Amit Mishra ‘1 ವಾರ ಸಗಣಿಯಲ್ಲಿರು’ ಎಂದಿದ್ದ ಪಾಕ್ ನಟಿಗೆ ಅಮಿತ್ ಮಿಶ್ರಾ ತಿರುಗೇಟು!

‘ಒಂದು ವೇಳೆ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ಥಾನ ಗೆದ್ದರೆ 1 ವಾರ ಪೂರ್ತಿ ಅಫ್ಘಾನಿ ಚಾಪ್ ತಿನ್ನುತ್ತೇನೆ’ ಅಂತಾ ಅಮಿತ್ ಮಿಶ್ರಾ ಹೇಳಿದ್ದರು.  

Written by - Puttaraj K Alur | Last Updated : Sep 9, 2022, 08:03 AM IST
  • ಒಂದು ವಾರ ಸಗಣಿಯಲ್ಲಿರುವ ಎಂದಿದ್ದ ಪಾಕ್ ನಟಿಗೆ ಅಮಿತ್ ಮಿಶ್ರಾ ತಿರುಗೇಟು
  • ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ಥಾನ ಗೆದ್ದರೆ 1 ವಾರಪೂರ್ತಿ ಅಫ್ಘಾನಿ ಚಾಪ್ ತಿನ್ನುತ್ತೇನೆ ಎಂದಿದ್ದ ಮಿಶ್ರಾ
  • ಮಿಶ್ರಾಗೆ 1ವಾರ ಸಗಣಿಯಲ್ಲಿ ಕಾಲ ಕಳೆಯಬೇಕು ಅಂತಾ ವ್ಯಂಗ್ಯವಾಡಿದ್ದ ಪಾಕ್ ನಟಿ ಸೆಹರ್ ಶಿನ್ವಾರಿ
Amit Mishra ‘1 ವಾರ ಸಗಣಿಯಲ್ಲಿರು’ ಎಂದಿದ್ದ ಪಾಕ್ ನಟಿಗೆ ಅಮಿತ್ ಮಿಶ್ರಾ ತಿರುಗೇಟು! title=
ಪಾಕ್ ನಟಿಗೆ ಅಮಿತ್ ಮಿಶ್ರಾ ತಿರುಗೇಟು

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಟಗಾರ ಅಮಿತ್ ಮಿಶ್ರಾ ಸದ್ಯ ತಮ್ಮ ಟ್ವೀಟ್‍ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ತಮ್ಮ ಕಾಲೆಳೆಯಲು ಯತ್ನಿಸಿದ ಪಾಕಿಸ್ತಾನದ ನಟಿಗೆ ಅಮಿತ್ ಮಿಶ್ರಾ ತಿರುಗೇಟು ನೀಡಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾ ಬಳಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಏಷ್ಯಾಕಪ್ ಸೂಪರ್-4ರ ಹಂತದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‍ಗಳಿಂದ ಸೋಲು ಕಂಡಿತ್ತು. ಗೆಲ್ಲುವ ಪಂದ್ಯದಲ್ಲಿ ಸೋಲು ಕಂಡ ಭಾರತ ತಂಡದ ಪ್ರದರ್ಶನ ಕಂಡು ವಿಶ್ವ ಕ್ರಿಕೆಟ್ ಲೋಕದ ದಿಗ್ಗಜರೇ ಅಚ್ಚರಿ ವ್ಯಕ್ತಪಡಿಸಿದ್ದರು. ಲಂಕಾ ವಿರುದ್ಧ ಸೋತ ಬಳಿಕ ಭಾರತ ತಂಡ ಫೈನಲ್ ತಲುಪಬೇಕಾದರೆ ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ ತಂಡವು ಗೆಲ್ಲಲೇಬೇಕಿತ್ತು.

