Venus Transit 2022: ನವರಾತ್ರಿಯಲ್ಲಿ ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಬಂಪರ್ ಲಾಭ

Shukra Gochar Impact In Navratri 2022: ನವರಾತ್ರಿಯಲ್ಲಿ ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕನಾದ ಶುಕ್ರನ ಸಂಕ್ರಮಣವು ಕೆಲವು ರಾಶಿಯವರಿಗೆ ವಿಶೇಷ ಫಲಗಳನ್ನು ಕರುಣಿಸಲಿದೆ. ಶುಕ್ರನ ಕೃಪಾಕಟಾಕ್ಷದಿಂದ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲೂ ಬಂಪರ್ ಲಾಭ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...

Written by - Yashaswini V | Last Updated : Sep 27, 2022, 12:01 PM IST
  • ನವರಾತ್ರಿಗೂ ಮೊದಲು ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕನಾದ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿ ಕನ್ಯಾ ರಾಶಿಯನ್ನು ಪ್ರವೇಶಿಸಿದ್ದಾನೆ.
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿ ಸಮಯದಲ್ಲಿ ಶುಕ್ರನ ರಾಶಿ ಪರಿವರ್ತನೆಯು ಹಲವು ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದೆ.
  • ಶುಕ್ರನ ಕೃಪಾಕಟಾಕ್ಷದಿಂದ ಯಾರಿಗೆ ಬಂಪರ್ ಲಾಭ ದೊರೆಯಲಿದೆ. ಶುಕ್ರನು ಯಾರ ಮೇಲೆ ದಯೆ ತೋರುತ್ತಾನೆಂದು ತಿಳಿಯಿರಿ.
Venus Transit 2022: ನವರಾತ್ರಿಯಲ್ಲಿ ಶುಕ್ರನ ಕೃಪೆಯಿಂದ ಈ ರಾಶಿಯವರಿಗೆ ಬಂಪರ್ ಲಾಭ  title=
Venus Transit effects

ನವರಾತ್ರಿಯಲ್ಲಿ ಶುಕ್ರನ ರಾಶಿ ಪರಿವರ್ತನೆ ಪರಿಣಾಮ:  ನಿನ್ನೆಯಿಂದ ನವರಾತ್ರಿ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ನವರಾತ್ರಿಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ನವರಾತ್ರಿಯ ಒಂಬತ್ತು ದಿನಗಳು ನವ ದುರ್ಗೆಯರನ್ನು ವಿಶೇಷವಾಗಿ ಪೂಜಿಸಲಾಗುವುದು. ನವರಾತ್ರಿಗೂ ಮೊದಲು ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕನಾದ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಿ ಕನ್ಯಾ ರಾಶಿಯನ್ನು ಪ್ರವೇಶಿಸಿದ್ದಾನೆ. ನವರಾತ್ರಿಯ ಸಮಯದಲ್ಲಿ ಶುಕ್ರ ಸಂಕ್ರಮಣದಿಂದಾಗಿ ಕೆಲವು ರಾಶಿಯವರು ವಿಶೇಷ ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

ನವರಾತ್ರಿ ಸಮಯದಲ್ಲಿ ಶುಕ್ರನ ರಾಶಿ ಪರಿವರ್ತನೆಯು ಯಾವ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಶುಕ್ರನ ಕೃಪಾಕಟಾಕ್ಷದಿಂದ ಯಾರಿಗೆ ಬಂಪರ್ ಲಾಭ ದೊರೆಯಲಿದೆ. ಶುಕ್ರನು ಯಾರ ಮೇಲೆ ದಯೆ ತೋರುತ್ತಾನೆಂದು ತಿಳಿಯಿರಿ. 

ಶುಕ್ರ ರಾಶಿ ಪರಿವರ್ತನೆ: ನವರಾತ್ರಿಯಲ್ಲಿ ಈ ರಾಶಿಯವರಿಗೆ ವಿಶೇಷ ಲಾಭ 
ಮೇಷ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿ ಸಮಯದಲ್ಲಿ ಶುಕ್ರನ ರಾಶಿ ಪರಿವರ್ತನೆಯು ಮೇಷ  ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದೆ. ಮೇಷ ರಾಶಿಯ ಜನರು ಈ ಅವಧಿಯಲ್ಲಿ ಪ್ರಯಾಣ ಮಾಡುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ತೊಂದರೆಗೆ ಒಳಗಾಗಬಹುದು. ವೈಯಕ್ತಿಕ ಜೀವನದಲ್ಲೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಆರ್ಥಿಕ ವಿಷಯದಲ್ಲಿ ಈ ಸಮಯವು ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಸಿಹಿ ಫಲವನ್ನು ನೀವು ಪಡೆಯುತ್ತೀರಿ. 

