Asia Cup : ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಈ 5 ಬ್ಯಾಟ್ಸ್‌ಮನ್‌, ಇದ್ರಲ್ಲಿ 2 ಭಾರತೀಯರು!

ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ ಮನ್ ಗಳು ಯಾರು ಗೊತ್ತಾ? ಇಲ್ಲಿದೆ ನೋಡಿ ಫುಲ್ ಲಿಸ್ಟ್..

Written by - Channabasava A Kashinakunti | Last Updated : Aug 11, 2022, 03:31 PM IST
  • ಏಷ್ಯಾ ಕಪ್ 2022 ಯುಎಇಯಲ್ಲಿ ಆಗಸ್ಟ್ 27 ರಿಂದ ಪ್ರಾರಂಭ
  • 28 ರಂದು ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಪಂದ್ಯ
  • ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ ಮನ್
Asia Cup : ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಈ 5 ಬ್ಯಾಟ್ಸ್‌ಮನ್‌, ಇದ್ರಲ್ಲಿ 2 ಭಾರತೀಯರು! title=

Asia Cup 2022 : ಏಷ್ಯಾ ಕಪ್ 2022 ಯುಎಇಯಲ್ಲಿ ಆಗಸ್ಟ್ 27 ರಿಂದ ಪ್ರಾರಂಭವಾಗಲಿದೆ. 28 ರಂದು ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಟೀಂ ಇಂಡಿಯಾ ಅತಿ ಹೆಚ್ಚು ಏಷ್ಯಾಕಪ್ ಗೆದ್ದಿದೆ. ಹಾಗೆ, ಏಷ್ಯಾಕಪ್‌ನಲ್ಲಿ ಅನೇಕ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಏಷ್ಯಾಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್ ಮನ್ ಗಳು ಯಾರು ಗೊತ್ತಾ? ಇಲ್ಲಿದೆ ನೋಡಿ ಫುಲ್ ಲಿಸ್ಟ್..

1. ಸನತ್ ಜಯಸೂರ್ಯ

ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಶ್ರೀಲಂಕಾದ ಅನುಭವಿ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಹೆಸರಿನಲ್ಲಿದೆ. ಜಯಸೂರ್ಯ ಈ ಟೂರ್ನಿಯ 25 ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 1220 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಸರಾಸರಿ 53 ಕ್ಕಿಂತ ಹೆಚ್ಚು. ಈ ಅವಧಿಯಲ್ಲಿ ಅವರು 6 ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ : Team India : ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್‌ಗೆ ಟೀಂ ಇಂಡಿಯಾದಿಂದ ಗೆಟ್ ಪಾಸ್!

2. ಕುಮಾರ್ ಸಂಗಕ್ಕಾರ

ಈ ಪಟ್ಟಿಯಲ್ಲಿ ಶ್ರೀಲಂಕಾದ ಒಬ್ಬ ಬ್ಯಾಟ್ಸ್‌ಮನ್ ಮಾತ್ರ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಸಂಗಕ್ಕಾರ 24 ಪಂದ್ಯಗಳಲ್ಲಿ 48ಕ್ಕೂ ಅಧಿಕ ಸರಾಸರಿಯಲ್ಲಿ 1075 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 4 ಶತಕ ಮತ್ತು 8 ಅರ್ಧ ಶತಕಗಳನ್ನು ಗಳಿಸಿದ್ದಾರೆ.

3. ಸಚಿನ್ ತೆಂಡೂಲ್ಕರ್

ಎಲ್ಲೆಲ್ಲಿ ಅತಿ ಹೆಚ್ಚು ರನ್‌ಗಳು ಬಂದರೂ ಸಚಿನ್ ತೆಂಡೂಲ್ಕರ್ ಅವರ ಹೆಸರು ಪ್ರತಿಯೊಂದು ಪಟ್ಟಿಯಲ್ಲೂ ಇರುತ್ತದೆ. ಏಷ್ಯಾಕಪ್‌ನಲ್ಲಿ ಸಚಿನ್ 21 ಇನ್ನಿಂಗ್ಸ್‌ಗಳಲ್ಲಿ 971 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಸರಾಸರಿ ಕೂಡ 50 ಕ್ಕಿಂತ ಹೆಚ್ಚಿದೆ. ಸಚಿನ್ ಏಷ್ಯಾಕಪ್‌ನಲ್ಲಿ 2 ಶತಕ ಮತ್ತು 7 ಅರ್ಧ ಶತಕಗಳನ್ನು ಬ್ಯಾಟ್‌ನೊಂದಿಗೆ ಗಳಿಸಿದ್ದಾರೆ.

4. ಶೋಯೆಬ್ ಮಲಿಕ್

ಈ ಪಟ್ಟಿಯಲ್ಲಿ ಪಾಕಿಸ್ತಾನದ ಬ್ಯಾಟಿಂಗ್‌ ಆಟಗಾರನ ಹೆಸರೂ ಇದೆ. ಪಾಕಿಸ್ತಾನದ ದಿಗ್ಗಜ ಆಲ್‌ರೌಂಡರ್ ಶೋಯೆಬ್ ಮಲಿಕ್ 21 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ 907 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಸರಾಸರಿ 64.78 ಆಗಿದೆ. ಮಲಿಕ್ ಏಷ್ಯಾಕಪ್ ನಲ್ಲಿ ಮೂರು ಶತಕ ಹಾಗೂ 4 ಅರ್ಧ ಶತಕ ಬಾರಿಸಿದ್ದಾರೆ. ಪಾಕಿಸ್ತಾನ ಪರ ಶೋಯೆಬ್ ಅದ್ಭುತ ಪ್ರದರ್ಶನ ನೀಡಿದ್ದಾರೆ.

5. ರೋಹಿತ್ ಶರ್ಮಾ

ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾರಕ ಆರಂಭಿಕ ಆಟಗಾರ ಮತ್ತು ನಾಯಕ ರೋಹಿತ್ ಶರ್ಮಾ ಅವರ ಹೆಸರೂ ಇದೆ. ರೋಹಿತ್ ಈ ಟೂರ್ನಿಯ 27 ಪಂದ್ಯಗಳಲ್ಲಿ 883 ರನ್ ಗಳಿಸಿದ್ದಾರೆ. ಈ ವೇಳೆ ರೋಹಿತ್‌ ಬ್ಯಾಟ್‌ನಿಂದ ಒಂದು ಶತಕ ಹಾಗೂ 7 ಅರ್ಧಶತಕಗಳು ಸಿಡಿದಿವೆ. ಅವರ ಅತ್ಯುತ್ತಮ ಸ್ಕೋರ್ 11 ರನ್. ರೋಹಿತ್ ಈ ವರ್ಷ ಪಟ್ಟಿಯಲ್ಲಿ ಇನ್ನಷ್ಟು ಎತ್ತರಕ್ಕೆ ಬರಬಹುದು.

ಇದನ್ನೂ ಓದಿ : Serena Williams: ಟೆನ್ನಿಸ್ ಗೆ ವಿದಾಯ ಘೋಷಿಸಿದ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News