Vijaya Ekadashi 2024: ಇಂದು ಶ್ರೀಹರಿಯ ಕೃಪೆಯಿಂದ ಹೆಚ್ಚಾಗಲಿದೆ ಈ 4 ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್

Vijaya Ekadashi 2024: ಇಂದು (ಮಾರ್ಚ್ 06) ವಿಜಯ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಕಾದಶಿಯು ಭಗವಾನ್ ವಿಷ್ಣುವಿಗೆ ಮೀಸಲಾಗಿರುವ ದಿನವಾಗಿದೆ. ಈ ಶುಭ ದಿನದಂದು ವಿಷ್ಣುವು ಕೆಲವು ರಾಶಿಯವರ ಮೇಲೆ ಕೃಪೆ ತೋರಲಿದ್ದು, ಇದರಿಂದ ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Mar 6, 2024, 07:54 AM IST
  • ಈ ವರ್ಷ ಇಂದು ಎಂದರೆ ಮಾರ್ಚ್ 06ರ ಬುಧವಾರದಂದು ವಿಜಯ ಏಕಾದಶಿಯನ್ನು ಆಚರಿಸಲಾಗುತ್ತಿದೆ.
  • ಈ ದಿನ ಭಗವಾನ್ ವಿಷ್ಣು ಮತ್ತು ಸಂಪತ್ತಿನ ಒಡತಿಯಾದ ತಾಯಿ ಲಕ್ಷ್ಮೀದೇವಿಯನ್ನು ಪೂಜಿಸಿ ದಾನ ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ.
  • ಈ ದಿನ ಸಂಜೆ ತುಳಸಿ ಕಟ್ಟೆ ಮುಂದೆ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ದೂರವಾಗಿ, ಧನಾತ್ಮಕ ಶಕ್ತಿ ಪ್ರವೇಶವಾಗುತ್ತದೆ.
Vijaya Ekadashi 2024: ಇಂದು ಶ್ರೀಹರಿಯ ಕೃಪೆಯಿಂದ ಹೆಚ್ಚಾಗಲಿದೆ ಈ 4 ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್  title=

Vijaya Ekadashi 2024: ಸನಾತನ ಧರ್ಮದಲ್ಲಿ ಪ್ರತಿ ಏಕಾದಶಿಗೂ ಸಹ ಅದರದೇ ಆದ ಮಹತ್ವವಿದೆ ಎಂದು ಬಣ್ಣಿಸಲಾಗಿದೆ.  ಎಲ್ಲಾ ಏಕಾದಶಿ ದಿನಾಂಕಗಳನ್ನು ಭಗವಾನ್ ವಿಷ್ಣುವಿಗೆ ಸಮರ್ಪಿಸಲಾಗಿದೆ. ಏಕಾದಶಿಯ ದಿನದಂದು ವ್ರತ, ಉಪವಾಸವನ್ನು ಆಚರಿಸುವುದರಿಂದ ಶ್ರೀಹರಿಯ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆಯೂ ಇದೆ. 

ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಹನ್ನೊಂದನೇ ದಿನದಂದು ವಿಜಯ ಏಕಾದಶಿಯನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ವಿಜಯ ಏಕಾದಶಿ ಬರುತ್ತದೆ. ವಿಜಯ ಏಕಾದಶಿಯನ್ನು ಫಾಲ್ಗುಣ ಕೃಷ್ಣ ಏಕಾದಶಿ ಎಂದೂ ಸಹ ಕರೆಯಲಾಗುತ್ತದೆ. ವಿಜಯ ಎಂಬ ಪದದ ಅರ್ಥ ವಿಜಯ ಮತ್ತು ಈ ದಿನ ಶ್ರದ್ಧಾ ಭಕ್ತಿಯಿಂದ ವ್ರತ, ಉಪವಾಸವನ್ನು ಆಚರಿಸುವವರು ಭಗವಾನ್ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು. ಅವರ ಪ್ರತಿ ಕೆಲಸದಲ್ಲೂ ವಿಜಯ ಕಟ್ಟಿಟ್ಟ ಬುತ್ತಿ ಎಂದು ನಂಬಲಾಗಿದೆ.  

ಈ ವರ್ಷ ಇಂದು ಎಂದರೆ ಮಾರ್ಚ್ 06ರ ಬುಧವಾರದಂದು ವಿಜಯ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಈ ದಿನ ಭಗವಾನ್ ವಿಷ್ಣು ಮತ್ತು ಸಂಪತ್ತಿನ ಒಡತಿಯಾದ ತಾಯಿ ಲಕ್ಷ್ಮೀದೇವಿಯನ್ನು ಪೂಜಿಸಿ ದಾನ ಮಾಡುವುದರಿಂದ, ನಿರ್ಗತಿಕರಿಗೆ ಆಹಾರ, ಬಟ್ಟೆಯನ್ನು ನೀಡುವುದರಿಂದ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳು ದೂರವಾಗುತ್ತವೆ. ಈ ದಿನ ಸಂಜೆ ತುಳಸಿ ಕಟ್ಟೆ ಮುಂದೆ ದೀಪವನ್ನು ಬೆಳಗಿಸುವುದರಿಂದ ಮನೆಯಲ್ಲಿ ನಕಾರಾತ್ಮಕತೆ ದೂರವಾಗಿ, ಧನಾತ್ಮಕ ಶಕ್ತಿ ಪ್ರವೇಶವಾಗುತ್ತದೆ. ಅಂತಹ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ನೆಲಸುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- Shukra Budh Gochar: 24ಗಂಟೆಗಳಲ್ಲಿ ಶುಕ್ರ-ಬುಧ ಸಂಕ್ರಮಣ, 4 ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆ

