ವಾಸ್ತು ಶಾಸ್ತ್ರ: ಮಿಸ್ ಆಗಿಯೂ ಈ 4 ವಸ್ತುಗಳನ್ನು ಯಾರಿಗೂ ನೀಡಬೇಡಿ

Vastu Tips: ಜೀವನದಲ್ಲಿ ಒಂದಲ್ಲಾ ಒಂದು ಸಮಯದಲ್ಲಿ ನಾವು ವಸ್ತುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ನಾವು ಎಂದಿಗೂ ಇತರರಿಗೆ ನೀಡಬಾರದು ಅಥವಾ ಅವರಿಂದ ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Aug 18, 2022, 08:15 AM IST
  • ಸಾಮಾನ್ಯವಾಗಿ ಚಿಕ್ಕ ವಯಸ್ಸಿನಿಂದಲೂ ಪೆನ್ ಅಥವಾ ಪೆನ್ಸಿಲ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಇದ್ದೇ ಇರುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು.
  • ವಾಸ್ತವವಾಗಿ, ಪೆನ್ ಅಥವಾ ಪೆನ್ಸಿಲ್ ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಸಂಪೂರ್ಣ ಖಾತೆಯನ್ನು ಇಡುವ ವಸ್ತುವಾಗಿದೆ.
ವಾಸ್ತು ಶಾಸ್ತ್ರ: ಮಿಸ್ ಆಗಿಯೂ ಈ 4 ವಸ್ತುಗಳನ್ನು ಯಾರಿಗೂ ನೀಡಬೇಡಿ  title=
Vastu Tips for Money

ಹಣಕ್ಕಾಗಿ ವಾಸ್ತು ಸಲಹೆ: ನಮ್ಮ ದಿನನಿತ್ಯದ ಜೀವನದಲ್ಲಿ ಒಂದಲ್ಲಾ ಒಂದು ಸಮಯದಲ್ಲಿ, ಒಂದಿಲ್ಲೊಂದು ಕಾರಣಕ್ಕೆ ನಾವು ಯಾರಿಂದಲಾದರೂ ಕೆಲವು ವಸ್ತುಗಳನ್ನೂ ತೆಗೆದುಕೊಳ್ಳುತ್ತೇವೆ. ಇಲ್ಲವೇ, ಕೆಲವೊಮ್ಮೆ ನಮ್ಮಲ್ಲಿರುವ ವಸ್ತುಗಳನ್ನು ಇತರರಿಗೆ ನೀಡುತ್ತೇವೆ. ಇದು ಸಹಜ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಇತರರಿಂದ ತೆಗೆದುಕೊಳ್ಳುವುದಾಗಲಿ ಅಥವಾ ಇತರರಿಗೆ ನೀಡುವುದಾಗಲಿ ಮಾಡಬಾರದು. ಈ ರೀತಿ ಮಾಡುವುದರಿಂದ ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಗೆ ಕೋಪ ಬರಬಹುದು ಎಂದು ಹೇಳಲಾಗುತ್ತದೆ. 

ಎಂದಿಗೂ ಈ 4 ವಸ್ತುಗಳನ್ನು ಇತರರಿಗೆ ನೀಡಬಾರದು ಅಥವಾ ತೆಗೆದುಕೊಳ್ಳಬಾರದು:
* ಪೆನ್ನು ಅಥವಾ ಪೆನ್ಸಿಲ್ :

ಸಾಮಾನ್ಯವಾಗಿ ಚಿಕ್ಕ ವಯಸ್ಸಿನಿಂದಲೂ ಪೆನ್ ಅಥವಾ ಪೆನ್ಸಿಲ್ ಅನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಇದ್ದೇ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ವಾಸ್ತವವಾಗಿ, ಪೆನ್ ಅಥವಾ ಪೆನ್ಸಿಲ್ ನಮ್ಮ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಸಂಪೂರ್ಣ ಖಾತೆಯನ್ನು ಇಡುವ ವಸ್ತುವಾಗಿದೆ. ಇದನ್ನು ಇತರಿಗೆ ನೀಡುವುದರಿಂದ ಅದೃಷ್ಟವೂ ಇತರರೊಂದಿಗೆ ವಿಭಜನೆ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ನೀವು ಯಾರಿಗಾದರೂ ಪೆನ್ ಅಥವಾ ಪೆನ್ಸಿಲ್ ನೀಡಿದ್ದರೆ ಅವರ ಕೆಲಸ ಮುಗಿದೊಡನೆ ಅದನ್ನು ಕೇಳಲು ಹಿಂಜರಿಯಬೇಡಿ. ಇಲ್ಲವೇ, ನೀವು ಯಾರಿಂದಲಾದರೂ ಇವುಗಳನ್ನು ಪಡೆದಿದ್ದರೆ ಅವುಗಳನ್ನು ತಪ್ಪದೇ ಹಿಂದಿರುಗಿಸಿ.

