Weekly Horoscope: ಈ ವಾರ 3 ರಾಶಿಯವರಿಗೆ ನಷ್ಟ, 5 ರಾಶಿಯವರಿಗೆ ಭರ್ಜರಿ ಧನಲಾಭ

Weekly Horoscope From September 11th to September 17th: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ಕೆಲವು ರಾಶಿಯವರಿಗೆ ಅತ್ಯುತ್ತಮ ವಾರ ಎಂದು ಸಾಬೀತುಪಡಿಸಿದರೆ, ಇನ್ನೂ ಕೆಲವು ರಾಶಿಯವರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಈ ವಾರ ಯಾವ ರಾಶಿಯವರಿಗೆ ಉತ್ತಮವಾಗಿದೆ. ಯಾರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ... 

Written by - Yashaswini V | Last Updated : Sep 11, 2023, 10:32 AM IST
  • ಈ ವಾರ ಕೆಲವು ರಾಶಿಯವರಿಗೆ ಬಂಪರ್ ಆರ್ಥಿಕ ಪ್ರಯೋಜನವಿದೆ.
  • ಕೆಲವು ರಾಶಿಯವರು ದೀರ್ಘಕಾಲದ ಸಮಸ್ಯೆಯಿಂದ ಪರಿಹಾರವನ್ನು ಪಡೆಯುತ್ತಾರೆ.
  • ಇನ್ನೂ ಕೆಲವು ರಾಶಿಯವರು ನಷ್ಟವನ್ನು ಅನುಭವಿಸಬೇಕಾದ ಸಾಧ್ಯತೆ ಇದೆ
Weekly Horoscope: ಈ ವಾರ 3 ರಾಶಿಯವರಿಗೆ ನಷ್ಟ, 5 ರಾಶಿಯವರಿಗೆ ಭರ್ಜರಿ ಧನಲಾಭ  title=

Weekly Horoscope in  Kannada From September 11th to September 17th: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವಾರ ಕೆಲವು ರಾಶಿಯವರಿಗೆ ಬಂಪರ್ ಆರ್ಥಿಕ ಪ್ರಯೋಜನವಿದೆ. ಕೆಲವು ರಾಶಿಯವರು ದೀರ್ಘಕಾಲದ ಸಮಸ್ಯೆಯಿಂದ ಪರಿಹಾರವನ್ನು ಪಡೆಯುತ್ತಾರೆ. ಇನ್ನೂ ಕೆಲವು ರಾಶಿಯವರು ನಷ್ಟವನ್ನು ಅನುಭವಿಸಬೇಕಾದ ಸಾಧ್ಯತೆ ಇರುವುದರಿಂದ ಈ ವಾರ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯೋಣ... 

