ಈ ವರ್ಷದ ಕೊನೆಯ ಅಮವಾಸ್ಯೆ ಯಾವಾಗ? ಡಿಸೆಂಬರ್‌ ಅಮವಾಸ್ಯೆಯ ದಿನಾಂಕ, ಸ್ನಾನ & ದಾನದ ಮಂಗಳಕರ ಸಮಯ ತಿಳಿಯಿರಿ

New moon day 2024: ಈ ವರ್ಷ ಪುಷ್ಯ ಮಾಸದ ಅಮವಾಸ್ಯೆಯ ದಿನಾಂಕ ಸೋಮವಾರ ಬರುತ್ತದೆ. ಇಂತಹ ಸಂದರ್ಭದಲ್ಲಿ ಈ ಅಮವಾಸ್ಯೆಯ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಪುಷ್ಯ ಮಾಸದ ಅಮವಾಸ್ಯೆಯ ದಿನಾಂಕ ಮತ್ತು ಸ್ನಾನ ಮತ್ತು ದಾನದ ಮಂಗಳಕರ ಸಮಯವನ್ನು ತಿಳಿಯಿರಿ.

Written by - Puttaraj K Alur | Last Updated : Dec 10, 2024, 12:26 AM IST
  • ಹಿಂದೂ ಧರ್ಮದಲ್ಲಿ ಪೂರ್ಣಿಮಾ & ಅಮವಾಸ್ಯೆ ದಿನಾಂಕಗಳೆರಡೂ ವಿಶೇಷ ಪ್ರಾಮುಖ್ಯತೆ ಹೊಂದಿವೆ
  • ಈ ಎರಡೂ ದಿನಗಳಲ್ಲಿ ಪುಣ್ಯ ಸ್ನಾನ ಮತ್ತು ದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ
  • ಈ ವರ್ಷ ಪುಷ್ಯ ಮಾಸದ ಅಮವಾಸ್ಯೆಯು ಸೋಮವಾರದಂದು ಬರುವುದರಿಂದ ಬಹಳ ವಿಶೇಷವಾಗಿದೆ
ಈ ವರ್ಷದ ಕೊನೆಯ ಅಮವಾಸ್ಯೆ ಯಾವಾಗ? ಡಿಸೆಂಬರ್‌ ಅಮವಾಸ್ಯೆಯ ದಿನಾಂಕ, ಸ್ನಾನ & ದಾನದ ಮಂಗಳಕರ ಸಮಯ ತಿಳಿಯಿರಿ title=
ಅಮವಾಸ್ಯೆ 2024

Amavasya 2024: ಹಿಂದೂ ಧರ್ಮದಲ್ಲಿ ಪೂರ್ಣಿಮಾ ಮತ್ತು ಅಮವಾಸ್ಯೆ ದಿನಾಂಕಗಳೆರಡೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಎರಡೂ ದಿನಗಳಲ್ಲಿ ಪುಣ್ಯ ಸ್ನಾನ ಮತ್ತು ದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ. ಈ ವರ್ಷ ಪುಷ್ಯ ಮಾಸದ ಅಮವಾಸ್ಯೆಯು ಸೋಮವಾರದಂದು ಬರುವುದರಿಂದ ಬಹಳ ವಿಶೇಷವಾಗಿದೆ. ಯಾವುದೇ ತಿಂಗಳಲ್ಲಿ ಸೋಮವಾರದಂದು ಅಮವಾಸ್ಯೆಯ ತಿಥಿ ಬಂದರೆ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಸೋಮಾವತಿ ಅಮಾವಾಸ್ಯೆಯ ದಿನದಂದು ಶಿವನನ್ನು ಪೂಜಿಸುವುದರಿಂದ ತುಂಬಾ ಫಲ ಸಿಗುತ್ತದೆ. ಇದರೊಂದಿಗೆ ಅಮವಾಸ್ಯೆಯ ದಿನ ಪೂರ್ವಜರಿಗೆ ತರ್ಪಣ, ಪಿಂಡ ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗುತ್ತದೆ. ಹಾಗಾದರೆ ಪುಷ್ಯ ಮಾಸದ ಕೊನೆಯ ಅಮವಾಸ್ಯೆ ಅಂದರೆ 2024ರ ಅಮಾವಾಸ್ಯೆ ಯಾವಾಗ? ಸ್ನಾನ ಮತ್ತು ದಾನಕ್ಕೆ ಮಂಗಳಕರ ಸಮಯ ಯಾವುದು ಎಂದು ತಿಳಿಯಿರಿ..

