ಸವಾಲುಗಳ ಹೊರತಾಗಿಯೂ, ಕ್ರೀಡೆಯಲ್ಲಿನ ಅವನಿಯ ಉತ್ಸಾಹವು ಬಿಲ್ಲುಗಾರಿಕೆಯತ್ತ ಗಮನಹರಿಸುವಂತೆ ಮಾಡಿತು. ಇದು ನಿಖರತೆ, ಗಮನ ಮತ್ತು ಶಿಸ್ತಿನ ಅಗತ್ಯವಿರುವ ಕ್ರೀಡೆಯಾಗಿದೆ. ಅಭಿನವ್ ಬಿಂದ್ರಾ ಅವರ ಸಾಧನೆಗಳಿಂದ ಪ್ರೇರಿತರಾದ ಅವನಿ 2015 ರಲ್ಲಿ ಶೂಟಿಂಗ್ ಪ್ರವೇಶಿಸಿದರು. ಅವರ ಸಮರ್ಪಣೆ ಮತ್ತು ಪ್ರತಿಭೆ ಶೀಘ್ರದಲ್ಲೇ ಅವರನ್ನು ಯಶಸ್ಸಿನತ್ತ ಕೊಂಡೊಯ್ಯಿತು. ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗೆದ್ದರು.
ಕ್ರೀಡೆಯ ಬಗ್ಗೆ ಅಪಾರ ಒಲವು ಹೊಂದಿರುವ ಅವನಿ ತರಬೇತಿಯ ಜೊತೆಗೆ ತನ್ನ ಅಧ್ಯಯನವನ್ನು ಮುಂದುವರೆಸಿದರು. ಬಿಡುವಿಲ್ಲದ ತರಬೇತಿ ವೇಳಾಪಟ್ಟಿಯೊಂದಿಗೆ, ಅವನಿ ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ 5 ವರ್ಷಗಳ ಕಾನೂನು ಪದವಿಗೆ ಪ್ರವೇಶ ಪಡೆದರು. ಇದೆಲ್ಲದರ ಜೊತೆಗೆ, 2021 ರ ಪ್ಯಾರಾಲಿಂಪಿಕ್ಸ್ʼನಲ್ಲಿ ಚಿನ್ನ ಗೆಲ್ಲುವ ಮೂಲಕ ಅವನಿ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು.
ಟೋಕಿಯೊದಲ್ಲಿ ನಡೆದ ಕೊನೆಯ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಲ್ಲ ಎರಡು ಪದಕಗಳನ್ನು ಗೆದ್ದಿದ್ದರು ಅವನಿ. ಶೂಟಿಂಗ್ʼನಲ್ಲಿಯೇ ಮೊದಲ ಚಿನ್ನ ಮತ್ತು ನಂತರ ಕಂಚಿನ ಪದಕ ಗೆದ್ದರು. ಒಂದೇ ಸ್ಪರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಎನಿಸಿಕೊಂಡರು. ಈ ಮಹಾನ್ ಸಾಧನೆಗಾಗಿ, ಅವನಿಗೆ ಪದ್ಮಶ್ರೀ ಮತ್ತು ಖೇಲ್ ರತ್ನದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸಲಾಯಿತು.
ಪ್ಯಾರಿಸ್ʼನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನಂತರ ಮಾತನಾಡಿದ ಅವನಿ, 'ಇದು ಅತ್ಯಂತ ನಿಕಟವಾದ ಫೈನಲ್ ಆಗಿತ್ತು. ಮೊದಲ, ಎರಡನೇ ಮತ್ತು ಮೂರನೇ ಸ್ಥಾನಕ್ಕೆ ಬಹಳ ಕಡಿಮೆ ವ್ಯತ್ಯಾಸವಿತ್ತು, ಆದರೆ ನಾನು ಫಲಿತಾಂಶಗಳಿಗಿಂತ ಹೆಚ್ಚಾಗಿ ನನ್ನ ಆಲೋಚನೆಗಳ ಮೇಲೆ ಕೇಂದ್ರೀಕರಿಸಿದೆ. ಈ ಬಾರಿಯೂ ಅಖಾಡದಲ್ಲಿ ನುಡಿಸಲ್ಪಟ್ಟ ಮೊದಲ ರಾಷ್ಟ್ರಗೀತೆ ಭಾರತದ್ದು ಎಂದು ನನಗೆ ಸಂತೋಷವಾಗಿದೆ. ಇನ್ನೂ ಎರಡು ಈವೆಂಟ್ʼಗಳಲ್ಲಿ ಭಾಗವಹಿಸಬೇಕಿರುವುದರಿಂದ ದೇಶಕ್ಕಾಗಿ ಹೆಚ್ಚು ಪದಕ ಗೆಲ್ಲುವತ್ತ ಗಮನಹರಿಸಿದ್ದೇನೆ" ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.