ಬೇ ಓವಲ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ನ್ಯೂಜಿಲೆಂಡ್ ವಿರುದ್ಧದ ಮೂರನೇ ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳ ಗೆಲುವು ಸಾಧಿಸಿದ್ದು, ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶ ಪಡಿಸಿಕೊಂಡಿದೆ. ಭಾರತದ ಹ್ಯಾಟ್ರಿಕ್ ಗೆಲುವಿನಿಂದಾಗಿ ನ್ಯೂಜಿಲೆಂಡ್ಗೆ ತವರಿನಲ್ಲೇ ಭಾರೀ ಮುಖಭಂಗವಾಗಿದೆ.
Victory and the series to India. Clinical stuff at Bay Oval. A 7 wicket victory in 43 overs. Scorecard | https://t.co/Xl0rmVpQq2 #NZvIND pic.twitter.com/ozCBUkDhRf
— BLACKCAPS (@BLACKCAPS) January 28, 2019
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ರಾಸ್ ಟೇಲರ್(93) ಹಾಗೂ ಟಾಮ್ ಲಾಥಮ್(51) ಬ್ಯಾಟಿಂಗ್ ನೆರವಿನಿಂದ 49 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 243 ರನ್ ಕಲೆ ಹಾಕಿಟು.
ಆತಿಥೇಯ ನ್ಯೂಜಿಲೆಂಡ್ ನೀಡಿದ 244 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ 7 ಓವರ್ಗಳು ಬಾಕಿಯಿರುವಂತೆ 7 ವಿಕೆಟ್ಗಳ ಅಂತರದಿಂದ ಬಗ್ಗು ಬಡಿದಿದೆ. ಭಾರತ ರೋಹಿತ್ ಶರ್ಮಾ (62), ವಿರಾಟ್ ಕೊಹ್ಲಿ (60), ಶಿಖರ್ ಧವನ್ (28), ಅಂಬಟಿ ರಾಯಡು (ಅಜೇಯ 40) ಮತ್ತು ದಿನೇಶ್ ಕಾರ್ತಿಕ್ (ಅಜೇಯ 38) ಅವರ ಭರ್ಜರಿ ಆಟದ ನೆರವಿನಿಂದ 43 ಓವರುಗಳಲ್ಲಿ 3 ವಿಕೆಟುಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
ಈ ಮೂಲಕ ಕಿವೀಸ್ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಮಣಿಸುವ ಮೂಲಕ ಟೀಂ ಇಂಡಿಯಾ ಕಿವೀಸ್ ನೆಲದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.