Weekly Horoscope: ಮುಂದಿನ ವಾರ ಈ 4 ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ

Weekly Horoscope From December 11th to December 17th: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂದಿನ ಸಾಪ್ತಾಹಿಕದಲ್ಲಿ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಇಲ್ಲದಿದ್ದರೆ, ಒಂದೇ ಒಂದು ಸಣ್ಣ ತಪ್ಪಿನಿಂದಲೂ ಸಹ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು ಎನ್ನಲಾಗುತ್ತಿದೆ. 

Written by - Yashaswini V | Last Updated : Dec 8, 2023, 10:51 AM IST
  • ಡಿಸೆಂಬರ್ ಎರಡನೇ ವಾರದ ಸಾಪ್ತಾಹಿಕ ಭವಿಷ್ಯ
  • ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಡಿಸೆಂಬರ್ ಎರಡನೇ ವಾರ ಹೇಗಿರುತ್ತದೆ
  • ಈ ವಾರ ಯಾರಿಗೆ ಅದೃಷ್ಟ, ಯಾರು ಜಾಗರೂಕರಾಗಿರಬೇಕು
Weekly Horoscope: ಮುಂದಿನ ವಾರ ಈ 4 ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ  title=

Weekly Horoscope in Kannada From December 04th to December 10th: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಡಿಸೆಂಬರ್ ಎರಡನೇ ವಾರ ಹೇಗಿರುತ್ತದೆ. ಈ ವಾರ ಯಾರ ಭವಿಷ್ಯ ಹೇಗಿದೆ. ಯಾರಿಗೆ ಶುಭ, ಯಾರು ಎಚ್ಚರಿಕೆಯಿಂದ ಇರಬೇಕು ತಿಳಿಯಿರಿ. 
 
ಮೇಷ ರಾಶಿಯವರ ವಾರ ಭವಿಷ್ಯ:  
ಮೇಷ ರಾಶಿಯವರಿಗೆ ಮುಂದಿನ ವಾರ ಆರೋಗ್ಯ ಸಂಬಂಧಿತ ಸಮಸ್ಯೆಗಳು ಬಾಧಿಸಬಹುದು. ಇದನ್ನು ತಪ್ಪಿಸಲು ಜೀವನಶೈಲಿಯನ್ನು ಸುಧಾರಿಸಿ. ಆಹಾರಪದ್ದತಿಯಲ್ಲಿ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಿ. ಇದರ ಹೊರತಾಗಿಯೂ, ಹಣ ಉಳಿತಾಯದ ವಿಷಯದಲ್ಲಿ ನೀವು ಪ್ರಗತಿ ಹೊಂದುವಿರಿ. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯವರಿಗೂ ಸಹ ಆರೋಗ್ಯದ ದೃಷ್ಟಿಯಿಂದ ಮುಂದಿನ ವಾರ ಅಷ್ಟು ಉತ್ತಮವಾಗಿದೆ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ವಾರದ ಮೊದಲಾರ್ಧ ನೀರು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ. ಅನುಮಾನಾಸ್ಪದ ಹಣಕಾಸಿನ ವ್ಯವಹಾರಗಳಿಂದ ಅಂತರ ಕಾಯ್ದುಕೊಳ್ಳಿ. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರು ಮುಂದಿನ ವಾರ ನಿಮ್ಮ ಕೋಪಕ್ಕೆ ಬುದ್ದಿ ಕೊಡುವುದನ್ನು ತಪ್ಪಿಸಿ. ಅತಿಯಾದ ಒತ್ತಡವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದಾಗ್ಯೂ, ಈ ವಾರ ನೀವು ಕೆಲವು ಹೊಸ ಅವಕಾಶಗಳನ್ನು ಪಡೆಯಬಹುದು. ಚಿಂತನಶೀಲ ಹೂಡಿಕೆಯಿಂದ ಲಾಭ ಗಳಿಸಬಹುದು. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯವರು ಮುಂದಿನ ವಾರ ಮಾನಸಿಕ ಶಾಂತಿಗಾಗಿ ಯೋಗ, ಧ್ಯಾನಗಳನ್ನು ಅಭ್ಯಾಸ ಮಾಡಿರಿ. ಹಣಕಾಸಿನ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ. ಇಲ್ಲವೇ, ಭಾರೀ ನಷ್ಟವನ್ನು ಎದುರಿಸಬೇಕಾಗಬಹುದು. 

