Vastu Tips: ಮನೆಯ ಮಹಡಿಯ ಮೇಲೆ ಈ ಒಂದು ವಸ್ತು ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ!

Vastu Tips: ವಾಸ್ತು ಪ್ರಕಾರ ಮನೆ ನಿರ್ಮಿಸುವುದು ಮಾತ್ರವಲ್ಲ, ಮನೆಯ ಒಳಗೆ, ಹೊರಗೆ ಇರಿಸಲಾದ ವಸ್ತುಗಳು ಕೂಡ ಮನುಷ್ಯನ ಜೀವನದ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ. ವಾಸ್ತು ಪ್ರಕಾರ, ಮನೆಯ ಮಹಡಿಯ ಮೇಲಿರುವ ವಸ್ತುಗಳು ಕೂಡ ವ್ಯಕ್ತಿಯ ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ.

Written by - Yashaswini V | Last Updated : Jan 27, 2023, 03:20 PM IST
  • ಮನೆಯ ಛಾವಣಿಯ ಮೇಲೆ ಕೆಲವು ವಸ್ತುಗಳನ್ನು ಇಡುವುದರಿಂದ ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ.
  • ವಾಸ್ತು ಪ್ರಕಾರ, ಸಕಾರಾತ್ಮಕ ಶಕ್ತಿಯನ್ನು ತರುವ ವಸ್ತುಗಳು ಛಾವಣಿಯ ಮೇಲಿದ್ದರೆ ಅದು ಮನಸ್ಸಿಗೂ ಶಾಂತಿ ನೀಡುತ್ತದೆ.
  • ಈ ವಸ್ತು ನಿಮ್ಮ ಮಲಗುವ ಅದೃಷ್ಟವನ್ನು ಎಚ್ಚರಗೊಳಿಸಬಹುದು ಎನ್ನಲಾಗುತ್ತದೆ.
Vastu Tips: ಮನೆಯ ಮಹಡಿಯ ಮೇಲೆ ಈ ಒಂದು ವಸ್ತು ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗುತ್ತೆ! title=
Vastu Tips

Vastu Tips: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆಯೇ, ವಾಸ್ತು ಶಾಸ್ತ್ರಕ್ಕೂ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಸುಖ ಸಂಸಾರಕ್ಕೆ, ನೆಮ್ಮದಿಯ ಜೀವನ ನಡೆಸಲು ಬೇಕಾಗುವಂತಹ ಹಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತು ಶಾಸ್ತ್ರಜ್ಞರ ಪ್ರಕಾರ, ವಾಸ್ತು ಪ್ರಕಾರ ಮನೆ ನಿರ್ಮಿಸುವುದು ಮಾತ್ರವಲ್ಲ, ಮನೆಯ ಒಳಗೆ, ಹೊರಗೆ ಇರಿಸಲಾದ ವಸ್ತುಗಳು ಕೂಡ ಮನುಷ್ಯನ ಜೀವನದ ಮೇಲೆ ನೇರ ಪರಿಣಾಮ ಉಂಟುಮಾಡುತ್ತದೆ. ಮಾತ್ರವಲ್ಲ, ಮನೆಯ ಮೇಲ್ಚಾವಣಿಯಲ್ಲಿರುವ ವಸ್ತು ಕೂಡ ವ್ಯಕ್ತಿಯ ಜೀವನದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

ಮನೆಯ ಛಾವಣಿಯ ಮೇಲೆ ಇರಿಸುವ ವಸ್ತುಗಳು ವ್ಯಕ್ತಿಯ ವ್ಯಕ್ತಿಯ ಜೀವನದ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಿದ್ದರೆ, ವಾಸ್ತು ಪ್ರಕಾರ, ಮನೆಯ ಮೇಲ್ಚಾವಣಿಯಲ್ಲಿ ಯಾವ ವಸ್ತುಗಳನ್ನು ಇಡುವುದು ಶುಭ. ಯಾವ ವಸ್ತುಗಳನ್ನು ಮಹಡಿಯ ಮೇಲೆ ಇಡಬಾರದು ಎಂದು ತಿಳಿಯೋಣ.

