ಕೊಹ್ಲಿಗಿಂತಲೂ ಸ್ಟ್ರಾಂಗ್ ಈತ! ರೋಹಿತ್ ಶರ್ಮಾ ಪ್ರಕಾರ ವಿಶ್ವಕಪ್ ಗೆಲ್ಲಿಸಿ ಕೊಡುವ ತಾಕತ್ ಈ ಆಲ್’ರೌಂಡರ್’ಗಿದೆ…

Rohit Sharma on Hardik Pandya: "ಪಾಂಡ್ಯ ಅವರ ಫಾರ್ಮ್ ನಮಗೆ ಮುಖ್ಯವಾಗಿದೆ. ಎರಡೂ ಇನ್ನಿಂಗ್ಸ್‌’ಗಳಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಆಗಿರಲಿ, ಫಾರ್ಮ್ ಎಂಬುದು ಮುಖ್ಯವಾಗಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

Written by - Bhavishya Shetty | Last Updated : Sep 7, 2023, 08:03 AM IST
    • ಆಲ್‌’ರೌಂಡರ್ ಪಾಂಡ್ಯ ವಿಶ್ವಕಪ್‌ ಭಾರತ ತಂಡದ ಉಪನಾಯಕ
    • ವಿಶ್ವಕಪ್‌’ಗೆ ಭಾರತ ತಂಡವನ್ನು ಘೋಷಿಸಿದ ನಂತರ ಮಾತನಾಡಿದ ರೋಹಿತ್ ಶರ್ಮಾ
    • ಕಳೆದ ಕೆಲವು ವರ್ಷಗಳಿಂದ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿಲ್ಲ
ಕೊಹ್ಲಿಗಿಂತಲೂ ಸ್ಟ್ರಾಂಗ್ ಈತ! ರೋಹಿತ್ ಶರ್ಮಾ ಪ್ರಕಾರ ವಿಶ್ವಕಪ್ ಗೆಲ್ಲಿಸಿ ಕೊಡುವ ತಾಕತ್ ಈ ಆಲ್’ರೌಂಡರ್’ಗಿದೆ… title=
Rohit Sharma

Rohit Sharma on Hardik Pandya: ಐಸಿಸಿ ವಿಶ್ವಕಪ್ ಗೆಲ್ಲಲು ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಬಹಳ ಮುಖ್ಯ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಸ್ಟಾರ್ ಆಲ್‌ರೌಂಡರ್ ಪಾಂಡ್ಯ ಅವರನ್ನು ವಿಶ್ವಕಪ್‌’ಗೆ ಭಾರತದ ಉಪನಾಯಕರನ್ನಾಗಿ ಮಾಡಲಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಿಗೆ ಪಾಂಡ್ಯ ನಾಯಕತ್ವ ವಹಿಸಿದ್ದರು. ಇದಲ್ಲದೇ ಟಿ20 ತಂಡದ ನಾಯಕರೂ ಆಗಿದ್ದಾರೆ.

ಇದನ್ನೂ ಓದಿ: ಏಷ್ಯಾಕಪ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆರೋಪ: 38ರ ಹರೆಯದ ಸ್ಟಾರ್ ಸ್ಪಿನ್ನರ್ ಬಂಧನ!

ರೋಹಿತ್ ಶರ್ಮಾ ಹೇಳಿದ್ದೇನು?

ವಿಶ್ವಕಪ್‌’ಗೆ ಭಾರತ ತಂಡವನ್ನು ಘೋಷಿಸಿದ ನಂತರ ಮಾತನಾಡಿದ ರೋಹಿತ್ ಶರ್ಮಾ, “ಪಾಂಡ್ಯ ಅವರ ಫಾರ್ಮ್ ನಮಗೆ ಮುಖ್ಯವಾಗಿದೆ. ಎರಡೂ ಇನ್ನಿಂಗ್ಸ್‌’ಗಳಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಆಗಿರಲಿ, ಫಾರ್ಮ್ ಎಂಬುದು ಮುಖ್ಯವಾಗಿದೆ. ಕಳೆದ ವರ್ಷ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಭಾವ ಬೀರಿದ್ದರು” ಎಂದು ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ಶಕ್ತಿ ಪ್ರದರ್ಶನ!