ಇದನ್ನೂ ಓದಿ- Dhanteras 2022: ಧಂತೇರಸ್‌ನಲ್ಲಿ ಈ ವಿಷಯಗಳ ಬಗ್ಗೆ ವಿಶೇಷ ಗಮನಹರಿಸಿದರೆ ಎಂದಿಗೂ ಇರುವುದಿಲ್ಲ ಹಣದ ಕೊರತೆ

ವೃಷಭ ರಾಶಿ:
ಶುಕ್ರ ಸಂಕ್ರಮದೊಂದಿಗೆ ನವರಾತ್ರಿಯ ಈ 9 ದಿನಗಳು ಈ ಜನರಿಗೆ ಬಹಳ ವಿಶೇಷವಾಗಿರುತ್ತವೆ. ಶುಕ್ರನ ಸಂಚಾರದಿಂದ ಈ ರಾಶಿಯವರು ವ್ಯಾಪಾರ-ವ್ಯವಹಾರ, ವೃತ್ತಿ ರಂಗದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಆರ್ಥಿಕ ಮೂಲಗಳು ಹೆಚ್ಚಾಗಲಿದ್ದು ಹಣವನ್ನು ಸಂಗ್ರಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿವೆ. 

ಮಿಥುನ ರಾಶಿ:
ಶುಕ್ರನ ಸಂಚಾರದಿಂದ ಮಿಥುನ ರಾಶಿಯವರಿಗೆ ನವರಾತ್ರಿ ಬಂಪರ್ ಲಾಭವನ್ನು ತರಲಿದೆ ಎಂದು 
ಹೇಳಲಾಗುತ್ತಿದೆ. ಈ ಜನರಿಗೆ ಈ ಸಮಯವು ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಭಾಗವು ಏಳ್ಗೆಯಾಗಲಿದೆ. ಆರೋಗ್ಯದ ದೃಷ್ಟಿಯಿಂದಲೂ ಈ ಸಮಯವು ಉತ್ತಮವಾಗಿದೆ. ಒಟ್ಟಾರೆಯಾಗಿ ನಿಮ್ಮ ಈ ಸಮಯವು ನಿಮಗೆ ಸರ್ವತೋಮುಖ ಅಭಿವೃದ್ದಿಯನ್ನು ನೀಡಲಿದೆ. 

ಇದನ್ನೂ ಓದಿ- Mars Transit 2022: 18 ದಿನಗಳ ನಂತರ ಈ ರಾಶಿಯವರಿಗೆ ಧನಯೋಗ ಕರುಣಿಸಲಿದ್ದಾನೆ ಮಂಗಳ

ಕರ್ಕಾಟಕ ರಾಶಿ: 
ನವರಾತ್ರಿಯ ಸಮಯದಲ್ಲಿ ಶುಕ್ರನ ಸಂಚಾರದಿಂದ ಕರ್ಕಾಟಕ ರಾಶಿಯ ಜನರ ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಜೊತೆಗೆ ಸಂಪತ್ತನ್ನು ಗಳಿಸುವ ಸಾಧ್ಯತೆಯಿದೆ. ಈ ಸಮಯವು ವೃತ್ತಿಜೀವನಕ್ಕೆ ಅನುಕೂಲಕರವಾಗಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಹಳೆಯ ಸಾಲ ಮರುಪಾವತಿ ಆಗಲಿದೆ. 

ಸಿಂಹ ರಾಶಿ:
ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರದ ಚಿಹ್ನೆಗಳ ಜನರು ವಿವಿಧ ಮೂಲಗಳಿಂದ ಹಣದ ಲಾಭವನ್ನು ಕಾಣುತ್ತಾರೆ. ಈ ಸಮಯದಲ್ಲಿ ನೀವು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಬಹುದು. ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News