Arshadeep Singh: ಭಾರತದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಶ್ರೀಲಂಕಾ ವಿರುದ್ಧ ಅತ್ಯಂತ ಕಳಪೆ ಬೌಲಿಂಗ್ ಮಾಡಿದ್ದಾರೆ. ಪಂದ್ಯದಲ್ಲಿ 5 ನೋ ಬಾಲ್‌ಗಳನ್ನು ಎಸೆದಿದ್ದು, ದುಬಾರಿ ಬೌಲರ್ ಎಂದು ಬಿಂಬಿತವಾಗಿದ್ದಾರೆ. ಇವರಿಂದಾಗಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಕಳಪೆ ಬೌಲಿಂಗ್‌ನಿಂದಾಗಿ ಅರ್ಷದೀಪ್ ಸಿಂಗ್ ತಮ್ಮ ಹೆಸರಿನಲ್ಲಿ ಮುಜುಗರದ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: India vs Sri Lanka: ವಿಶಿಷ್ಟ ದಾಖಲೆ ನಿರ್ಮಿಸಿದ ಆರ್ಶ್ದೀಪ್ ಸಿಂಗ್
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 2 ಓವರ್‌ಗಳಲ್ಲಿ 37 ರನ್ ನೀಡಿ 5 ನೋ ಬಾಲ್‌ಗಳನ್ನು ಎಸೆದಿದ್ದಾರೆ. ಇದಾದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ನೀಡಲಿಲ್ಲ. 2022 ರಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ್ದ ಸಿಂಗ್ ಕೇವಲ 6 ತಿಂಗಳಿನಲ್ಲಿ ಟಿ20 ವೃತ್ತಿಜೀವನದಲ್ಲಿ ಅತಿ ಹೆಚ್ಚು ನೋಬಾಲ್ ಬೌಲ್ ಎಸೆದ ಆಟಗಾರ ಎನಿಸಿಕೊಂಡಿದ್ದಾರೆ. 22 ಟಿ20 ಪಂದ್ಯಗಳಲ್ಲಿ 14 ನೋ ಬಾಲ್ ಎಸೆದಿದ್ದಾರೆ.
ಈ ಮೊದಲು ಈ ದಾಖಲೆಯು ಜಂಟಿಯಾಗಿ ಮೂವರು ಬೌಲರ್‌ಗಳ ಹೆಸರಿನಲ್ಲಿತ್ತು. ಇವರಲ್ಲಿ ಪಾಕಿಸ್ತಾನದ ಹಸನ್ ಅಲಿ, ವೆಸ್ಟ್ ಇಂಡೀಸ್‌ನ ಕೀಮೋ ಪಾಲ್ ಮತ್ತು ಒಶಾನೆ ಥಾಮಸ್ ಸೇರಿದ್ದಾರೆ. ಮೂವರೂ 11-11 ನೋ ಬಾಲ್‌ಗಳನ್ನು ಎಸೆದಿದ್ದಾರೆ.
2022 ರ ಟಿ 20 ವಿಶ್ವಕಪ್‌ನಲ್ಲಿ ಅರ್ಷದೀಪ್ ಸಿಂಗ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಅಷ್ಟೇ ಅಲ್ಲದೆ, ಭಾರತ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ಆದರೆ ಅದರ ನಂತರ ಅವರು ತಮ್ಮ ಲಯವನ್ನು ಕಳೆದುಕೊಳ್ಳಲು ಪ್ರಾರಂಭಿಸಿದರು. ಇದುವರೆಗೆ ಟೀಂ ಇಂಡಿಯಾ ಪರ 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 22 ಟಿ20 ಪಂದ್ಯಗಳಲ್ಲಿ 33 ವಿಕೆಟ್ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ರಿಶಬ್ ಪಂತ್ ದಾಖಲಾಗಿರುವ ಆಸ್ಪತ್ರೆ ಫೋಟೋ ಶೇರ್ ಮಾಡಿದ ನಟಿ ಊರ್ವಶಿ ರೌಟೆಲಾ..!
ಶ್ರೀಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ನಂತರ ಟೀಮ್ ಇಂಡಿಯಾದಲ್ಲಿ ಅವರ ಸ್ಥಾನ ಅಪಾಯದಲ್ಲಿದೆ. ಮೂರನೇ ಟಿ20 ಪಂದ್ಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ, ಮುಖೇಶ್ ಕುಮಾರ್ ಗೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡುವ ಅವಕಾಶ ನೀಡಬಹುದು. ಮುಖೇಶ್ ದೇಶೀಯ ಪಂದ್ಯಾವಳಿಗಳಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.