ಇದನ್ನೂ ಓದಿ- Vastu Tips: ಶ್ರೀಮಂತರಾಗಲು ಈ ವಸ್ತುಗಳನ್ನು ಇಂದೇ ನಿಮ್ಮ ಪರ್ಸ್‌ನಲ್ಲಿಡಿ

* ಪೊರಕೆ:
ಪ್ರತಿ ದಿನ ಬೆಳಿಗ್ಗೆ, ಸಂಜೆ ನಮ್ಮ ಮನೆ, ಅಂಗಡಿ, ಕಛೇರಿಯನ್ನು ಶುಚಿಗೊಳಿಸಲು ಪೊರಕೆ ಬೇಕೇ ಬೇಕು. ಪೊರಕೆಯನ್ನು ತಾಯಿ ಲಕ್ಷ್ಮಿಯ ಪ್ರತೀಕ ಎಂದು ಪರಿಗಣಿಸಲಾಗಿದೆ. ಇದನ್ನು ಅಪ್ಪಿತಪ್ಪಿಯೂ ಇತರರಿಗೆ ನೀಡಬಾರದು. ವಾಸ್ತುವಿನ ಪ್ರಕಾರ, ನಾವು ಯಾರಿಗಾದರೂ ಪೊರಕೆಯನ್ನು ನೀಡಿದರೆ, ತಾಯಿ ಲಕ್ಷ್ಮಿ ಸಹ ಮನೆಯಿಂದ ಹೊರಟು ಹೋಗುತ್ತಾಳೆ. ಅಂತಹ ಮನೆಯಲ್ಲಿ ಕ್ರಮೇಣ ಆರ್ಥಿಕ ಮುಗ್ಗಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ತಪ್ಪಿಸಲು ಪೊರಕೆಯನ್ನು ಎಂದಿಗೂ ಯಾರಿಗೂ ನೀಡಬೇಡಿ.

* ಉಪ್ಪು ನೀಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪು ಚಂದ್ರ ಮತ್ತು ಶುಕ್ರನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಯಾರಿಗಾದರೂ ಉಪ್ಪನ್ನು ಸಾಲವಾಗಿ ಅಥವಾ ಉಚಿತವಾಗಿ ನೀಡುವುದರಿಂದ ಈ ಎರಡೂ ಗ್ರಹಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಕುಟುಂಬದ ಮೇಲೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ ಎಂದು ನಂಬಲಾಗಿದೆ. ಉಪ್ಪನ್ನು ಇತರರಿಗೆ ನೀಡುವುದರಿಂದ ವೆಚ್ಚಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ, ಯಾರಿಗೂ ಉಪ್ಪನ್ನು ದಾನ ಮಾಡಬಾರದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಮನೆಯಲ್ಲಿ ಮನಿ ಪ್ಲಾಂಟ್ ನೆಡುವ ಮೊದಲು ಈ ವಾಸ್ತು ಸಲಹೆಗಳನ್ನು ತಿಳಿಯಿರಿ

* ಗಡಿಯಾರವನ್ನು ಯಾರಿಗೂ ಎಂದಿಗೂ ನೀಡಬೇಡಿ:
ಧಾರ್ಮಿಕ ಗ್ರಂಥಗಳ ಪ್ರಕಾರ, ಅದು ಗೋಡೆಯ ಗಡಿಯಾರವಾಗಲಿ ಅಥವಾ ಕೈಯಲ್ಲಿ ಧರಿಸಿರುವ ಗಡಿಯಾರವಾಗಲಿ, ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಅದರೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ನೀವು ನಿಮ್ಮ ಗಡಿಯಾರವನ್ನು ಯಾರಿಗಾದರೂ ದಾನ ಮಾಡಿದರೆ ಅಥವಾ ಸಾಲವಾಗಿ ನೀಡಿದರೆ, ನಿಮ್ಮ ಅದೃಷ್ಟವೂ ಅವನೊಂದಿಗೆ ವಿಭಜನೆಯಾಗುತ್ತದೆ. ಮತ್ತೊಂದೆಡೆ, ಇತರರಿಂದ ಗಡಿಯಾರವನ್ನು ಎರವಲು ಪಡೆದಾಗ, ನೀವು ತಿಳಿಯದೆ ಅದರ ಅದೃಷ್ಟ ಮತ್ತು ಕೆಟ್ಟ ಅದೃಷ್ಟದಲ್ಲಿ ಪಾಲುದಾರರಾಗುವಿರಿ.  ಆದ್ದರಿಂದ, ಗಡಿಯಾರದ ವಹಿವಾಟನ್ನು ಅಶುಭವೆಂದು ಪರಿಗಣಿಸಲಾಗಿದೆ. ಇದನ್ನು ಯಾರಿಗೂ ನೀಡುವುದಾಗಲಿ ಅಥವಾ ಯಾರಿಂದಲಾದರೂ ಪಡೆಯುವುದಾಗಲಿ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News