ಮೇಷ ರಾಶಿಯವರ ವಾರ ಭವಿಷ್ಯ:  
ವಾರದ ಆರಂಭವು ಮೇಷ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಈ ವಾರ ನೀವು ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ಪಡೆಯಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿಯೂ ಸಹೋದ್ಯೋಗಿಗಳ ಬೆಂಬಲದಿಂದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ವಾರದ ಮಧ್ಯದಲ್ಲಿ ನಿಮ್ಮ ಕೆಲಸಗಳಿಗೆ ತಕ್ಕಂತೆ ವಿಶೇಷ ಕೊಡುಗೆಗಳು ಲಭ್ಯವಾಗಲಿವೆ. ಅದರಲ್ಲೂ ಮುಖ್ಯವಾಗಿ, ಸ್ವಂತ ಉದ್ಯೋಗ ಮಾಡುವವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯವರಿಗೆ ಇದು ಅದೃಷ್ಟದ ವಾರ ಎಂತಲೇ ಹೇಳಬಹುದು. ಉದ್ಯೋಗಸ್ಥರಿಗೆ, ಸ್ವಂತ ವ್ಯವಹಾರ ಮಾಡುವವರಿಗೆ ಅಡೆತಡೆಗಳು ನಿವಾರಣೆ ಆಗಿ ಲಾಭವನ್ನು ನೋಡುವ ಸಮಯ. ವಾರದ ಮಧ್ಯದಲ್ಲಿ ಉದ್ಯೋಗ ನಿಮಿತ್ತ ದಿಢೀರ್ ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ಆದಾಗ್ಯೂ, ಪ್ರಯಾಣವು ಲಾಭದಾಯಕವಾಗಿರುತ್ತದೆ. ನೀವು ಆಸ್ತಿ, ಹೊಸ ವಾಹನ ಖರೀದಿಸಲು ಯೋಚಿಸುತ್ತಿದ್ದರೆ ಈ ವಾರ ಅತ್ಯುತ್ತಮವಾಗಿದೆ. ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಒಂದು ಸುಂದರ ಪ್ರವಾಸವನ್ನೂ ಯೋಜಿಸಬಹುದು. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರಿಗೆ ದೀರ್ಘಕಾಲದ ನಿಮ್ಮ ಕನಸು ಈ ವಾರ ನನಸಾಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ ನೀವು ಬಯಸಿದ ಜಾಗಕ್ಕೆ ವರ್ಗಾವಣೆ ಅವಕಾಶಗಳಿವೆ. ಅಷ್ಟೇ ಅಲ್ಲ, ಉದ್ಯೋಗಸ್ಥರಿಗೆ ಪ್ರಯೋಷನ್ ಸಾಧ್ಯತೆ ಇದ್ದು, ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಬಹುದು. ಪೂರ್ವಜರಾ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವ್ಯಾಜ್ಯಗಳಿದ್ದಾರೆ ಈ ವಾರ ಬಗೆಹರಿಯಲಿದೆ.  ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಇದರಿಂದ ಸಂಪತ್ತು ಹೆಚ್ಚಾಗುತ್ತದೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಗುರಿಯ ಮೇಲೆ ಗಮನ ಕೇಂದ್ರೀಕರಿಸುವುದು ಬಹಳ ಅಗತ್ಯ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿ, ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುವ ಜನರ ಬಗ್ಗೆ ನೀವು ಜಾಗರೂಕರಾಗಿರಬೇಕು. ವಾರದ ಮಧ್ಯ ಭಾಗದಲ್ಲಿ ಕುಟುಂಬಸ್ಥರೊಂದಿಗೆ ವಿವಾದ ಉಂಟಾಗಬಹುದು. ಇದನ್ನು ತಪ್ಪಿಸಲು ಅನಾವಶ್ಯಕ ವಾದ-ವಿವಾದವನ್ನು ತಪ್ಪಿಸಿ. ಈ ವಾರ ನೀವು ನಿಮ್ಮ ಆಪ್ತರಿಂದಲೇ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಹಣಕಾಸಿನ ವಿಷಯದಲ್ಲಿ ತುಂಬಾ ಜಾಗರೂಕರಾಗಿರಿ. 

