ಬೆಂಗಳೂರಿನಲ್ಲಿ 10 ಕಿ.ಮೀ RACE ಪೂರ್ಣಗೊಳಿಸಿದ 5 ತಿಂಗಳ ಗರ್ಭಿಣಿ

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅಂಕಿತಾ ಗೌರ್ 2013 ರಿಂದ ಟಿಸಿಎಸ್ ವರ್ಲ್ಡ್ 10 ಕೆ ಅನ್ನು ನಡೆಸುತ್ತಿದ್ದಾರೆ. ಬರ್ಲಿನ್ (ಮೂರು ಬಾರಿ), ಬೋಸ್ಟನ್ ಮತ್ತು ನ್ಯೂಯಾರ್ಕ್‌ನಂತಹ ಐದು-ಆರು ಅಂತರರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಕೂಡ ಅವರು ಭಾಗವಹಿಸಿದ್ದಾರೆ.

Written by - Yashaswini V | Last Updated : Dec 24, 2020, 09:14 AM IST
  • ಅಂಕಿತಾ ಗೌರ್ ನಿಯಮಿತವಾಗಿ ಓಡುತ್ತಾರೆ
  • ಅನೇಕ ಅಂತರರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಅವರು ಭಾಗವಹಿಸಿದ್ದಾರೆ
  • ಅಂಕಿತಾ ಗೌರ್ ವೃತ್ತಿಯಲ್ಲಿ ಎಂಜಿನಿಯರ್
ಬೆಂಗಳೂರಿನಲ್ಲಿ 10 ಕಿ.ಮೀ RACE ಪೂರ್ಣಗೊಳಿಸಿದ 5 ತಿಂಗಳ ಗರ್ಭಿಣಿ title=
Image courtesy: Instagram/thecookie_runner

ಬೆಂಗಳೂರು: ಶೀಘ್ರದಲ್ಲೇ ತಾಯಿಯಾಗಲಿರುವ ಅಂಕಿತಾ ಗೌರ್ ಕೇವಲ 62 ನಿಮಿಷಗಳಲ್ಲಿ ಟಿಸಿಎಸ್ ವರ್ಲ್ಡ್ 10 ಕೆ (TCS World 10K) ಓಟವನ್ನು ಪೂರ್ಣಗೊಳಿಸಿದ್ದಾರೆ. ಹೌದು 
ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರು (Bangalore) 2020 ರಲ್ಲಿ ಐದು ತಿಂಗಳ ಗರ್ಭಿಣಿ ಮಹಿಳೆ ಕೇವಲ 62 ನಿಮಿಷಗಳಲ್ಲಿ 10 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿದ್ದಾರೆ. 

ಕಳೆದ ಒಂಬತ್ತು ವರ್ಷಗಳಿಂದ ನಿಯಮಿತವಾಗಿ ಈ ಚಟುವಟಿಕೆ ನಡೆಸುವ ಅಂಕಿತಾ, ಈ ಚಟುವಟಿಕೆಯು ನನ್ನ ಉಸಿರಾಟದಂತೆ. ಅದು ತನಗೆ ಸಹಜವಾಗಿ ಬರುತ್ತದೆ ಎಂದು ನಂಬುತ್ತಾರೆ.

ಇದು ಕಳೆದ ಒಂಬತ್ತು ವರ್ಷಗಳಿಂದ ನಾನು ಮಾಡುತ್ತಿರುವ ಕೆಲಸ, ಬಹುತೇಕ ಪ್ರತಿದಿನ ತಪ್ಪದೇ ನಾನೂ ಒಂದಷ್ಟು ದೂರ ಓಡುತ್ತೇನೆ. ನೀವೂ ಕೂಡ ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ರನ್ನಿಂಗ್ ಮಾಡಿ. ಖಂಡಿತವಾಗಿಯೂ ನೀವು ಗಾಯಗೊಂಡಾಗ ಅಥವಾ ಅನಾರೋಗ್ಯದಿಂದ ಬಳಲುತ್ತಿರುವಾಗ, ನೀವು ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅಂಕಿತಾ ಗೌರ್ 2013 ರಿಂದ ಟಿಸಿಎಸ್ ವರ್ಲ್ಡ್ 10 ಕೆ (TCS World 10K) ಅನ್ನು ನಡೆಸುತ್ತಿದ್ದಾರೆ. ಬರ್ಲಿನ್ (ಮೂರು ಬಾರಿ), ಬೋಸ್ಟನ್ ಮತ್ತು ನ್ಯೂಯಾರ್ಕ್‌ (New York)ನಂತಹ ಐದು-ಆರು ಅಂತರರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಕೂಡ ಅವರು ಭಾಗವಹಿಸಿದ್ದಾರೆ.

ಈ ವರ್ಷದ ಸ್ಪರ್ಧೆಗೆ ಅವರು ಹೇಗೆ ತಯಾರಿ ನಡೆಸಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಂಕಿತಾ ನಾನು ಪ್ರತಿದಿನ ನಿಧಾನವಾಗಿ 5 ರಿಂದ 8 ಕಿ.ಮೀ ಓಡುವ ಮೂಲಕ ಅದನ್ನು ಕರಗತ ಮಾಡಿಕೊಂಡಿರುವುದಾಗಿ ಹೇಳಿದರು.

ಇದನ್ನೂ ಓದಿ: ಕೋಟ್ಲಾದಲ್ಲಿ ಅರುಣ್ ಜೈಟ್ಲಿ ಮೂರ್ತಿ ಸ್ಥಾಪನೆ ವಿಚಾರ, ಬಿಷನ್ ಸಿಂಗ್ ಬೇಡಿ ರಾಜೀನಾಮೆ

ಗರ್ಭಿಣಿಯಾಗಿರುವ ಕಾರಣ ನಾನು ವಿರಾಮ ತೆಗೆದುಕೊಂಡು ಓಡುತ್ತಿದ್ದೆ. ಏಕೆಂದರೆ ಐದು ತಿಂಗಳ ಗರ್ಭಿಣಿಯಾಗಿದ್ದರಿಂದ ನನ್ನ ದೇಹವು ಮೊದಲಿಗಿಂತ ಭಿನ್ನವಾಗಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News