Babar Azam: ಟಿ20 ಕ್ರಿಕೆಟ್’ನಲ್ಲಿ ಇತಿಹಾಸ ನಿರ್ಮಿಸಿದ ಬಾಬರ್ ಅಜಂ: ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ವಿಶ್ವದಾಖಲೆಯೂ ಬ್ರೇಕ್

Babar Azam Records: ಬಾಬರ್ ಅಜಂ 271 ಇನ್ನಿಂಗ್ಸ್‌’ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರೆ, ಕ್ರಿಸ್ ಗೇಲ್ 285 ಇನ್ನಿಂಗ್ಸ್’ಗಳನ್ನು ತೆಗೆದುಕೊಂಡಿದ್ದರು. ಈ ಪಟ್ಟಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಸಾಧಿಸಲು 299 ಇನ್ನಿಂಗ್ಸ್‌’ಗಳನ್ನು ಆಡಿದ್ದಾರೆ.

Written by - Bhavishya Shetty | Last Updated : Feb 22, 2024, 09:23 AM IST
    • ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಂ
    • ಟಿ20 ಮಾದರಿಯಲ್ಲಿ 10,000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್
    • ಬಾಬರ್ ಅಜಂ 271 ಇನ್ನಿಂಗ್ಸ್‌’ಗಳಲ್ಲಿ ಮೈಲಿಗಲ್ಲು ಸಾಧಿಸಿದ್ದಾರೆ
Babar Azam: ಟಿ20 ಕ್ರಿಕೆಟ್’ನಲ್ಲಿ ಇತಿಹಾಸ ನಿರ್ಮಿಸಿದ ಬಾಬರ್ ಅಜಂ: ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ವಿಶ್ವದಾಖಲೆಯೂ ಬ್ರೇಕ್ title=
Babar Azam

Babar Azam Records: ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಂ ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್‌’ನಲ್ಲಿ ಆಡುತ್ತಿದ್ದಾರೆ. ಈ ಲೀಗ್‌’ನಲ್ಲಿ ಇತಿಹಾಸ ಸೃಷ್ಟಿಸಿದ ಬಾಬರ್, ವೆಸ್ಟ್ ಇಂಡೀಸ್‌ ದಿಗ್ಗಜ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಿಂದಿಕ್ಕಿ ಟಿ20 ಮಾದರಿಯಲ್ಲಿ 10,000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: IPL 2024: ಹೊರಬಿತ್ತು ಐಪಿಎಲ್ ಸಂಬಂಧ ಬಿಗ್ ಅಪ್ಡೇಟ್: ಮೊದಲ ಹಂತದ ವೇಳಾಪಟ್ಟಿ ಇಂದು ಪ್ರಕಟ!

ಬಾಬರ್ ಅಜಂ 271 ಇನ್ನಿಂಗ್ಸ್‌’ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರೆ, ಕ್ರಿಸ್ ಗೇಲ್ 285 ಇನ್ನಿಂಗ್ಸ್’ಗಳನ್ನು ತೆಗೆದುಕೊಂಡಿದ್ದರು. ಈ ಪಟ್ಟಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಸಾಧಿಸಲು 299 ಇನ್ನಿಂಗ್ಸ್‌’ಗಳನ್ನು ಆಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌’ನಲ್ಲಿ (ಪಿಎಸ್‌ಎಲ್) ಪೇಶಾವರ್ ಝಲ್ಮಿ ಪರ ಆಡುತ್ತಿರುವ ಬಾಬರ್‌’ಗೆ ವಿಶ್ವ ದಾಖಲೆ ರಚಿಸಲು ಕೇವಲ ಆರು ರನ್‌’ಗಳ ಅಗತ್ಯವಿತ್ತು. ಅವರು ಕರಾಚಿ ಕಿಂಗ್ಸ್ ವಿರುದ್ಧದ ಪಿಎಸ್ಎಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಟಿ20 ಕ್ರಿಕೆಟ್‌’ನಲ್ಲಿ 10,000 ರನ್ ಪೂರೈಸಿದ ವೇಗದ ಬ್ಯಾಟ್ಸ್‌ಮನ್

1. ಬಾಬರ್ ಅಜಮ್ (ಪಾಕಿಸ್ತಾನ) - 271 ಇನ್ನಿಂಗ್ಸ್

2. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 285 ಇನ್ನಿಂಗ್ಸ್

3. ವಿರಾಟ್ ಕೊಹ್ಲಿ (ಭಾರತ) - 299 ಇನ್ನಿಂಗ್ಸ್

4. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 303 ಇನ್ನಿಂಗ್ಸ್

5. ಆರನ್ ಫಿಂಚ್ (ಆಸ್ಟ್ರೇಲಿಯಾ) - 327 ಇನ್ನಿಂಗ್ಸ್

ಒಟ್ಟಾರೆಯಾಗಿ, ಪಾಕಿಸ್ತಾನದ ಮಾಜಿ ನಾಯಕ ಕಡಿಮೆ ಸ್ವರೂಪದಲ್ಲಿ 10,000 ರನ್ ಗಳಿಸಿದ 13 ನೇ ಆಟಗಾರರಾಗಿದ್ದಾರೆ. ಇದರಲ್ಲಿ ಕ್ರಿಸ್ ಗೇಲ್ 14,562 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಶೋಯೆಬ್ ಮಲಿಕ್ 13,159 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್

1. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 14562 ರನ್

2. ಶೋಯೆಬ್ ಮಲಿಕ್ (ಪಾಕಿಸ್ತಾನ) - 13159 ರನ್

3. ಕೀರಾನ್ ಪೊಲಾರ್ಡ್ (ವೆಸ್ಟ್ ಇಂಡೀಸ್) - 12689 ರನ್

4. ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) - 12209 ರನ್

5. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 12033 ರನ್

6. ವಿರಾಟ್ ಕೊಹ್ಲಿ (ಭಾರತ) - 11994 ರನ್

ಇದನ್ನೂ ಓದಿ: ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಭರ್ಜರಿ ಗಿಫ್ಟ್ ನೀಡಲು ಸಂಪುಟ ಸಭೆಯಲ್ಲಿ ನಿರ್ಧಾರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News