ಆರ್’ಸಿಬಿ ತಂಡ IPL ಟ್ರೋಫಿ ಗೆಲ್ಲದಿರಲು ಇದುವೇ ಪ್ರಮುಖ ಕಾರಣ ಎಂದ ಎಬಿ ಡಿವಿಲಿಯರ್ಸ್

AB de Villiers Statement about RCB: ಆರ್‌’ಸಿಬಿ ಬೌಲಿಂಗ್ ಬಗ್ಗೆ ಎಬಿ ಡಿವಿಲಿಯರ್ಸ್ ಕಳವಳ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2024ರ ಆಟಗಾರರ ಹರಾಜು ಡಿಸೆಂಬರ್ 19 ರಂದು ಯುಎಇಯಲ್ಲಿ ನಡೆಯಲಿದೆ.

Written by - Bhavishya Shetty | Last Updated : Dec 3, 2023, 03:34 PM IST
    • ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಆಟಗಾರರನ್ನು ಬಿಡುಗಡೆ ಮಾಡಿದೆ
    • ಆರ್‌’ಸಿಬಿ ಬೌಲಿಂಗ್ ಬಗ್ಗೆ ಎಬಿ ಡಿವಿಲಿಯರ್ಸ್ ಕಳವಳ ವ್ಯಕ್ತಪಡಿಸಿದ್ದಾರೆ
    • ತಮ್ಮ ಯೂಟ್ಯೂಬ್ ಚಾನೆಲ್‌’ನಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್
ಆರ್’ಸಿಬಿ ತಂಡ IPL ಟ್ರೋಫಿ ಗೆಲ್ಲದಿರಲು ಇದುವೇ ಪ್ರಮುಖ ಕಾರಣ ಎಂದ ಎಬಿ ಡಿವಿಲಿಯರ್ಸ್ title=
AB de Villiers

AB de Villiers on RCB: ಐಪಿಎಲ್ 2024ರ ಕಿರು ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಆಟಗಾರರನ್ನು ಬಿಡುಗಡೆ ಮಾಡಿದೆ. ಮುಂಬೈ ಇಂಡಿಯನ್ಸ್‌’ನಿಂದ ವ್ಯಾಪಾರದ ಮೂಲಕ ತಂಡವು ಕ್ಯಾಮರೂನ್ ಗ್ರೀನ್ ಅವರನ್ನು ತನ್ನ ತಂಡದಲ್ಲಿ ಸೇರಿಸಿಕೊಂಡಿತು. ಆದರೆ ತಂಡದ ಮಾಜಿ ಆಟಗಾರ ಮತ್ತು ಏಸ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಒಂದು ವಿಷಯದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಆರ್‌’ಸಿಬಿ ಬೌಲಿಂಗ್ ಬಗ್ಗೆ ಎಬಿ ಡಿವಿಲಿಯರ್ಸ್ ಕಳವಳ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2024ರ ಆಟಗಾರರ ಹರಾಜು ಡಿಸೆಂಬರ್ 19 ರಂದು ಯುಎಇಯಲ್ಲಿ ನಡೆಯಲಿದೆ.

ಇದನ್ನೂ ಓದಿ: ವಿಶ್ವ ಕ್ರಿಕೆಟ್‌ ಇತಿಹಾಸದಲ್ಲಿನ ಭಯಾನಕ ವೇಗದ ಬೌಲರ್‌ಗಳು ಯಾರು ಗೊತ್ತೆ..? ಇವರೇ ನೋಡಿ

ತಮ್ಮ ಯೂಟ್ಯೂಬ್ ಚಾನೆಲ್‌’ನಲ್ಲಿ ಮಾತನಾಡಿದ ಎಬಿ ಡಿವಿಲಿಯರ್ಸ್, “ಬೌಲಿಂಗ್ ದಾಳಿಗೆ ಆರ್‌ಸಿಬಿ ಇನ್ನಷ್ಟು ಅಸ್ತ್ರಗಳನ್ನು ಸೇರಿಸುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಇದರೊಂದಿಗೆ, ಬೆಂಗಳೂರು ತಂಡವು ತನ್ನ ಅನೇಕ ಮ್ಯಾಚ್ ವಿನ್ನಿಂಗ್ ಬೌಲರ್‌’ಗಳನ್ನು ಕೈಬಿಟ್ಟಿದೆ” ಎಂದು ಅವರು ಹೇಳಿದರು.

“ಈ ಒಂದು ವಿಷಯದ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಸಹಜವಾಗಿ, ಮೊಹಮ್ಮದ್ ಸಿರಾಜ್, ರೈಸಿನ್ ಟೋಪ್ಲಿ ಮತ್ತು ಇತರ ಕೆಲವು ಅನುಭವಿ ಬೌಲರ್‌ಗಳಿದ್ದಾರೆ. ಆದರೆ ನೀವು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ನೋಡಿದರೆ, ವನಿಂದು ಹಸರಂಗ, ಹರ್ಷಲ್ ಪಟೇಲ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ಹೆಸರುಗಳು ಅದರಲ್ಲಿ ಕಂಡುಬರುತ್ತವೆ. ಈ ಮೂವರು ಕಳೆದ ಎರಡು-ಮೂರು ಸೀಸನ್’ಗಳಲ್ಲಿ ತಂಡವನ್ನು ಹಲವು ಪಂದ್ಯಗಳನ್ನು ಗೆಲ್ಲುವಂತೆ ಮಾಡಿದ್ದಾರೆ. ವಿಶೇಷವಾಗಿ ಹ್ಯಾಝಲ್ವುಡ್” ಎಂದಿದ್ದಾರೆ.