ಏಷ್ಯಾಕಪ್’ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 66 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ಪಾಂಡ್ಯ ಹಾಗೂ ಇಶಾನ್ ಕಿಶನ್ 266 ರನ್’ಗಳಿಗೆ ಕೊಂಡೊಯ್ದರು. ರೋಹಿತ್, “ನೀವು ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯವನ್ನು ನೋಡಿದ್ದೀರಿ. ಹಾರ್ದಿಕ್ ಮತ್ತು ಇಶಾನ್ ಉತ್ತಮ ರನ್ ಗಳಿಸಿದ್ದರು. ಬೌಲಿಂಗ್ ನಲ್ಲೂ ಹಾರ್ದಿಕ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಬ್ಯಾಟಿಂಗ್‌ನಲ್ಲಿ ಪ್ರಬುದ್ಧತೆ ಇದ್ದು, ಅದು ನಮಗೆ ಉತ್ತಮ ಸಂಕೇತವಾಗಿದೆ” ಎಂದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿಲ್ಲ ಎಂಬುದನ್ನು ರೋಹಿತ್ ಮರೆತಿಲ್ಲ. ಆದರೆ ಏಕದಿನ ಮಾದರಿಯಲ್ಲಿ ಪುನರಾಗಮನ ಮಾಡುವ ಭರವಸೆಯನ್ನು ಹೊಂದಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿ ಗೋಚರಿಸಿದೆ.

“ಒಂಬತ್ತು ಲೀಗ್ ಪಂದ್ಯಗಳು, ಸೆಮಿಫೈನಲ್ ಮತ್ತು ಫೈನಲ್ ಅಂದರೆ 11 ಪಂದ್ಯಗಳನ್ನು ಆಡುವಾಗ 50 ಓವರ್ ಗಳ ಸ್ವರೂಪ ವಿಭಿನ್ನವಾಗಿರುತ್ತದೆ. ಈ ಸ್ವರೂಪದಲ್ಲಿ T20ನಲ್ಲಿ ಇಲ್ಲದ ತಂತ್ರವನ್ನು ಮರುಚಿಂತನೆ ಮಾಡಲು ಸಮಯವಿದೆ” ಎಂದರು.

ಇದನ್ನೂ ಓದಿ: ಇಂದು ಜನ್ಮಾಷ್ಟಮಿ ಶುಭದಿನ: ಈ ರಾಶಿಯ ಜನರಿಗೆ ಸಕಲ ಸಂಪತ್ತು ನೀಡಿ ಅದೃಷ್ಟ ಬೆಳಗುವರು ಮುರಾರಿ

“ನಾವು ಸಂತೋಷವಾಗಿದ್ದೇವೆ. ಬ್ಯಾಲೆಂನ್ಸಿಂಗ್ ಮತ್ತು ಡೆಪ್ತ್ ನೋಡಿದರೆ ಇದು ಅತ್ಯುತ್ತಮ ತಂಡವಾಗಿದೆ. ನಮ್ಮಲ್ಲಿ ಮೂವರು ಆಲ್‌’ರೌಂಡರ್‌’ಗಳು, ನಾಲ್ವರು ಬೌಲರ್‌’ಗಳು ಮತ್ತು ಆರು ಬ್ಯಾಟ್ಸ್‌’ಮನ್‌’ಗಳಿದ್ದಾರೆ. ನಾವು ಸಾಕಷ್ಟು ಯೋಚಿಸಿ ತಂಡವನ್ನು ಆಯ್ಕೆ ಮಾಡಿದ್ದೇವೆ. ಇದು ಅತ್ಯುತ್ತಮ ಸಂಯೋಜನೆಯಾಗಿದೆ. ನಾವು ಬಾಹ್ಯ ವಿಷಯಗಳ ಬಗ್ಗೆ ಹೆದರುವುದಿಲ್ಲ. ಎಲ್ಲಾ ಆಟಗಾರರು ವೃತ್ತಿಪರರು ಮತ್ತು ಅನುಭವವನ್ನು ಹೊಂದಿದ್ದಾರೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್
 ಮಾಡಿ

Trending News