Shukra Gochar: ಮುಂದಿನ 27 ದಿನ ಈ ರಾಶಿಯವರಿಗೆ ಕೈತುಂಬಾ ಹಣ, ರಾಜಯೋಗ

Shukra Gochar: ವೈದಿಕ ಜ್ಯೋತಿಷ್ಯದಲ್ಲಿ ಕೀರ್ತಿ, ಸಂಪತ್ತು, ಐಷಾರಾಮಿ ಜೀವನಕಾರಕ ಎಂದು ಬಣ್ಣಿಸಲ್ಪಡುವ ಶುಕ್ರನು ಇನ್ನೂ ಕೆಲವೇ ದಿನಗಳಲ್ಲಿ ರಾಶಿ ಬದಲಾವಣೆ ಮಾಡಲಿದ್ದಾರೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಕೆಲವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.   

Written by - Yashaswini V | Last Updated : Oct 30, 2023, 10:03 AM IST
  • ಶುಕ್ರನ ಸಂಚಾರದಲ್ಲಿನ ಈ ಬದಲಾವಣೆಗಳು ದ್ವಾದಶ ರಾಶಿಯ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ.
  • ಆದರೆ, ಈ ಸಮಯದಲ್ಲಿ ಶುಕ್ರನು ನಾಲ್ಕು ರಾಶಿಯವರ ಜೀವನದಲ್ಲಿ ವಿಶೇಷ ದಯೆ ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳೆಂದರೆ...
Shukra Gochar: ಮುಂದಿನ 27 ದಿನ ಈ ರಾಶಿಯವರಿಗೆ ಕೈತುಂಬಾ ಹಣ, ರಾಜಯೋಗ  title=

Shukra Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು, ಐಷಾರಾಮಿ, ಪ್ರೀತಿಯ ಅಂಶ ಎಂದು ಕರೆಯಲ್ಪಡುವ ಶುಕ್ರನು ನವೆಂಬರ್ 3, 2023 ರಂದು ತನ್ನ ರಾಶಿ ಬದಲಾವಣೆ ಮಾಡುವ ಮೂಲಕ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ನವೆಂಬರ್ 3ರ ಬೆಳಿಗ್ಗೆ 05:13 ಕ್ಕೆ ಸಿಂಹ ರಷಿಯಿಂದ ಹೊರಬಂದು ಶುಕ್ರನು ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ಮುಂದಿನ 27ದಿನಗಳವರೆಗೆ ಎಂದರೆ ನವೆಂಬರ್ 30ರವರೆಗೂ ಕನ್ಯಾ ರಾಶಿಯಲ್ಲಿಯೇ ಸಂಚರಿಸಲಿರುವ ಶುಕ್ರನು ಈ ನಡುವೆ ನವೆಂಬರ್ 12 ರಂದು ಹಸ್ತ ನಕ್ಷತ್ರವನ್ನು ಪ್ರವೇಶಿಸಲಿದ್ದು, ಬಳಿಕ ನವೆಂಬರ್ 24 ರಂದು ಚಿತ್ರ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಸಂಚಾರದಲ್ಲಿನ ಈ ಬದಲಾವಣೆಗಳು ದ್ವಾದಶ ರಾಶಿಯ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ಆದರೆ, ಈ ಸಮಯದಲ್ಲಿ ಶುಕ್ರನು ನಾಲ್ಕು ರಾಶಿಯವರ ಜೀವನದಲ್ಲಿ ವಿಶೇಷ ದಯೆ ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಕನ್ಯಾ ರಾಶಿಗೆ ಶುಕ್ರನ ಪ್ರವೇಶ: ತೆರೆಯಲಿದೆ ಈ ರಾಶಿಯವರ ಅದೃಷ್ಟದ ಬಾಗಿಲು, ತುಂಬಲಿದೆ ಖಜಾನೆ:-
ವೃಷಭ ರಾಶಿ: 

