R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ!

R Ashwin Record: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8 ವಿಕೆಟ್ ಪಡೆದರೆ, ಅನಿಲ್ ಕುಂಬ್ಳೆ ಅವರ ಶ್ರೇಷ್ಠ ದಾಖಲೆಯನ್ನು ಬ್ರೇಕ್ ಮಾಡುತ್ತಾರೆ. ದೊಡ್ಡ ಬೌಲರ್ ಅನಿಲ್ ಕುಂಬ್ಳೆ ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಹಂಬಲಿಸುತ್ತಿದ್ದಾರೆ.

Written by - Bhavishya Shetty | Last Updated : Dec 13, 2022, 10:40 AM IST
    • ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ
    • ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ
    • ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆ
R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ! title=
Ravichandran Ashwin

R Ashwin Record: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 14 ರಂದು ಆರಂಭವಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಚಿತ್ತಾಗಾಂಗ್ ನಲ್ಲಿ ನಡೆಯಲಿದೆ. ಭಾರತ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ಅವರ ಶ್ರೇಷ್ಠ ದಾಖಲೆಯನ್ನು ಮುರಿಯುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆ ಕಂಡುಬರುತ್ತಿದೆ.

ಇದನ್ನೂ ಓದಿ: Most consecutive Test series wins at home: ‘’ಅಜೇಯ ಭಾರತ”: ತವರಿನಲ್ಲಿ ಸತತ ಅತಿ ಹೆಚ್ಚು ಟೆಸ್ಟ್ ಸರಣಿ ಗೆದ್ದ ತಂಡದ ದಾಖಲೆ ಹೇಗಿದೆ ನೋಡಿ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8 ವಿಕೆಟ್ ಪಡೆದರೆ, ಅನಿಲ್ ಕುಂಬ್ಳೆ ಅವರ ಶ್ರೇಷ್ಠ ದಾಖಲೆಯನ್ನು ಬ್ರೇಕ್ ಮಾಡುತ್ತಾರೆ. ದೊಡ್ಡ ಬೌಲರ್ ಅನಿಲ್ ಕುಂಬ್ಳೆ ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಹಂಬಲಿಸುತ್ತಿದ್ದಾರೆ. ಇದುವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 442 ವಿಕೆಟ್‌ಗಳನ್ನು ಪಡೆದಿರುವ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಚಿತ್ತಗಾಂಗ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ  8 ವಿಕೆಟ್ ಪಡೆದರೆ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿ ದಾಖಲೆ ಬರೆಯುವುದು ಖಚಿತ.

ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 8 ವಿಕೆಟ್ ಕಬಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 450 ವಿಕೆಟ್ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ ಎರಡನೇ ಬೌಲರ್ ಆಗಲಿದ್ದಾರೆ. ಅನಿಲ್ ಕುಂಬ್ಳೆ 93 ಟೆಸ್ಟ್ ಪಂದ್ಯಗಳಲ್ಲಿ 450 ವಿಕೆಟ್‌ಗಳ ದಾಖಲೆಯನ್ನು ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ 86 ಟೆಸ್ಟ್ ಪಂದ್ಯಗಳಲ್ಲಿ 442 ವಿಕೆಟ್ ಪಡೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ 8 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 450 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಮತ್ತು ವಿಶ್ವದ ಎರಡನೇ ಬೌಲರ್ ಆಗಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 450 ವಿಕೆಟ್‌ಗಳನ್ನು ಪಡೆದ ವಿಶ್ವದಾಖಲೆ ಶ್ರೀಲಂಕಾದ ಅನುಭವಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುತ್ತಯ್ಯ ಮುರಳೀಧರನ್ 80 ಟೆಸ್ಟ್‌ಗಳಲ್ಲಿ 450 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 450 ವಿಕೆಟ್‌ಗಳನ್ನು ಕಬಳಿಸಿದ ವೇಗದ ಬೌಲರ್

1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 80 ಟೆಸ್ಟ್‌ಗಳಲ್ಲಿ

2. ಅನಿಲ್ ಕುಂಬ್ಳೆ (ಭಾರತ) - 93 ಟೆಸ್ಟ್‌ಗಳಲ್ಲಿ

3. ಗ್ಲೆನ್ ಮೆಕ್‌ಗ್ರಾತ್ (ಆಸ್) - 100 ಟೆಸ್ಟ್‌ಗಳಲ್ಲಿ

4. ಶೇನ್ ವಾರ್ನ್ (ಆಸ್ಟ್ರೇಲಿಯಾ) - 101 ಟೆಸ್ಟ್‌ಗಳಲ್ಲಿ

5. ನಾಥನ್ ಲಿಯಾನ್ (ಆಸ್) - 112 ಟೆಸ್ಟ್‌ಗಳಲ್ಲಿ

 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ

1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 800 ಟೆಸ್ಟ್ ವಿಕೆಟ್‌ಗಳು

2. ಶೇನ್ ವಾರ್ನ್ (ಆಸ್ಟ್ರೇಲಿಯಾ) - 708 ಟೆಸ್ಟ್ ವಿಕೆಟ್

3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 675 ಟೆಸ್ಟ್ ವಿಕೆಟ್

4. ಅನಿಲ್ ಕುಂಬ್ಳೆ (ಭಾರತ) - 619 ಟೆಸ್ಟ್ ವಿಕೆಟ್‌ಗಳು

5. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) - 566 ಟೆಸ್ಟ್ ವಿಕೆಟ್

 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್

1. ಅನಿಲ್ ಕುಂಬ್ಳೆ - 619 ಟೆಸ್ಟ್ ವಿಕೆಟ್

2. ರವಿಚಂದ್ರನ್ ಅಶ್ವಿನ್ - 442 ಟೆಸ್ಟ್ ವಿಕೆಟ್

3. ಕಪಿಲ್ ದೇವ್ - 434 ಟೆಸ್ಟ್ ವಿಕೆಟ್

4. ಹರ್ಭಜನ್ ಸಿಂಗ್ - 417 ಟೆಸ್ಟ್ ವಿಕೆಟ್

5. ಇಶಾಂತ್ ಶರ್ಮಾ/ಜಹೀರ್ ಖಾನ್ - 311 ಟೆಸ್ಟ್ ವಿಕೆಟ್

ಇದನ್ನೂ ಓದಿ: KL Rahul Statement on Virat Kohli: ವಿರಾಟ್ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಹೀಗಂದ್ರು ರಾಹುಲ್!! ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದೇಕೆ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News