Weekly Horoscope: ಮುಂದಿನ ವಾರ ಈ 5 ರಾಶಿಯವರಿಗೆ ಭಾರೀ ಅದೃಷ್ಟ

Weekly Horoscope in Kannada: ಮುಂದಿನ ವಾರ ಜನವರಿ 23 ರಿಂದ 29 ರ ವರೆಗೆ ಯಾವ ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ. ಈ ಯಾವ ಯಾರ ಅದೃಷ್ಟ ಖುಲಾಯಿಸಲಿದೆ. ಈ ಅದೃಷ್ಟದ ರಾಶಿಗಳಲ್ಲಿ ನಿಮ್ಮ ರಾಶಿಯೂ ಇದೆಯೇ ತಿಳಿಯಿರಿ.

Written by - Yashaswini V | Last Updated : Jan 20, 2023, 06:57 PM IST
  • ಮುಂದಿನ ವಾರ ಜನವರಿ 23 ರಿಂದ 29ರವರೆಗೆ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.
  • ಮುಂದಿನ ವಾರ ಗ್ರಹಗಳ ಸ್ಥಾನಮಾನಗಳ ಆಧಾರದ ಮೇಲೆ ಐದು ರಾಶಿಯವರಿಗೆ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Weekly Horoscope: ಮುಂದಿನ ವಾರ ಈ 5 ರಾಶಿಯವರಿಗೆ ಭಾರೀ ಅದೃಷ್ಟ  title=
Weekly Horoscope

Weekly Horoscope in Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮುಂದಿನ ವಾರ ಜನವರಿ 23 ರಿಂದ 29ರವರೆಗೆ ದ್ವಾದಶ ರಾಶಿಗಳಲ್ಲಿ ಐದು ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ಹೇಳಲಾಗುತ್ತಿದೆ.  ಮುಂದಿನ ವಾರ ಗ್ರಹಗಳ ಸ್ಥಾನಮಾನಗಳ ಆಧಾರದ ಮೇಲೆ ಐದು ರಾಶಿಯವರಿಗೆ ಬಂಪರ್ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಜನವರಿ 23 ರಿಂದ 29ರವರೆಗೆ  ಹೊಳೆಯಲಿದೆ ಈ ರಾಶಿಯವರ ಅದೃಷ್ಟ:-
ಮಿಥುನ ರಾಶಿ: 

ಮುಂದಿನ ವಾರ ಮಿಥುನ ರಾಶಿಯವರು ವೃತ್ತಿ ರಂಗದಲ್ಲಿ ಭರ್ಜರಿ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲ, ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮದಾಗಲಿದ್ದು, ವೈಯಕ್ತಿಕ ಜೀವನವೂ ಮಧುರವಾಗಿರಲಿದೆ. 

ಸಿಂಹ ರಾಶಿ: 
ಬರುವ ವಾರ ಸಿಂಹ ರಾಶಿಯವರ ಭವಿಷ್ಯ ಸೂರ್ಯನಂತೆ ಉಜ್ವಲಿಸಲಿದೆ. ಇತರರಿಗೆ ನೆರವಾಗುವ ನಿಮ್ಮ ಗುಣದಿಂದಲೇ ನೀವು ಕೀರ್ತಿಯನ್ನು ಪಡೆಯುವಿರಿ. ವ್ಯಾಪಾರ-ವ್ಯವಹಾರದಲ್ಲಿಯೂ ಉತ್ತಮ ಲಾಭವನ್ನು ಗಳಿಸುವಿರಿ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Rahu Transit Effect: 2023ರಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲಿದ್ದಾನೆ ರಾಹು

ಕನ್ಯಾ ರಾಶಿ: 
ಮುಂಬರುವ ವಾರ ಕನ್ಯಾ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಿರುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ನಿಮ್ಮೆಲ್ಲಾ ಕೆಲಸಗಳಲ್ಲೂ ಜಯ ನಿಮ್ಮ ಪಾಲಿಗಿದೆ. ದೀರ್ಘ ಸಮಯದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೊಂಚ ನೆಮ್ಮದಿ ದೊರೆಯಲಿದೆ. ವಿತ್ತೀಯ ಲಾಭದಿಂದ ಆರ್ಥಿಕ ಸಂಕಷ್ಟಗಳು ಬಗೆಹರಿಯಲಿವೆ.

ವೃಶ್ಚಿಕ ರಾಶಿ:
ಮುಂದಿನ ವಾರ ಗ್ರಹಗತಿಗಳು ಈ ರಾಶಿಯವರಿಗೆ ಬಹಳ ಪ್ರಯೋಜನಕಾರಿ ಆಗಿವೆ. ಸ್ವಲ್ಪ ತಾಳ್ಮೆಯಿಂದ ನಿರ್ಧಾರಗಳನ್ನು ಕೈಗೊಳ್ಳುವುದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.  ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಹಣಕಾಸಿನ ಸ್ಥಿತಿ ಬಲಗೊಳ್ಳುವ ಸಾಧ್ಯತೆ ಇದೆ. 

ಇದನ್ನೂ ಓದಿ- Mangala Margi: ಈ ಮೂರು ರಾಶಿಯವರಿಗೆ ಅಪಾರ ಧನ ಸಂಪತ್ತು ಕರುಣಿಸಲಿದ್ದಾನೆ ಮಾರ್ಗಿ ಮಂಗಳ

ಧನು ರಾಶಿ: 
ನಿಮ್ಮ ಹಳೆಯ ಹೂಡಿಕೆಗಳಿಂದ ಲಾಭವಾಗಲಿದೆ. ಕೌಟುಂಬಿಕ ಸುಖ-ಶಾಂತಿ ನಿಮ್ಮದಾಗಲಿದೆ. ಹಣಕಾಸಿನ ಹರಿವು ಹೆಚ್ಚಾಗಿ ಮನಸ್ಸಿಗೆ ಸಂತಸವಾಗಲಿದೆ. ಮದುವೆಗಾಗಿ ಪ್ರಯತ್ನಿಸುತ್ತಿರುವವರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆಯೂ ಇದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News