ಇದನ್ನೂ ಓದಿ- Budh Margi 2023: ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ನೀಡಲಿದ್ದಾನೆ ಮಾರ್ಗಿ ಬುಧ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರಿಗೆ ಈ ವಾರ ವ್ಯಾಪಾರ-ವ್ಯವಹಾರದಲ್ಲಿ ಅಪೇಕ್ಷಿತ ಲಾಭ ದೊರೆಯುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೆ ಅದೃಷ್ಟದ ಬೆಂಬಲವೂ ದೊರೆಯಲಿದೆ. ಸಿಂಹ ರಾಶಿಯವರು ವೃತ್ತಿ ಬದುಕಿನಲ್ಲಿ ಹೊಸ ಉತ್ತುಂಗವನ್ನು ಏರುವರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೂ ಈ ವಾರ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆ. ಈ ವಾರ ಕೆಲಸ ಮಾಡುವ ಮಹಿಳೆಯರು ವಿಶೇಷ ಯಶಸ್ಸನ್ನು  ಪಡೆಯುವರು. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಈ ವಾರದ ಪೂರ್ವಾರ್ಧ ತುಂಬಾ ಮಹತ್ವದ್ದಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆ ಇದ್ದು, ವೃತ್ತಿ-ವ್ಯವಹಾರದಲ್ಲಿ ನಿಮ್ಮ ಬಹುದಿನದ ಕನಸು ನನಸಾಗಲಿದೆ. ನೀವು ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುತ್ತಿದ್ದರೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಬೇಕಾಗಬಹುದು. ಇದಲ್ಲದೆ, ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆಯೂ ಸಮಯ ಉತ್ತಮವಾಗಿದ್ದು ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರಿಗೆ ಈ ವಾರ ಕಾರ್ಯನಿರತವಾಗಿರಲಿದೆ. ಆದಾಗ್ಯೂ, ಕೆಲಸದಲ್ಲಿ ನಿಮ್ಮ ನಿಷ್ಠೆ, ಕಾರ್ಯನಿರತತೆಗೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಸಹ ನಿಮ್ಮ ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಎಲ್ಲಾ ಸವಾಲುಗಳನ್ನು ಜಯಿಸುವಿರಿ. ವಾರದ ಮಧ್ಯದಲ್ಲಿ, ಕುಟುಂಬ ಅಥವಾ ಆಪ್ತ ಸ್ನೇಹಿತರ ಸಹಾಯದಿಂದ, ಪ್ರಮುಖ ಕುಟುಂಬ ಸಂಬಂಧಿತ ಸಮಸ್ಯೆಗೆ ಪರಿಹಾರವನ್ನು ಪಡೆಯುವಿರಿ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯಾಯಾವರಿಗೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಮತ್ತು ವ್ಯವಹಾರದಲ್ಲಿನ ಆರ್ಥಿಕ ಲಾಭಗಳಿಂದಾಗಿ ನೀವು ಅತ್ಯಂತ ಶಕ್ತಿಯುತರಾಗಿರುತ್ತೀರಿ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಈ ವಾರದ ಆರಂಭವು ಶುಭ ಫಲಗಳನ್ನು ನೀಡಲಿದೆ. ಉದ್ಯೋಗಿಗಳಿಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಸಂಪತ್ತು ವೃದ್ಧಿಯಾಗಲಿದೆ. ವೃತ್ತಿ- ವ್ಯವಹಾರಕ್ಕಾಗಿ ನಿಮ್ಮ ಪ್ರಯತ್ನಗಳು ನಿಮ್ಮ ಪ್ರಗತಿಗೆ ಪ್ರಮುಖ ಕಾರಣವಾಗುತ್ತವೆ.  ನೀವು ಜೀವನದಲ್ಲಿ ಪಡೆಯುವ ಪ್ರಗತಿಯಲ್ಲಿ ನಿಮ್ಮ ಸಂಗಾತಿ ಪಾತ್ರ ಮಹತ್ತರವಾಗಿರುತ್ತದೆ. 

ಇದನ್ನೂ ಓದಿ- Tulsi Niyam: ತುಳಸಿ ಸಸ್ಯದ ಬಳಿ ಈ ವಸ್ತುಗಳಿದ್ದರೆ ಈಗಲೇ ತೆಗೆಯಿರಿ, ಇಲ್ಲವೇ...

