ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ಪಡೆಯಲು ಐಪಿಎಲ್ ತಂಡಕ್ಕೆ ರಾಜೀನಾಮೆ ನೀಡಿದ ಕ್ರಿಕೆಟ್ ದಿಗ್ಗಜ!

Indian Cricket News: ಅಜಿತ್ ಅಗರ್ಕರ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದಾರೆ ಎಂಬ ಸುದ್ದಿಯೊಂದಿಗೆ, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟಿ 20 ತಂಡವನ್ನು ಆಯ್ಕೆ ಮಾಡುವಾಗ ಅವರು ಮುಖ್ಯ ಆಯ್ಕೆಗಾರರಾಗಿ ಸ್ಥಾನ ಪಡೆದುಕೊಳ್ಳಬಹುದು ಎಂಬುದು ಸ್ಪಷ್ಟವಾಗಿದೆ.

Written by - Bhavishya Shetty | Last Updated : Jun 30, 2023, 10:33 AM IST
    • ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರರ ​​ವಾರ್ಷಿಕ ವೇತನವನ್ನು ಒಂದು ಕೋಟಿಯಿಂದ ಹೆಚ್ಚಿಸಬೇಕಾಗಿದೆ
    • ಉಳಿದ ಸದಸ್ಯರ ವೇತನವನ್ನು ಸಹ 90 ಲಕ್ಷದಿಂದ ಹೆಚ್ಚಿಸಬೇಕಾಗಿದೆ.
    • ಕ್ರಿಕೆಟಿಗರ ಅದೃಷ್ಟವನ್ನು ಬದಲಿಸಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶವನ್ನು ನೀಡಲಿದ್ದಾರೆ
ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನ ಪಡೆಯಲು ಐಪಿಎಲ್ ತಂಡಕ್ಕೆ ರಾಜೀನಾಮೆ ನೀಡಿದ ಕ್ರಿಕೆಟ್ ದಿಗ್ಗಜ!  title=
Ajit Agarkar

Indian Cricket News: ಭಾರತೀಯ ಕ್ರಿಕೆಟ್‌ ನಲ್ಲಿ ದೊಡ್ಡ ಪುನಾರಚನೆಯಾಗಿದೆ. ದೇಶದ ಒಳಿತಿಗಾಗಿ ಹಿರಿಯ ಕ್ರಿಕೆಟಿಗರೊಬ್ಬರು ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಬೇಕಾಗಿ ಬಂದಿದೆ. ಭಾರತದ ಹಿರಿಯ ವೇಗದ ಬೌಲರ್ ಅಜಿತ್ ಅಗರ್ಕರ್ ಅವರು ದೆಹಲಿ ಕ್ಯಾಪಿಟಲ್ಸ್ ಐಪಿಎಲ್ ತಂಡದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಆಯ್ಕೆದಾರರಾಗುವ ರೇಸ್‌ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಜಿತ್ ಅಗರ್ಕರ್ ಈಗ ದೇಶದ ಪ್ರತಿಭಾವಂತ ಕ್ರಿಕೆಟಿಗರ ಅದೃಷ್ಟವನ್ನು ಬದಲಿಸಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶವನ್ನು ನೀಡಲಿದ್ದಾರೆ.

ಇದನ್ನೂ ಓದಿ: “ತಪ್ಪನ್ನು ಒಪ್ಪಿಕೊಂಡು ವಿರಾಟ್ ಬಳಿ ಕ್ಷಮೆ ಕೇಳಿ”: ಗಂಭೀರ್’ಗೆ ಪಾಕ್ ಕ್ರಿಕೆಟ್ ದಿಗ್ಗಜನಿಂದ ಕ್ಲಾಸ್

ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರರ ​​ವಾರ್ಷಿಕ ವೇತನವನ್ನು ಒಂದು ಕೋಟಿಯಿಂದ ಹೆಚ್ಚಿಸಬೇಕಾಗಿದೆ, ಉಳಿದ ಸದಸ್ಯರ ವೇತನವನ್ನು ಸಹ 90 ಲಕ್ಷದಿಂದ ಹೆಚ್ಚಿಸಬೇಕಾಗಿದೆ. ಇನ್ನು ದೆಹಲಿ ಕ್ಯಾಪಿಟಲ್ಸ್ ಸಹಾಯಕ ಕೋಚ್ ಮತ್ತು ಕಾಮೆಂಟೇಟರ್ ಅಜಿತ್ ಅಗರ್ಕರ್ ಅವರು ಮುಖ್ಯ ಆಯ್ಕೆಗಾರರ ​​ವಾರ್ಷಿಕ ಪ್ಯಾಕೇಜ್‌ ಗಿಂತ ಹೆಚ್ಚು ಗಳಿಕೆ ಮಾಡುತ್ತಾರೆ. ಒಂದು ವೇಳೆ ಆಯ್ಕೆ ಸಮಿತಿ ಅಧ್ಯಕ್ಷರಾದರೆ ಬಿಸಿಸಿಐ ಪ್ರಸ್ತುತ ವೇತನ ಶ್ರೇಣಿಯನ್ನು ಪರಿಶೀಲಿಸಬೇಕಾಗುತ್ತದೆ.

ದೇಶದ ಒಳಿತಿಗಾಗಿ ಏಕಾಏಕಿ ರಾಜೀನಾಮೆ:

ಅಜಿತ್ ಅಗರ್ಕರ್ ಈಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದಾರೆ ಎಂಬ ಸುದ್ದಿಯೊಂದಿಗೆ, ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಟಿ 20 ತಂಡವನ್ನು ಆಯ್ಕೆ ಮಾಡುವಾಗ ಅವರು ಮುಖ್ಯ ಆಯ್ಕೆಗಾರರಾಗಿ ಸ್ಥಾನ ಪಡೆದುಕೊಳ್ಳಬಹುದು ಎಂಬುದು ಸ್ಪಷ್ಟವಾಗಿದೆ. ಅಗರ್ಕರ್ ಮತ್ತು ಶೇನ್ ವ್ಯಾಟ್ಸನ್ ಇನ್ನು ಮುಂದೆ ಸಹಾಯಕ ಸಿಬ್ಬಂದಿಯ ಭಾಗವಾಗಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ದೃಢಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ತಂಡ, “ಧನ್ಯವಾದಗಳು ಅಜಿತ್ ಮತ್ತು ವ್ಯಾಟ್ಟೊ (ವ್ಯಾಟ್ಸನ್). ಭವಿಷ್ಯಕ್ಕೆ ಶುಭಾಶಯಗಳು” ಎಂದು ಬರೆದುಕೊಂಡಿದೆ.

ಉತ್ತರ ವಲಯದಿಂದ ಚೇತನ್ ಶರ್ಮಾ ಅವರು ಸಮಿತಿಯ ಅಧ್ಯಕ್ಷರಾದಾಗ 2021 ರಲ್ಲಿ ಅಜಿತ್ ಅಗರ್ಕರ್ ಅವರು ಆಯ್ಕೆಗಾರ ಹುದ್ದೆಗೆ ಸಂದರ್ಶನವನ್ನು ನೀಡಿದ್ದರು. ದಿವಂಗತ ರಮಾಕಾಂತ್ ಅಚ್ರೇಕರ್ ಅವರ ಶಿಷ್ಯರಾದ 45 ವರ್ಷದ ಅಜಿತ್ ಅಗರ್ಕರ್ ಅವರು ಭಾರತಕ್ಕಾಗಿ 191 ಏಕದಿನ, 26 ಟೆಸ್ಟ್ ಮತ್ತು ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ: ಯೋಗ-ವ್ಯಾಯಾಮ ಬೇಡ.. ಈ 3 ಬೀಜ ಸೇವಿಸಿದರೆ ಒಂದೇ ವಾರದಲ್ಲಿ ಬೆಲ್ಲಿ ಫ್ಯಾಟ್ ಕರಗುತ್ತೆ!

ಎಂಸಿಎಯ ಈಗಿನ ಪದಾಧಿಕಾರಿಗಳಿಗೆ ಸಲೀಲ್ ಅಂಕೋಲಾ ಇರುವುದರಿಂದ ಅವರಿಗೆ ಯಾವುದೇ ತೊಂದರೆ ಇಲ್ಲ. ದಿಲೀಪ್ ವೆಂಗ್‌ಸರ್ಕರ್ ಮತ್ತು ರವಿಶಾಸ್ತ್ರಿ ಹೆಸರು ಕೂಡ ಊಹಾಪೋಹದಲ್ಲಿದೆ. ಆದರೆ ಅವರು ಅರ್ಜಿ ಸಲ್ಲಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ದೃಢಪಟ್ಟಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News