W,0,W,0,W,0... ಈ ಬೌಲರ್ ಬಿರುಗಾಳಿಗೆ ಮಂಕಾದ ಎದುರಾಳಿ ತಂಡ !

Josh Hazlewood: ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾದ ಗೆಲುವಿಗೆ ಅಡಿಪಾಯ ಹಾಕಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಈ ಓವರ್‌ನಲ್ಲಿ ಯಾವುದೇ ರನ್ ನೀಡದೆ ಒಂದರ ಹಿಂದೆ ಒಂದರಂತೆ 3 ವಿಕೆಟ್  ಕಬಳಿಸಿದ್ದಾರೆ.

Written by - Ranjitha R K | Last Updated : Jan 5, 2024, 02:21 PM IST
  • ಗೆಲುವಿನ ಸನಿಹದಲ್ಲಿ ಆಸೀಸ್
  • ಸಿಡ್ನಿ ಟೆಸ್ಟ್ ನಲ್ಲಿ ಕೇಪ್ ಟೌನ್ ದೃಶ್ಯ
  • ಕೇಪ್ ಟೌನ್ ಟೆಸ್ಟ್ ನಲ್ಲಿ ಏನಾಯಿತು?
W,0,W,0,W,0... ಈ ಬೌಲರ್ ಬಿರುಗಾಳಿಗೆ ಮಂಕಾದ ಎದುರಾಳಿ ತಂಡ ! title=

Josh Hazlewood : ಸಿಡ್ನಿ ಟೆಸ್ಟ್‌ನ ಮೂರನೇ ದಿನದಂದು ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಬೌಲರ್ ಜೋಶ್ ಹ್ಯಾಜಲ್‌ವುಡ್ ಮಾರಕ  ಬೌಲಿಂಗ್ ನಿಂದ ಎದುರಾಳಿಯ ಬೆವರಿಳಿಸಿ ಬಿಟ್ಟಿದ್ದಾರೆ. ಇದೀಗ ಪಂದ್ಯ ಬಹುತೇಕ ಆಸ್ಟ್ರೇಲಿಯಾ ಪಾಲಾಗಿದೆ.ಪಾಕಿಸ್ತಾನದ ಎರಡನೇ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಆಸ್ಟ್ರೇಲಿಯಾದ ಗೆಲುವಿಗೆ ಅಡಿಪಾಯ ಹಾಕಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಈ ಓವರ್‌ನಲ್ಲಿ ಯಾವುದೇ ರನ್ ನೀಡದೆ ಒಂದರ ಹಿಂದೆ ಒಂದರಂತೆ 3 ವಿಕೆಟ್  ಕಬಳಿಸಿದ್ದಾರೆ. 

ಗೆಲುವಿನ ಸನಿಹದಲ್ಲಿ ಆಸೀಸ್ : 
ಸಿಡ್ನಿ ಟೆಸ್ಟ್‌ನ ಮೂರನೇ ದಿನದಂದು ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 24 ಓವರ್‌ಗಳಲ್ಲಿ  67 ರನ್ ಗಳಿಸಿ 4 ವಿಕೆಟ್‌ಗೆ ಕಳೆದುಕೊಂಡಿತ್ತು. ಈ ವೇಳೆ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮ್ಮಿನ್ಸ್ 25ನೇ ಓವರ್‌ನಲ್ಲಿ ಜೋಶ್ ಹೇಜಲ್‌ವುಡ್‌ ಅನ್ನು ಬೌಲಿಂಗ್ ಗೆ ಇಳಿಸಿದ್ದಾರೆ. 25ನೇ ಓವರ್‌ನಲ್ಲಿ ಜೋಶ್ ಹೇಜಲ್‌ವುಡ್ ಯಾವುದೇ ರನ್ ನೀಡದೆ 3 ವಿಕೆಟ್ ಕಬಳಿಸಿ ಪಾಕಿಸ್ತಾನ ಕೇವಲ 67 ರನ್ ಗಳಿಗೆ 7 ವಿಕೆಟ್ ಕಳೆದುಕೊಳ್ಳುವಂತಾಯಿತು. 25ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್  ಬೌಲಿಂಗ ಪರಿ  W,0,W,0,W,0 ಎನ್ನುವಂತಾಗಿತ್ತು. 25ನೇ ಓವರ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಅವರ ಮಾರಕ ಬೌಲಿಂಗ್‌ನಿಂದಾಗಿ ಆಸ್ಟ್ರೇಲಿಯಾ ಈ ಟೆಸ್ಟ್ ಪಂದ್ಯವನ್ನು ಗೆಲ್ಲುವ ಸನಿಹಕ್ಕೆ ಬಂದಿದೆ.