ವಿಜಯ ಏಕಾದಶಿಯಲ್ಲಿ ಈ ನಾಲ್ಕು ರಾಶಿಯವರ ಬಾಳೇ ಬಂಗಾರ:  
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2024ರ ವಿಜಯ ಏಕಾದಶಿಯಲ್ಲಿ ಭಗವಾನ್ ವಿಷ್ಣು ನಾಲ್ಕು ರಾಶಿಯವರ ಜೀವನದಲ್ಲಿ ವಿಶೇಷ ಆಶೀರ್ವಾದವನ್ನು ಸುರಿಸಲಿದ್ದಾನೆ. ಇದರಿಂದಾಗಿ ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದ್ದು, ಜೀವನದಲ್ಲಿ ಸುಖ-ಸಂತೋಷ ನೆಮ್ಮದಿ ಲಭಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ: 
ಈ ಬಾರಿಯ ವಿಜಯ ಏಕಾದಶಿಯು ಮೇಷ ರಾಶಿಯವರಿಗೆ ಮಂಗಳಕರವಾಗಿರಲಿದೆ.  ಭಗವಾನ್ ಶ್ರೀಹರಿಯ ಕೃಪೆಯಿಂದ ದೀರ್ಘ ಸಮಯದ ಒತ್ತಡಗಳಿಂದ ಮುಕ್ತಿ ದೊರೆತು, ಆರೋಗ್ಯ ಸುಧಾರಿಸಲಿದೆ. ಹಣಕಾಸಿನ ಹರಿವು ಹೆಚ್ಚಾಗಲಿದ್ದು, ಭವಿಷ್ಯಕ್ಕಾಗಿ ಹಣ ಉಳಿಸುವ ನಿಮ್ಮ ಯೋಜನೆ ಯಶಸ್ವಿಯಾಗಲಿದೆ. 

ಮಿಥುನ ರಾಶಿ: 
ವಿಜಯ ಏಕಾದಶಿಯು ಮಿಥುನ ರಾಶಿಯವರ ಜೀವನದಲ್ಲಿಯೂ ಕೂಡ ಶುಭ ಫಲಗಳನ್ನು ತರಲಿದೆ. ಈ ವೇಳೆ ನೀವು ವೃತ್ತಿ ಬದುಕಿನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುವಿರಿ. ಸಂಪತ್ತು ವೃದ್ಧಿಯಾಗಲಿದ್ದು, ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಲಿವೆ. ಕೌಟುಂಬಿಕ ಜೀವನ ಸುಖ-ಸಂತೋಷದಿಂದ ಕೂಡಿರಲಿದೆ. 

ಇದನ್ನೂ ಓದಿ- ಗ್ರಹಣದ ದಿನದಿಂದಲೇ ಬದಲಾಗುವುದು ಈ ರಾಶಿಯವರ ಜೀವನ ! ಎಲ್ಲಾ ಕೆಲಸಗಳಲ್ಲಿಯೂ ಕೈ ಹಿಡಿಯುವುದು ಅದೃಷ್ಟ! ನಿಮ್ಮ ಏಳಿಗೆ ತಡೆಯುವವರೇ ಇಲ್ಲ

ಕರ್ಕಾಟಕ ರಾಶಿ: 
ವಿಜಯ ಏಕಾದಶಿಯಂದು ಕರ್ಕಾಟಕ ರಾಶಿಯ ಜನರು ತಮ್ಮಲ್ಲಿ ಹೊಸ ಶಕ್ತಿಯನ್ನು ಅನುಭವಿಸುವಿರಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದು ಹಿಡಿದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. ಹಣಕಾಸಿನ ಮೂಲ ಹೆಚ್ಚಾಗಲಿದ್ದು, ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ. 

ಕನ್ಯಾ ರಾಶಿ: 
2024ರ ವಿಜಯ ಏಕಾದಶಿಯಲ್ಲಿ ಭಗವಾನ್ ವಿಷ್ಣುವಿನ ವಿಶೇಷ ಆಶೀರ್ವಾದದಿಂದಾಗಿ ಕನ್ಯಾ ರಾಶಿಯ ಜನರು ಒಳ್ಳೆಯ ಉದ್ಯೋಗಾವಕಾಶಗಳನ್ನು ಪಡೆಯಬಹುದು. ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿದ್ದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. ಸುಖ ದಾಂಪತ್ಯ ಜೀವನವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News