ಪುಷ್ಯ ಅಮವಾಸ್ಯೆ 2024 ದಿನಾಂಕ

ಪಂಚಾಂಗದ ಪ್ರಕಾರ, ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ತಿಥಿಯು ಡಿಸೆಂಬರ್ 30ರಂದು ಬೆಳಗ್ಗೆ 4.01ಕ್ಕೆ ಪ್ರಾರಂಭವಾಗುತ್ತದೆ. ಅಮಾವಾಸ್ಯೆ ತಿಥಿ ಡಿಸೆಂಬರ್ 31ರಂದು ಮುಂಜಾನೆ 3.56ಕ್ಕೆ ಮುಕ್ತಾಯವಾಗಲಿದೆ. ಉದಯ ತಿಥಿಯ ಪ್ರಕಾರ, ಪುಷ್ಯ ಅಮವಾಸ್ಯೆ ಅಂದರೆ ಸೋಮಾವತಿ ಅಮವಾಸ್ಯೆಯನ್ನು 30 ಡಿಸೆಂಬರ್ 2024ರಂದು ಆಚರಿಸಲಾಗುತ್ತದೆ. 

ಇದನ್ನೂ ಓದಿ: ಹೊಸ ವರ್ಷವು ಈ ರಾಶಿಗಳಿಗೆ ಸಂತೋಷದ ಉಡುಗೊರೆ ತರುತ್ತಿದೆ; 2025ರಲ್ಲಿ ಈ ರಾಶಿಗಳು ತುಂಬಾ ಅದೃಷ್ಟಶಾಲಿಯಾಗ್ತಾರೆ!!

ಪುಷ್ಯ ಅಮಾವಾಸ್ಯೆ ಸ್ನಾನ & ದಾನಕ್ಕೆ ಮಂಗಳಕರ ಸಮಯ 

ಪುಷ್ಯ ಅಮಾವಾಸ್ಯೆಯ ದಿನದಂದು ಸ್ನಾನ ಮತ್ತು ದಾನಕ್ಕೆ ಬ್ರಹ್ಮ ಮುಹೂರ್ತವು ಬೆಳಗ್ಗೆ 5.24ರಿಂದ 6.19ರವರೆಗೆ ಇರುತ್ತದೆ. ಅಮಾವಾಸ್ಯೆಯ ದಿನದಂದು ಸ್ನಾನ ಮಾಡಲು ಮತ್ತು ದಾನ ಮಾಡಲು ಈ ಶುಭ ಸಮಯವು ಉತ್ತಮವಾಗಿರುತ್ತದೆ. ಇದಾದ ನಂತರ ಸ್ನಾನ ಮತ್ತು ದಾನವನ್ನು ಈ ಎರಡೂ ಶುಭಕಾಲದಲ್ಲಿಯೂ ಮಾಡಬಹುದು. ಅಭಿಜಿತ್ ಮುಹೂರ್ತ ಮಧ್ಯಾಹ್ನ 12:03ರಿಂದ 12:45ರವರೆಗೆ ಇರುತ್ತದೆ. ವೃದ್ಧಿ ಯೋಗವು ಬೆಳಗ್ಗೆಯಿಂದ ರಾತ್ರಿ 8.32ರವರೆಗೆ ಇರುತ್ತದೆ.  

ಸೋಮಾವತಿ ಅಮಾವಾಸ್ಯೆಯ ಮಹತ್ವ

ಸೋಮವಾರದಂದು ಅಮವಾಸ್ಯೆ ಬಂದರೆ ಅದರ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಸೋಮಾವತಿ ಅಮಾವಾಸ್ಯೆಯ ದಿನದಂದು ಉಪವಾಸವಿದ್ದು, ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವುದರಿಂದ ಶುಭ ಫಲ ದೊರೆಯುತ್ತದೆ. ಇದರೊಂದಿಗೆ ಸಂತೋಷ, ಸುಖ-ಸಮೃದ್ಧಿ ಉಳಿಯುತ್ತದೆ. ಇದಲ್ಲದೇ ಅಮವಾಸ್ಯೆಯ ದಿನ ಪಿಂಡದಾನ ಮತ್ತು ತರ್ಪಣವನ್ನು ಪೂರ್ವಜರಿಗೆ ಅರ್ಪಿಸುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಮಕ್ಕಳಿಗೆ ಶಿವನ ಈ ಹೆಸರುಗಳನ್ನಿಟ್ಟರೆ ಸಾಕ್ಷಾತ್‌ ಮಹೇಶ್ವರನೇ ಜೀವನಪೂರ್ತಿ ಜೊತೆ ನಿಂತಂತೆ: ಅದೃಷ್ಟ ಸದಾ ಇವರ ಬೆನ್ನಿಗೆ ನಿಲ್ಲುವುದು

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನು ದೃಢಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News