ಕೊನೆ ಓವರ್‍ವರೆಗೂ ಹೋರಾಟ ನಡೆಸಿದರು ಅಫ್ಘಾನಿಸ್ತಾನ ತಂಡವು ಪಾಕ್ ಎದುರು ರೋಚಕ ಸೋಲು ಕಂಡಿತ್ತು. ಈ ಪಂದ್ಯ ನಡೆಯುವ ಮುನ್ನ ಟ್ವೀಟ್ ಮಾಡಿದ್ದ ಅಮಿತ್ ಮಿಶ್ರಾ, ‘ಒಂದು ವೇಳೆ ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ಥಾನ ಗೆದ್ದರೆ 1 ವಾರ ಪೂರ್ತಿ ಅಫ್ಘಾನಿ ಚಾಪ್ ತಿನ್ನುತ್ತೇನೆ’ ಅಂತಾ ಹೇಳಿದ್ದರು.   

ಇದನ್ನೂ ಓದಿ: Asia Cup 2022: ಏಷ್ಯಾಕಪ್ ನೊಂದಿಗೆ ಈ ಆಟಗಾರನ ಟಿ-20 ವೃತ್ತಿಜೀವನವೂ ಅಂತ್ಯ!

ಆದರೆ ಗೆಲ್ಲಲೇಬೇಕಾಗಿದ್ದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನವು 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆವರೆಗೂ ಹೋರಾಟ ನಡೆಸಿದ ಅಫ್ಘಾನ್ ಬೌಲರ್‍ಗಳು ಪಾಕ್ ತಂಡದ ಬ್ಯಾಟಿಂಗ್ ಬಲವನ್ನೇ ಮುರಿದಿದ್ದರು. ಆದರೆ ಕೊನೆ ಓವರ್‍ನ ಮೊದಲ 2 ಎಸೆತಗಳನ್ನು ಪಾಕಿಸ್ತಾನದ ನದೀಮ್ ಶಾ ಸಿಕ್ಸರ್‍ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟು ಸಂಭ್ರಮಿಸಿದರು.

ಈ ಹಿನ್ನೆಲೆ ಅಮಿತ್ ಮಿಶ್ರಾ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ನಟಿ ಸೆಹರ್ ಶಿನ್ವಾರಿ ‘ಅಯ್ಯೋ.. ಬಡವ ಮಿಶ್ರಾ, ಇನ್ನೊಂದು ವಾರ ಸಗಣಿಯಲ್ಲಿ ಕಾಲ ಕಳೆಯಬೇಕು’ ಅಂತಾ ವ್ಯಂಗ್ಯವಾಡಿದ್ದರು. ಪಾಕ್ ನಟಿಯ ಈ ಟ್ವೀಟ್‍ಗೆ ತಿರುಗೇಟು ನೀಡಿರುವ ಅಮಿತ್ ಮಿಶ್ರಾ, ‘ಇಲ್ಲ, ನನಗೆ ಪಾಕಿಸ್ತಾನಕ್ಕೆ ಬರುವ ಯಾವುದೇ ಯೋಜನೆಯಿಲ್ಲ’ ಅಂತಾ ಹೇಳಿದ್ದಾರೆ.

ಗುರುವಾರ ನಡೆದ ಏಷ್ಯಾಕಪ್ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾವು ಅಫ್ಘಾನಿಸ್ಥಾನದ ವಿರುದ್ಧ 101 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು. ದುಬೈ ಅಂಗಳದಲ್ಲಿ ಅಫ್ಘಾನ್ ಬೌಲರ್‍ಗಳಿಗೆ ಬೆವರಿಳಿಸಿದ ವಿರಾಟ್ ಕೊಹ್ಲಿ ಭರ್ಜರಿ ಅಜೇಯ ಶತಕ(122) ಬಾರಿಸುವ ಮೂಲಕ ತಾವು ಕಿಂಗ್ ಅನ್ನೋದನ್ನು ಮತ್ತೆ ಸಾಬೀತುಪಡಿಸಿದರು. ಬರೋಬ್ಬರಿ 3 ವರ್ಷಗಳ ಬಳಿಕ ಶತಕ ಸಿಡಿಸಿದ ಅವರು ಟಿ-20ಯಲ್ಲಿ ಮೊದಲ ಸೆಂಚ್ಯೂರಿ ಬಾರಿಸಿದ ಸಾಧನೆ ಮಾಡಿದರು.  

ಇದನ್ನೂ ಓದಿ: IND vs AFG : ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾಗೆ 111 ರನ್ ಗಳ ಜಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News