10 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಈ ಮಾರಕ ಬೌಲರ್! ಈತನ ಬೌಲಿಂಗ್ ಸ್ಪೀಡ್ ಗಂಟೆಗೆ 140 ಕಿ.ಮೀ!

Jaydev Unadkat Cricket: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವರ್ಷಗಳ ನಂತರ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಒಬ್ಬರು ಮರಳುವುದು ಖಚಿತವಾಗಿದ್ದು, ಇದರಿಂದ ಕಾಂಗರೂ ತಂಡವೂ ತಲ್ಲಣಗೊಂಡಿದೆ

Written by - Bhavishya Shetty | Last Updated : Mar 16, 2023, 12:15 PM IST
    • ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲ್ಲಲು ಬಿಸಿಸಿಐ ದೊಡ್ಡ ಪಣತೊಟ್ಟಿದೆ.
    • 10 ವರ್ಷಗಳ ನಂತರ ಏಕದಿನ ತಂಡದಲ್ಲಿ ಮಾರಣಾಂತಿಕ ಆಟಗಾರನಿಗೆ ಬಿಸಿಸಿಐ ಪ್ರವೇಶ ನೀಡಿದೆ.
    • ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ
10 ವರ್ಷಗಳ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಈ ಮಾರಕ ಬೌಲರ್! ಈತನ ಬೌಲಿಂಗ್ ಸ್ಪೀಡ್ ಗಂಟೆಗೆ 140 ಕಿ.ಮೀ! title=
Jaydev Unadkat

Jaydev Unadkat Cricket: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ODI ಸರಣಿಯ ಮೊದಲ ಪಂದ್ಯ ನಾಳೆ ಅಂದರೆ ಶುಕ್ರವಾರ, ಮಾರ್ಚ್ 17 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ 1:30 ರಿಂದ ನಡೆಯಲಿದೆ. 10 ವರ್ಷಗಳ ನಂತರ ಭಾರತದ ಏಕದಿನ ತಂಡದಲ್ಲಿ ಮಾರಕ ಆಟಗಾರನೊಬ್ಬ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆಲ್ಲಲು ಬಿಸಿಸಿಐ ದೊಡ್ಡ ಪಣತೊಟ್ಟಿದೆ. ಈ ODI ಸರಣಿಯನ್ನು ಗೆಲ್ಲಲು, 10 ವರ್ಷಗಳ ನಂತರ ಏಕದಿನ ತಂಡದಲ್ಲಿ ಮಾರಣಾಂತಿಕ ಆಟಗಾರನಿಗೆ ಬಿಸಿಸಿಐ ಪ್ರವೇಶ ನೀಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವರ್ಷಗಳ ನಂತರ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಒಬ್ಬರು ಮರಳುವುದು ಖಚಿತವಾಗಿದ್ದು, ಇದರಿಂದ ಕಾಂಗರೂ ತಂಡವೂ ತಲ್ಲಣಗೊಂಡಿದೆ.

ಇದನ್ನೂ ಓದಿ: ಬರೋಬ್ಬರಿ 60 ಕಂಪನಿಗಳಿಗೆ ಕೋಟಿ ಕೋಟಿ ವಂಚನೆ: ಭಾರತದ ಈ ಸ್ಟಾರ್ ಕ್ರಿಕೆಟಿಗ ಅರೆಸ್ಟ್!

ಈ ಆಟಗಾರ ಏಕಾಂಗಿಯಾಗಿ ಇಡೀ ಪಂದ್ಯವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿ ಹೊಂದಿದ್ದಾನೆ. ಈ ಮ್ಯಾಚ್ ವಿನ್ನರ್ ಬೇರೆ ಯಾರೂ ಅಲ್ಲ, ವೇಗದ ಬೌಲಿಂಗ್‌ನಲ್ಲಿ ಪರಿಣತಿ ಹೊಂದಿರುವ ಜಯದೇವ್ ಉನದ್ಕತ್.