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರಿಗೆ ಈ ವಾರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಆದಾಗ್ಯೂ, ನಿಮ್ಮ ಸೋಮಾರಿತನವನ್ನು ತ್ಯಜಿಸಿದರಷ್ಟೇ ನೀವು ನಿರೀಕ್ಷಿತ ಫಲ ಪಡೆಯಬಹುದಾಗಿದೆ. ಉದ್ಯೋಗ ರಂಗದಲ್ಲಿ ಯಾವುದೇ ಜವಾಬ್ದಾರಿಯನ್ನು ವಹಿಸಿದರೆ ಬಹಳ ಎಚ್ಚರಿಕೆಯಿಂದ ಅದನ್ನು ನಿರ್ವಹಿಸಿ. ಆಗಷ್ಟೇ, ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ. ಮಾತ್ರವಲ್ಲ, ಸಮಾಜದಲ್ಲಿ ನಿಮ್ಮ ಕೀರ್ತಿ ಗೌರವವೂ ಹೆಚ್ಚಾಗುತ್ತದೆ. ಈ ವಾರ ನೀವು ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ಇದೆ. ಭವಿಷ್ಯದಲ್ಲಿ ಇವರಿಂದ ಭಾರೀ ಲಾಭವನ್ನು ನೀವು ನಿರೀಕ್ಷಿಸಬಹುದಾಗಿದೆ. 

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರಿಗೆ ಈ ವಾರ ಆರೋಗ್ಯ ಸಮಸ್ಯೆಗಳು ಕೊಂಚ ಬಾಧಿಸಬಹುದು. ಇದರಿಂದಾಗಿ ನಿಮ್ಮ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸಲು ನೀವು ಕಷ್ಟಪಡಬೇಕಾಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ದಿನಚರಿ ಮತ್ತು ಆಹಾರ ಪದ್ಧತಿಗಳ ಬಗ್ಗೆ ವಿಶೇಷ ಗಮನಹರಿಸಬೇಕಾಗುತ್ತದೆ. ಯಾವುದೇ ಹೊಸ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವಾಗ ನೀವು ತುಂಬಾ ಜಾಗರೂಕರಾಗಿರುವುದು ಒಳ್ಳೆಯದು. ಇಲ್ಲದಿದ್ದರೆ, ಭಾರೀ ಆರ್ಥಿಕ ಸಂಕಷ್ಟದಲ್ಲಿ ಸಿಲುಕುವಿರಿ. 

ಕುಂಭ ರಾಶಿಯವರ ವಾರ ಭವಿಷ್ಯ:  
ಈ ವಾರ ನೀವು ನಿಮ್ಮ ಸಮಸ್ಯೆಗಳಿಂದ ಕೊಂಚ ಪರಿಹಾರವನ್ನು ಪಡೆಯಬಹುದು. ದೀರ್ಘ ಸಮಯದಿಂದ ಕುಂಠಿತಗೊಂಡಿದ್ದ ಕೆಲಸಗಳು ಈಗ ವೇಗ ಪಡೆಯಲಿವೆ. ವಾರದ ಮಧ್ಯ ಭಾಗದಲ್ಲಿ ಹಠಾತ್ ದೂರ ಪ್ರಯಾಣ ಸಾಧ್ಯತೆ ಇರುವುದರಿಂದ ಇದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿರಿ. ಆದಾಗ್ಯೂ, ಯಾಣವು ಆಹ್ಲಾದಕರವಾಗಿದ್ದು, ಹೊಸ ಸ್ನೇಹ ಸಂಬಂಧಕ್ಕೆ ದಾರಿ ಮಾಡಿಕೊಡಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವುದರಿಂದ ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. 

ಮೀನ ರಾಶಿಯವರ ವಾರ ಭವಿಷ್ಯ: 
ಈ ವಾರ ಮೀನ ರಾಶಿಯವರಿಗೂ ಶುಭ ಫಲಗಳು ಪ್ರಾಪ್ತಿಯಾಗಳಿವೆ. ಜೀವನದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದ್ದು ಇದರ ಸದುಪಯೋಗ ಪಡಿಸಿಕೊಂಡರೆ ಉತ್ತಮ ಲಾಭ ಗಳಿಸುವಿರಿ. ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್ ದೊರೆಯಲಿದೆ. ವಿತ್ತೀಯ ವಿಷಯದಲ್ಲೂ ಲಾಭದ ಸಾಧ್ಯತೆ ಇದ್ದು, ಇದು ನಿಮ್ಮ ಕುಟುಂಬದ ಸಂತೋಷವನ್ನು ಇಮ್ಮಡಿಗೊಳಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News