ವೃಷಭ ರಾಶಿಯ ಅಧಿಪತಿ ಗ್ರಹವೂ ಆಗಿರುವ ಶುಕ್ರನ ರಾಶಿ ಪರಿವರ್ತನೆಯು ಈ ರಾಶಿಯವರ ಪ್ರೇಮ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ.  ಈ ಸಮಯದಲ್ಲಿ ಮಕ್ಕಳಿಂದ ಸಂತಸ ಹೆಚ್ಚಾಗಲಿದೆ. ಆದಾಯ ಹೆಚ್ಚಳದೊಂದಿಗೆ ಸಮಾಜದಲ್ಲಿ ನಿಮ್ಮ ಸ್ಥಾನ-ಮಾನವೂ ಹೆಚ್ಚಾಗಲಿದೆ. 

ಇದನ್ನೂ ಓದಿ- Weekly Horoscope: ನವೆಂಬರ್ ಮೊದಲ ವಾರ ಐದು ರಾಶಿಯವರಿಗೆ ಹಣದ ಸುರಿಮಳೆ, ಭಾರೀ ಅದೃಷ್ಟ

ತುಲಾ ರಾಶಿ: 
ವೃಷಭ ರಾಶಿಯಂತೆ ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ಸದ್ಯ ತುಲಾ ರಾಶಿಯನ್ನು ತೊರೆದು ಕನ್ಯಾ ರಾಶಿಯನ್ನು ಪ್ರವೇಶಿಸಲಿರುವ ಶುಕ್ರನು ಈ ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ. ಈ ಸಂದರ್ಭದಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿದ್ದು ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಮಾತ್ರವಲ್ಲ, ಭೂಮಿ, ಆಸ್ತಿ, ವಾಹನ ಖರೀದಿ ಯೋಗವೂ ಇದೆ. 

ವೃಶ್ಚಿಕ ರಾಶಿ: 
ಶುಕ್ರ ರಾಶಿ ಬದಲಾವಣೆಯಿಂದ ವೃಶ್ಚಿಕ ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಹೊಸ ಹಣಕಾಸಿನ ಮೂಲಗಳು ತೆರೆಯಲಿದ್ದು ಹಣಕಾಸಿನ ಹರಿವು ಹೆಚ್ಚಾಗಲಿದೆ. ನವೆಂಬರ್ ತಿಂಗಳಿನಲ್ಲಿ ಗ್ರಹಗಳ ರಾಜ ಸೂರ್ಯ ದೇವ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದ್ದು, ಉದ್ಯೋಗ ರಂಗದಲ್ಲಿ ನೀವು ಬಯಸಿದ ಯಶಸ್ಸು ಪ್ರಾಪ್ತಿಯಾಗಲಿದೆ. ಮಾತ್ರವಲ್ಲ, ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ವಿಜಯಲಕ್ಷ್ಮಿ ನಿಮ್ಮ ಪಾಲಿಗೆ ಇದ್ದಾಳೆ. 

ಇದನ್ನೂ ಓದಿ- Ketu Gochar 2023: ಮುಂದಿನ ಒಂದೂವರೆ ವರ್ಷ ಈ ರಾಶಿಯವರಿಗೆ ಹೆಚ್ಚಾಗಲಿದೆ ಸಂಕಷ್ಟ

ಮೀನ ರಾಶಿ: 
ಶುಕ್ರ ರಾಶಿ ಪರಿವರ್ತನೆಯು ಮೀನ ರಾಶಿಯವರ ಜೀವನದಲ್ಲಿ ಸಂತಸದ ಹೊನಲನ್ನು ತರಲಿದೆ. ಈ ಸಮಯದಲ್ಲಿ ಮೀನ ರಾಶಿಯವರಿಗೆ ವಿವಿಧ ಕ್ಷೇತ್ರಗಳಲ್ಲಿ ಶುಭ ಫಲಗಳು ಲಭ್ಯವಾಗಲಿದ್ದು ಇನ್ನೂ ವಿವಾಹವಾಗದೆ ಇರುವ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇದಲ್ಲದೆ, ನಿಮ್ಮ ವೃತ್ತಿ ಬದುಕಿನಲ್ಲಿಯೂ ಪ್ರಗತಿಯನು ಕಾಣುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News