Pakistan Super League 2023: ಸ್ಟಾರ್ ಓಪನರ್ ರೋಹಿತ್ ಶರ್ಮಾ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಟೀಮ್ ಇಂಡಿಯಾದಲ್ಲಿದ್ದಾರೆ. ಸರಣಿಯ 3 ಪಂದ್ಯಗಳು ಮುಗಿದಿದ್ದು, ಟೀಂ ಇಂಡಿಯಾ 2-1 ಮುನ್ನಡೆ ಸಾಧಿಸಿದೆ. ಇದೀಗ ನಾಲ್ಕನೇ ಟೆಸ್ಟ್ ಪಂದ್ಯ ನಾಳೆಯಿಂದ ಅಂದರೆ ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಮಧ್ಯೆ, ರೋಹಿತ್ ಅವರ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್ ಆಟಗಾರ ಮೈದಾನದಲ್ಲಿ ಗದ್ದಲವನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಪಂದ್ಯದ ಮಧ್ಯೆ ಪತ್ನಿ ಜೊತೆ ಭರ್ಜರಿಯಾಗಿ ಹೋಳಿ ಆಡಿದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್: ಫೋಟೋ ನೋಡಿ
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯವೊಂದರಲ್ಲಿ ರೋಹಿತ್ ಶರ್ಮಾ ಅವರ ಬೆಸ್ಟ್ ಫ್ರೆಂಡ್ ಮತ್ತು ಮುಂಬೈ ಇಂಡಿಯನ್ಸ್ ಆಟಗಾರ ಅಬ್ಬರ ಸೃಷ್ಟಿಸಿದರು. ಈ ಆಟಗಾರ ಬೇರೆ ಯಾರೂ ಅಲ್ಲ ಟಿಮ್ ಡೇವಿಡ್. ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಟಿಮ್ ಡೇವಿಡ್ ಆಡುತ್ತಿದ್ದಾರೆ. ಟಿಮ್ ಡೇವಿಡ್ PSL ಪಂದ್ಯದಲ್ಲಿ 222 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಕೇವಲ 27 ಎಸೆತಗಳಲ್ಲಿ 60 ರನ್ ಗಳಿಸಿದ್ದಾರೆ. ಆದರೆ ಅವರ ತಂಡ ಸೋಲನ್ನು ಎದುರಿಸಬೇಕಾಯಿತು.
5⃣0⃣ Partnership and 3⃣0⃣ off the over 😱#HBLPSL8 | #SabSitarayHumaray l #IUvMS pic.twitter.com/kbWimMiLNT
— PakistanSuperLeague (@thePSLt20) March 7, 2023
ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳು:
ಪವರ್ ಹಿಟ್ಟಿಂಗ್ ಮೂಲಕ ಎಲ್ಲರ ಮನಸೆಳೆದ ಟಿಮ್ ಡೇವಿಡ್, ಮುಲ್ತಾನ್ ಸುಲ್ತಾನ್ ಪರ ಬಿರುಸಿನ ಇನ್ನಿಂಗ್ಸ್ ಆಡಿದರು. ಇಸ್ಲಾಮಾಬಾದ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ರುಮಾನ್ ರಯೀಸ್ ಅವರ ಒಂದು ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಬಾರಿಸಿದರು. ಟಿಮ್ ಟೆವಿಡ್ ಅವರ ಅತ್ಯುತ್ತಮ ಇನ್ನಿಂಗ್ಸ್ ಹೊರತಾಗಿಯೂ, ಮುಲ್ತಾನ್ ಸುಲ್ತಾನ್ಸ್ ಪಂದ್ಯದಲ್ಲಿ ಒಂದು ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು.
ಇದನ್ನೂ ಓದಿ: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡ ಟೀಂ ಇಂಡಿಯಾದ ಈ ಬೌಲರ್
ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಸ್ವತಃ ಪಿಎಸ್‌ಎಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ರಯೀಸ್ ಅವರ ಈ ಓವರ್‌ನಲ್ಲಿ ಒಟ್ಟು 30 ರನ್‌ಗಳು ಬಂದಿವೆ. ಇದರಲ್ಲಿ ಡೇವಿಡ್ 4 ಸಿಕ್ಸರ್ ಬಾರಿಸಿದರೆ ಶಾನ್ ಮಸೂದ್ ಬೌಂಡರಿ ಬಾರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