ಇದನ್ನೂ ಓದಿ- ಡಿಸೆಂಬರ್ ಅಂತ್ಯದಲ್ಲಿ ಬುಧ-ಶುಕ್ರರ ಸಂಯೋಗದಿಂದ ಲಕ್ಷ್ಮೀ ನಾರಾಯಣ ಯೋಗ: ಈ ರಾಶಿಯವರಿಗೆ ವಿಶೇಷ ಲಾಭ

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರಿಗೆ ಮುಂದಿನ ವಾರ ಆರೋಗ್ಯದ ವಿಷಯದಲ್ಲಿ ಉತ್ತಮವಾಗಿದೆ. ಆದರೆ, ಯಾವುದೇ ಕಾರಣಕ್ಕೂ ಅಸಡ್ಡೆ ಸಲ್ಲದು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿಯು ಮನಸ್ಸಿಗೆ ಉಲ್ಲಾಸವನ್ನು ತರಲಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರಿಗೆ ಮುಂದಿನ ವಾರ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಏರುಪೇರುಗಳು ಕಂಡು ಬರಲಿದೆ. ಕೆಲಸ ಕಾರ್ಯಗಳು ನಿಧಾನಗತಿಯಿಂದ ಸಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿನಡೆಸುವವರಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯವರು ಆರೋಗ್ಯದ ಹಿತ ದೃಷ್ಟಿಯಿಂದ ನಿಮ್ಮ ಆಹಾರ ಪದ್ದತಿಯ ಬಗ್ಗೆ ವಿಶೇಷ ಗಮನಹರಿಸಿ. ವೃತ್ತಿ ಬದುಕಿನಲ್ಲಿ ತುಂಬಾ ಎಚ್ಚರಿಕೆಯ ಹೆಜ್ಜೆಗಳನ್ನಿಡಿ. ನಿಮ್ಮ ಸಣ್ಣ ತಪ್ಪು ಸಹ ನಿಮ್ಮನ್ನು ಭಾರೀ ಸಂಕಷ್ಟಕ್ಕೆ ದೂಡಬಹುದು. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯವರು ಮುಂದಿನ ವಾರ ಅತಿಯಾದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ಆರ್ಥಿಕ ನಷ್ಟ ಎದುರಿಸಬೇಕಾಗಬಹುದು. ಇದರೊಂದಿಗೆ ಬಿಪಿ, ಶುಗರ್ ಸಮಸ್ಯೆ ಇರುವವರು ನಿಮ್ಮ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. 

ಇದನ್ನೂ ಓದಿ- ಈ ರಾಶಿಯವರಿಗೆ ಕೋಪ ಮಾಡಿಕೊಳ್ಳಲು ಕಾರಣವೇ ಬೇಡ ! ಇವರ ಜೊತೆ ಜೀವನ ಬಲು ಕಷ್ಟ 

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯವರಿಗೆ ಮುಂದಿನ ವಾರ ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿದ್ದು, ಅನಿರೀಕ್ಷಿತ ಧನಲಾಭವನ್ನು ನಿರೀಕ್ಷಿಸಬಹುದು. ಆದಾಗ್ಯೂ, ಬೇರೆಯವರ ಮಾತು ಕೇಳಿ ಹೂಡಿಕೆ ಮಾಡುವುದನ್ನು ತಪ್ಪಿಸಿದರೆ, ಒಳಿತು. 

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯವರಿಗೆ ಮುಂಬರುವ ವಾರ ಹಣಕಾಸಿನ ಮೂಲಗಳು] ಹೆಚ್ಚಾಗಲಿದೆ. ಸಹೋದರರು, ಸಹೋದರಿಯರು ಮತ್ತು ಶಿಕ್ಷಕರಿಂದ ಬೆಂಬಲ ವ್ಯಕ್ತವಾಗಲಿದ್ದು ನಿಮ್ಮ ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯವರು ನಿಮ್ಮ ಕೆಟ್ಟ ಅಭ್ಯಾಸಗಳಿಂದ ದೂರ ಸರಿಯದಿದ್ದರೆ ಭವಿಷ್ಯದಲ್ಲಿ ಇದು ನಿಮ್ಮ ಆರೋಗ್ಯ ಸಮಸ್ಯೆಯನ್ನು ಹದಗೆಡಿಸುತ್ತದೆ. ಆದಾಯ ಉತ್ತಮವಾಗಿರಲಿದ್ದು ಮನೆಗಾಗಿ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರೇ ಮುಂದಿನವಾರ ಯಾವುದೇ ಕಾರಣಕ್ಕೂ ಕೆಲಸದ ವಿಚಾರದಲ್ಲಿ ಸಣ್ಣ ಅಜಾಗರೂಕತೆಯನ್ನೂ ಸಹ ತಪ್ಪಿಸಿ. ಆತುರಾತುರವಾಗಿ ಯಾವುದೇ ರೀತಿಯ ನಿರ್ಧಾರಗಳನ್ನೂ ಸಹ ಕೈಗೊಳ್ಳಬೇಡಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News