RCB ಅನೇಕ ಬೌಲರ್‌’ಗಳನ್ನು ಬಿಡುಗಡೆ ಮಾಡಿದೆ. ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈಗೆ 17.5 ಕೋಟಿ ರೂಪಾಯಿಗಳಿಗೆ ವ್ಯಾಪಾರ ಮಾಡಿದೆ. ಈ ವ್ಯಾಪಾರದಿಂದ ಆರ್ ಸಿಬಿ ಪರ್ಸ್ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಬೆಂಗಳೂರು ಇನ್ನು ಆರು ಆಟಗಾರರನ್ನು ಖರೀದಿಸಬಹುದಾಗಿದ್ದು, ಈ ಪೈಕಿ ಮೂವರು ವಿದೇಶಿ ಆಟಗಾರರು ಇರಲಿದ್ದಾರೆ.

ಅಂದಹಾಗೆ ದುರ್ಬಲ ಬೌಲಿಂಗ್‌’ನಿಂದಾಗಿ ತಂಡವು ಈ ಹಿಂದೆ ಹಲವು ಪಂದ್ಯಗಳಲ್ಲಿ ಸೋತಿದೆ. ಇದು ಹಲವು ವರ್ಷಗಳಿಂದ ಬೆಂಗಳೂರು ತಂಡದ ದೌರ್ಬಲ್ಯ ಎಂದು ಡಿವಿಲಿಯರ್ಸ್ ಕೂಡ ಒಪ್ಪಿಕೊಂಡಿದ್ದಾರೆ

“ಕಳೆದ ಹಲವು ಋತುಗಳಲ್ಲಿ ಬೆಂಗಳೂರಿನ ಬೌಲಿಂಗ್ ದುರ್ಬಲ ಅಂಶವಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕೆಲವೊಮ್ಮೆ ಬ್ಯಾಟ್ಸ್‌ಮನ್‌’ಗಳು ತುಂಬಾ ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೆ ನೀವು ತಂಡವಾಗಿ ಆಡಬೇಕಾಗುತ್ತದೆ. ನೀವು ಒಟ್ಟಿಗೆ ಆಡಬೇಕು, ಪರಸ್ಪರ ಅರ್ಥಮಾಡಿಕೊಳ್ಳಬೇಕು. ಅನೇಕ ಬಾರಿ ಸಣ್ಣ ಸಣ್ಣ ತಪ್ಪುಗಳು ನಡೆಯುತ್ತವೆ. ಶಿಸ್ತು ಕಾಯ್ದುಕೊಳ್ಳುವುದಿಲ್ಲ ಮತ್ತು ಒತ್ತಡದಲ್ಲಿ ಮೂಲಭೂತ ವಿಷಯಗಳನ್ನು ಕಾಳಜಿ ವಹಿಸುವುದಿಲ್ಲ ಎಂದು ತೋರುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಎಷ್ಟು ಕಷ್ಟ ಎಂಬುದು ಗೊತ್ತಿದೆ” ಎಂದಿದ್ದಾರೆ.

ಡಿವಿಲಿಯರ್ಸ್ 2021 ರಲ್ಲಿ ಐಪಿಎಲ್‌’ನಿಂದ ನಿವೃತ್ತರಾದರು. ಅಂದಹಾಗೆ 2011 ರಿಂದ ಈ ತಂಡದೊಂದಿಗೆ ಸಂಬಂಧ ಹೊಂದಿರುವ ಎಬಿಡಿ, ಐಪಿಎಲ್‌’ನಲ್ಲಿ 158.63 ಸ್ಟ್ರೈಕ್ ರೇಟ್‌’ನಲ್ಲಿ ರನ್ ಗಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯ್ಯಾಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಮಹಿಪಾಲ್ ಲೊಮೊರೊರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವಿಜಯಕುಮಾರ್ ವೈಶ್ಯ, ಆಕಾಶ್ ದೀಪ್. ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್.

ವಹಿವಾಟು: ಶಹಬಾಜ್ ಅಹ್ಮದ್ (ನಗದು) ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್‌’ನಿಂದ ಮಯಾಂಕ್ ದಾಗರ್ ಮತ್ತು ಮುಂಬೈ ಇಂಡಿಯನ್ಸ್‌’ನಿಂದ ಕ್ಯಾಮರೂನ್ ಗ್ರೀನ್

ಇದನ್ನೂ ಓದಿ: Suicide case: 2 ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ ಸಾವು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿದ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News