Asia Cup 2022 Final: ಇಂದು ಏಷ್ಯಾಕಪ್ ಫೈನಲ್: ಲಂಕಾ-ಪಾಕ್ ತಂಡದಲ್ಲಿ ಭಾರೀ ಬದಲಾವಣೆ

ಸದ್ಯ ಉಭಯ ತಂಡಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಮುಖ್ಯವಾಗಿ ಫೈನಲ್ ಪಂದ್ಯಾಟ ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ಭದ್ರತಾ ದೃಷ್ಟಿಯಿಂದ ದುಬೈನಲ್ಲಿ ನಡೆಸಲಾಗುತ್ತಿದೆ. ಸದ್ಯ ಪಾಕಿಸ್ತಾನವನ್ನು ಬಗ್ಗು ಬಡಿಯಲು ಲಂಕಾ ತಂಡ ಭರ್ಜರಿ ತಯಾರಿ ನಡೆಸಿದೆ.  

Written by - Bhavishya Shetty | Last Updated : Sep 11, 2022, 11:37 AM IST
    • ಇಂದು ಏಷ್ಯಾಕಪ್ 2022r ಫೈನಲ್ ಹಣಾಹಣಿ
    • ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಮುಖಾಮುಖಿ
    • ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ಪಂದ್ಯ ಪ್ರಾರಂಭ
Asia Cup 2022 Final: ಇಂದು ಏಷ್ಯಾಕಪ್ ಫೈನಲ್: ಲಂಕಾ-ಪಾಕ್ ತಂಡದಲ್ಲಿ ಭಾರೀ ಬದಲಾವಣೆ title=
Asia Cup 2022

ಇಂದು ಏಷ್ಯಾಕಪ್ ಫೈನಲ್ ಹಣಾಹಣಿ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ನಡೆಯಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿಯಾಗಲಿವೆ. ಇನ್ನು ಏಷ್ಯಾಕಪ್ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಯಾರ ಮುಡಿಗೆ ವಿಜಯಮಾಲೆ ಬೀಳಲಿದೆ ಎಂದು ಕಾದುನೋಡಬೇಕಿದೆ.

ಸದ್ಯ ಉಭಯ ತಂಡಗಳಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಮುಖ್ಯವಾಗಿ ಫೈನಲ್ ಪಂದ್ಯಾಟ ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ಭದ್ರತಾ ದೃಷ್ಟಿಯಿಂದ ದುಬೈನಲ್ಲಿ ನಡೆಸಲಾಗುತ್ತಿದೆ. ಸದ್ಯ ಪಾಕಿಸ್ತಾನವನ್ನು ಬಗ್ಗು ಬಡಿಯಲು ಲಂಕಾ ತಂಡ ಭರ್ಜರಿ ತಯಾರಿ ನಡೆಸಿದೆ.   

ಇದನ್ನೂ ಓದಿ: Team India : ರಿಷಭ್ ಪಂತ್‌ನಿಂದಾಗಿ ಈ ಆಟಗಾರನ ವೃತ್ತಿಜೀವನಕ್ಕೆ ಅಪಾಯ!

ಇನ್ನು ಸೆಪ್ಟೆಂಬರ್ 9ರಂದು ನಡೆದ ಪಂದ್ಯಾಟದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನವನ್ನು ಐದು ವಿಕೆಟ್ ಗಳಿಂದ ಸೋಲಿಸಿತ್ತು. ಅಷ್ಟೇ ಅಲ್ಲದೆ, ಬ್ಯಾಟಿಂಗ್ ಪವರ್‌ಪ್ಲೇ ಸಮಯದಲ್ಲಿ  ಶ್ರೀಲಂಕಾದ ಅಗ್ರ ಕ್ರಮಾಂಕವು ಮೂರು ವಿಕೆಟ್ ನಷ್ಟಕ್ಕೆ ಕೇವಲ 29 ರನ್ ಗಳಿಸಿದ್ದವು. ಬಳಿಕ ನಿಸ್ಸಾಂಕ ಅವರು 48 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ ಮೂರು ಓವರ್‌ಗಳು ಉಳಿದಿರುವಂತೆಯೇ 5 ವಿಕೆಟ್ ನಷ್ಟಕ್ಕೆ 124 ಕ್ಕೆ ತಲುಪಲು ಸಹಾಯ ಮಾಡಿದರು. ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು 19.1 ಓವರ್‌ಗಳಲ್ಲಿ 121 ರನ್‌ ಗಳಿಸಿ ಆಲೌಟ್ ಆಗಿತ್ತು.

ಶ್ರೀಲಂಕಾ ತಂಡದ ಆಟಗಾರರ ಪಟ್ಟಿ ಇಂತಿದೆ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ಡಬ್ಲ್ಯೂ), ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ಸಿ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ, ದಿನೇಶ್ ಚಂಡಿಮಲ್, ಧನಂಜಯ ಡಿ. ವಂಡರ್ಸೆ, ಅಶೇನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮಥೀಶ ಪತಿರಾನ. 

ಇದನ್ನೂ ಓದಿ: Shahid Afridi: ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಪಾಕಿಸ್ತಾನದ ಸ್ಟಾರ್ ಆಟಗಾರನ ಮಗಳು!

ಪಾಕಿಸ್ತಾನ ತಂಡದ ಆಟಗಾರರ ವಿವರ: ಮೊಹಮ್ಮದ್ ರಿಜ್ವಾನ್ (ಡಬ್ಲ್ಯೂ), ಬಾಬರ್ ಅಜಮ್ (ಸಿ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಹಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಉಸ್ಮಾನ್ ಖಾದಿರ್, ಹಸನ್ ಅಲಿ, ಹೈದರ್ ಅಲಿ, ಶಹನವಾಜ್ ದಹಾನಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News