ನವದೆಹಲಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಡ್ರಾ ಸಾಧಿಸಲು ಭಾರತಕ್ಕೆ ನೆರವಾದ ಎರಡು ದಿನಗಳ ನಂತರ ಹನುಮಾ ವಿಹಾರಿ ಮತ್ತೆ ಟ್ರೆಂಡಿಂಗ್ ನಲ್ಲಿದ್ದಾರೆ.
ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರೊಂದಿಗೆ 259 ಎಸೆತಗಳ ಜೊತೆಯಾಟವಾಡಿದ್ದಕ್ಕೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ (Babul Supriyo) ಅವರ ಸ್ಟ್ರೈಕ್ ರೇಟ್ ವಿಚಾರವಾಗಿ ಟೀಕಿಸಿದ್ದರು.
ಇದನ್ನೂ ಓದಿ: ಮಹಿಳೆಯರು ತಮ್ಮ ಕುಟುಂಬ ರಕ್ಷಿಸಲು ಖಡ್ಗ ಹಿಡಿಯಬೇಕು -ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ
Playing 109 balls to score 7 !That is atrocious to say the least•Hanuma Bihari has not only killed any Chance for India to achieve a historic win but has also murdered Cricket.. not keeping win an option, even if remotely, is criminal.
PS: I know that I know nothing abt cricket— Babul Supriyo (@SuPriyoBabul) January 11, 2021
ಆದರೆ ಅವರು ಟೀಕಿಸುವ ಬರದಲ್ಲಿ ಹನುಮಾ ಬಿಹಾರಿ ಎಂದು ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.ಇದಕ್ಕೆ ವಿಹಾರಿ (Hanuma Vihari ) ಮಾತ್ರ ತಮ್ಮ ಹೆಸರನ್ನು ಸರಿಪಡಿಸುವುದರ ಮೂಲಕ ಟ್ವೀಟ್ ಪ್ರತಿಕ್ರಿಯೆ ನೀಡಿದ್ದು,ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು '7 ರನ್ ಮಾಡಲು 109 ಎಸೆತಗಳನ್ನು ಆಡುವುದು! ಕನಿಷ್ಠ ಹನುಮಾ ಬಿಹಾರಿ ಅವರು ಭಾರತ ತಂಡವು ಐತಿಹಾಸಿಕ ಗೆಲುವು ಸಾಧಿಸುವುದನ್ನು ಕೊಲೆ ಮಾಡಿರುವುದಷ್ಟೇ ಅಲ್ಲದೆ ಕ್ರಿಕೆಟ್ ನ್ನು ಹತ್ಯೆಗೈದಿದ್ದಾರೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: Australia A vs India: ಹನುಮಾ ವಿಹಾರಿ, ಪಂತ್ ಶತಕ, ಭಾರತಕ್ಕೆ 472 ರನ್ ಮುನ್ನಡೆ
*Hanuma Vihari
— Hanuma vihari (@Hanumavihari) January 13, 2021
ಈಗ ಈ ಟೀಕೆಗೆ ಹನುಮಾ ವಿಹಾರಿ (Hanuma Vihari ) ಅಕ್ಷರ ದೋಷವನ್ನು ಸರಿಪಡಿಸುವ ಮೂಲಕ ಪ್ರತಿಕ್ರಿಯಿಸಿದ್ದು ಎಲ್ಲರ ಗಮನ ಸೆಳೆದಿದೆ. ಕೆಲವು ಬಳಕೆದಾರರು ಕಿಂಗ್ ತನ್ನದೇ ಶೈಲಿಯಲ್ಲಿ ಉತ್ತರಿಸಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೆಲವರು ಸುಪ್ರಿಯೋ ಅವರ ಟ್ವೀಟ್ ಗೆ ಹೆಚ್ಚಿನ ಗಮನ ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ.ವಿಹಾರಿ ಅವರ ಟ್ವೀಟ್ ಪೋಸ್ಟ್ ಮಾಡಿದ ಅರ್ಧ ಘಂಟೆಯೊಳಗೆ 3,000 ಕ್ಕೂ ಹೆಚ್ಚು ಮರು-ಟ್ವೀಟ್‌ಗಳನ್ನು ಮತ್ತು 8,000 ಲೈಕ್‌ಗಳನ್ನು ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.