ಇದನ್ನೂ ಓದಿ- Wall Clock Tips : ಮನೆಯಲ್ಲಿ ಯಾವ ದಿಕ್ಕಿನಲ್ಲಿ ಗಡಿಯಾರ ಹಾಕಬೇಕು? ಇಲ್ಲಿದೆ ನೋಡಿ

ಈ ಒಂದು ವಸ್ತು ಮನೆಯ ಛಾವಣಿಯ ಮೇಲೆ ಇದ್ದರೆ ಸಾಕು ಚಿಟಿಕೆಯಲ್ಲಿ ಬದಲಾಗುತ್ತೆ ಅದೃಷ್ಟ:
ವಾಸ್ತು ಶಾಸ್ತ್ರದ ಪ್ರಕಾರ,  ಮನೆಯ ಛಾವಣಿಯು ಶಕ್ತಿಯ ಚಲನೆಯ ಪ್ರಮುಖ ಕೇಂದ್ರವಾಗಿದೆ. ಹಾಗಾಗಿ ಮನೆಯ ಮೇಲ್ಚಾವಣಿಯನ್ನು ಸದಾ ಸ್ವಚ್ಚವಾಗಿ ಇಡಬೇಕು ಎಂದು ಹೇಳಲಾಗುತ್ತದೆ. ವಾಸ್ತುವಿನಲ್ಲಿ ಮನೆಯ ಮೇಲ್ಛಾವಣಿಯಲ್ಲಿ ಹಸಿರು ಗಿಡ-ಮರಗಳಿದ್ದರೆ ತುಂಬಾ ಅದೃಷ್ಟ. ಅದು ನಿಮ್ಮ ಮಲಗಿರುವ ಅದೃಷ್ಟವನ್ನು ಕೂಡ ಎಚ್ಚರಗೊಳಿಸುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನು ಓದಿ- Vastu Tips for Brooms : ಮನೆಯಲ್ಲಿ ಪೊರಕೆಯ ಈ ಟ್ರಿಕ್‌ ಮಾಡಿದ್ರೆ ನಿಮಗೆ ಭರ್ಜರಿ ಆರ್ಥಿಕ ಲಾಭ!

ಮನೆಯ ಛಾವಣಿಯ ಮೇಲೆ ಈ ವಸ್ತುಗಳನ್ನು ಇಡಲೇಬಾರದು:
ವಾಸ್ತು ಪ್ರಕಾರ, ಮನೆಯ ಛಾವಣಿಯ ಮೇಲೆ ಇಡುವ ಕೆಲವು ವಸ್ತುಗಳನ್ನು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗಿ ಕುಟುಂಬ ಸದಸ್ಯರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮನೆಯ ಛಾವಣಿಯ ಮೇಲೆ ಕೆಲವು ವಸ್ತುಗಳನ್ನು ಇಡಲೇಬಾರದು  ಎಂದು ಹೇಳಲಾಗುತ್ತದೆ. ಆ ವಸ್ತುಗಳೆಂದರೆ 
>> ಮನೆಯ ಮೇಲ್ಛಾವಣಿಯಲ್ಲಿ ಕಸವನ್ನು ಹಾಕಬಾರದು.
>> ಹಳೆಯ ಪೇಪರ್‌ಗಳು ಅಥವಾ ಮ್ಯಾಗಜೀನ್‌ಗಳನ್ನು ಮನೆಯ ಛಾವಣಿಯ ಮೇಲೆ ಇಡಬಾರದು.
>> ನಾವು ಬಳಸದೇ ಇರುವ ಮುರಿದ ಕಬ್ಬಿಣದ ವಸ್ತುಗಳನ್ನು ಛಾವಣಿಯಲ್ಲಿ ಸಂಗ್ರಹಿಸಬಾರದು.
>> ಹಳೆಯ ಬಟ್ಟೆ, ಶೂ, ಚಪ್ಪಲಿ ಇತ್ಯಾದಿ ವಸ್ತುಗಳನ್ನು ಮೇಲ್ಚಾವಣಿಯಲ್ಲಿ ಸಂಗ್ರಹಿಸುವುದನ್ನು ತಪ್ಪಿಸುವುದು ಒಳ್ಳೆಯದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News