ಇದನ್ನೂ ಓದಿ : SA Vs IND: ಕೇಪ್ ಟೌನ್‌ನಲ್ಲಿ ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನ ಬಳಿಕ ವಿರಾಟ್ ಕೊಹ್ಲಿಯ ತಮಾಷೆಯ ಪೋಸ್ ವೈರಲ್

ಸಿಡ್ನಿ ಟೆಸ್ಟ್ ನಲ್ಲಿ  ಕೇಪ್ ಟೌನ್ ದೃಶ್ಯ :  
25ನೇ ಓವರ್ ನಲ್ಲಿ ಜೋಶ್ ಹೇಜಲ್ ವುಡ್ ಸೌದ್ ಶಕೀಲ್ (2), ಶಾಜಿದ್ ಖಾನ್ (0) ಮತ್ತು ಅಘಾ ಸಲ್ಮಾನ್ (0) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ.  ಸಿಡ್ನಿ ಟೆಸ್ಟ್‌ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ ಪಾಕಿಸ್ತಾನದ ಸ್ಕೋರ್ ಎರಡನೇ ಇನಿಂಗ್ಸ್‌ನಲ್ಲಿ 68/7 ಆಗಿತ್ತು.ಇದೀಗ ಕಾಂಗರೂ ಪಡೆ ಸಿಡ್ನಿ ಟೆಸ್ಟ್ ನಲ್ಲಿ ಗೆಲುವಿನ ಸನಿಹಕ್ಕೆ ಬಂದು ನಿಂತಿದೆ. ಸಿಡ್ನಿ ಟೆಸ್ಟ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಅವರ ಮಾರಕ ಬೌಲಿಂಗ್ ಕೇಪ್ ಟೌನ್ ಅನ್ನೇ ನೆನಪಿಸುವಂತಿತ್ತು. 

ಕೇಪ್ ಟೌನ್ ಟೆಸ್ಟ್ ನಲ್ಲಿ ಏನಾಯಿತು?  : 
ಗುರುವಾರ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಕೇಪ್ ಟೌನ್ ಟೆಸ್ಟ್ ಪಂದ್ಯ ಇತಿಹಾಸವನ್ನು ಸೃಷ್ಟಿಸಿದೆ. ಇದು ಅತ್ಯಂತ ಕಡಿಮೆ ಸಮಯದ ಕೆಂಪು ಬಾಲ್ ಪಂದ್ಯವಾಗಿ ಸಾಬೀತಾಗಿದೆ. ಪಂದ್ಯವು ಕೇವಲ ಒಂದೂವರೆ ದಿನಗಳಲ್ಲಿ ಮುಕ್ತಾಯ ಕಂಡಿದೆ. ಕೇವಲ 107 ಓವರ್‌ಗಳು (642 ಎಸೆತಗಳು) ಬೌಲ್ ಆಗಿದ್ದರಿಂದ ಭಾರತವು ಏಳು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿತು. ದಕ್ಷಿಣ ಆಫ್ರಿಕಾ ತನ್ನ ಮೊದಲ ಇನಿಂಗ್ಸ್‌ನಲ್ಲಿ 24 ಓವರ್‌ಗಳಲ್ಲಿ 55 ರನ್ ಗಳಿಸಿತು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 37 ಓವರ್‌ಗಳಲ್ಲಿ 176 ರನ್ ಗಳಿಸಿತು. ಭಾರತ 35 ಓವರ್‌ಗಳಲ್ಲಿ 153 ರನ್ ಗಳಿಸಿ ನಂತರ 12 ಓವರ್‌ಗಳಲ್ಲಿ 80 ರನ್ ಗಳಿಸಿತು. ಈ ಮೂಲಕ ಕೇಪ್ ಟೌನ್ ನಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ.

ಇದನ್ನೂ ಓದಿ : ದಕ್ಷಿಣ ಆಫ್ರಿಕಾದ ಈ ಆಟಗಾರನಿಗೆ ನಮನ ಸಲ್ಲಿಸಿದ ಕೊಹ್ಲಿ !ಟೆಸ್ಟ್‌ ಕೆರಿಯರ್‌ ಗೆ ಗುಡ್‌ ಬೈ ಹೇಳಿದ ಡೀನ್‌ ಎಲ್ಗರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡ

Trending News