ಜಸ್ಪ್ರೀತ್ ಬುಮ್ರಾ ಈಗ ಟೀಮ್ ಇಂಡಿಯಾದಿಂದ ಬಹಳ ಕಾಲ ಹೊರಗುಳಿಯಲಿದ್ದಾರೆ. ಹೀಗಿರುವಾಗ ಜಯದೇವ್ ಉನದ್ಕತ್ ರಂತಹ ಅಪಾಯಕಾರಿ ವೇಗದ ಬೌಲರ್ 10 ವರ್ಷಗಳ ನಂತರ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಜಯದೇವ್ ಉನದ್ಕತ್ ತಮ್ಮ ಕಿಲ್ಲರ್ ಬೌಲಿಂಗ್ ಮೂಲಕ ವಿಧ್ವಂಸಕರಾಗಲಿದ್ದಾರೆ.

ಜಯದೇವ್ ಉನದ್ಕತ್ ಅವರ ದೊಡ್ಡ ಅವರ ಪ್ರತಿಭೆ ಎಂದರೆ ಆರಂಭಿಕ ಮತ್ತು ಕೊನೆಯ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜಯದೇವ್ ಉನದ್ಕತ್ ಅವರು ವೇಗದೊಂದಿಗೆ ಅತ್ಯುತ್ತಮ ಸ್ವಿಂಗ್ ಹೊಂದಿದ್ದಾರೆ. ಇದರಿಂದಾಗಿ ಅವರು ಬ್ಯಾಟ್ಸ್‌ಮನ್‌’ಗಳಿಗೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಿದ್ದಾರೆ.

ಜಯದೇವ್ ಉನದ್ಕತ್ 10 ವರ್ಷಗಳ ನಂತರ ಏಕದಿನ ತಂಡಕ್ಕೆ ಮರಳುತ್ತಿದ್ದಾರೆ. ಜಯದೇವ್ ಉನದ್ಕತ್ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊಚ್ಚಿಯಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಈ ಪಂದ್ಯದ ನಂತರ ಜಯದೇವ್ ಉನದ್ಕತ್ ಏಕದಿನ ತಂಡದಿಂದ ಹೊರಗುಳಿದಿದ್ದರು. ಆದರೆ ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಧ್ವಂಸಕರಾಗಲು ಸಿದ್ಧರಾಗಿದ್ದಾರೆ. ಜಯದೇವ್ ಉನದ್ಕತ್ ಆಗಮನದಿಂದ ಆಸ್ಟ್ರೇಲಿಯ ತಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಜಯದೇವ್ ಉನದ್ಕತ್ ಗಂಟೆಗೆ 140 ಕಿಮೀ ವೇಗಕ್ಕಿಂತ ವೇಗವಾಗಿ ಬೌಲಿಂಗ್ ಮಾಡುತ್ತಾರೆ. ಜಯದೇವ್ ಉನದ್ಕತ್ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್. ಜಯದೇವ್ ಉನದ್ಕತ್ 7 ಏಕದಿನ ಪಂದ್ಯಗಳಲ್ಲಿ 8 ವಿಕೆಟ್ ಹಾಗೂ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಜಯದೇವ್ ಉನದ್ಕತ್ 2 ಟೆಸ್ಟ್ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಜಯದೇವ್ ಉನದ್ಕತ್ 91 ಐಪಿಎಲ್ ಪಂದ್ಯಗಳಲ್ಲಿ 91 ವಿಕೆಟ್ ಪಡೆದಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿ

ಮೊದಲ ODI, ಮಾರ್ಚ್ 17, ಮಧ್ಯಾಹ್ನ 1.30, ಮುಂಬೈ

ಎರಡನೇ ODI, ಮಾರ್ಚ್ 19, ಮಧ್ಯಾಹ್ನ 1.30, ವಿಶಾಖಪಟ್ಟಣ

ಮೂರನೇ ODI, ಮಾರ್ಚ್ 22, ಮಧ್ಯಾಹ್ನ 1.30, ಚೆನ್ನೈ

ಇದನ್ನೂ ಓದಿ: ಪಬ್ಲಿಕ್’ನಲ್ಲಿ ತಂದೆಗೆ ಎದುರುತ್ತರ ನೀಡಿದ ಟೀಂ ಇಂಡಿಯಾದ ಆಟಗಾರ: ಕೋಪಗೊಂಡ ಸಹೋದರಿ ಏನಂದ್ರು ಗೊತ್ತಾ?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News