ನವದೆಹಲಿ: ತಾಯಿ ಲಕ್ಷ್ಮಿ ತುಳಸಿ ಗಿಡದಲ್ಲಿ ನೆಲೆಸಿದ್ದಾಳೆಂದು ನಂಬಲಾಗಿದೆ. ತುಳಸಿ ಗಿಡದ ಪೂಜೆಯ ಸಮಯದಲ್ಲಿ ಸಣ್ಣ ತಪ್ಪಾದರೂ ಲಕ್ಷ್ಮಿಯು ಕೋಪಗೊಳ್ಳುತ್ತಾಳಂತೆ. ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಪ್ರತಿ ಮನೆಯ ಅಂಗಳದಲ್ಲಿ ತುಳಸಿ ಗಿಡವಿದ್ದು, ಬೆಳಗ್ಗೆ ಮತ್ತು ಸಂಜೆ ಪೂಜಿಸಲಾಗುತ್ತದೆ. ಆದರೆ ತುಳಸಿ ಪೂಜೆಯ ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ತುಳಸಿಯನ್ನು ಗೌರವದಿಂದ ಪೂಜಿಸುವುದರಿಂದ ಲಕ್ಷ್ಮಿದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ. ಹಾಗೆಯೇ ವಿಷ್ಣುವಿನ ಕೃಪೆಯೂ ಸಿಗುತ್ತದೆ.
ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮನೆಯಲ್ಲಿ ತುಳಸಿ ಗಿಡ ನೆಟ್ಟರೆ ಸಾಲದು. ಬದಲಿಗೆ ನಿಯಮಗಳ ಪ್ರಕಾರ ಪೂಜೆಯ ವಿಶೇಷ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳಬೇಕು. ತುಳಸಿಯನ್ನು ನಿತ್ಯವೂ ಪೂಜಿಸುವವನಿಗೆ ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಮತ್ತು ವ್ಯಕ್ತಿಯು ಸಂಪತ್ತು ಸೇರಿದಂತೆ ಎಲ್ಲವನ್ನೂ ಪಡೆಯುತ್ತಾನಂತೆ. ಆದರೆ ತುಳಸಿ ಗಿಡಕ್ಕೆ ನೀರು ನೈವೇದ್ಯ ಮಾಡಿದ ನಂತರ ಪ್ರದಕ್ಷಿಣೆ ಮಾಡಬೇಕು. ತುಳಸಿ ಪರಿಕ್ರಮದ ನಿಯಮಗಳು ಮತ್ತು ಈ ಸಮಯದಲ್ಲಿ ಯಾವ ಮಂತ್ರವನ್ನು ಜಪಿಸಬೇಕೆಂದು ತಿಳಿಯಿರಿ.
ಇದನ್ನೂ ಓದಿ: ಸೆಪ್ಟೆಂಬರ್ 17 ರಿಂದ ಈ ರಾಶಿಯವರಿಗೆ ಅದೃಷ್ಟ, ಕೈ ಹಾಕಿರುವ ಕೆಲಸದಲ್ಲಿ ಯಶಸ್ಸು ನೀಡಲಿದ್ದಾರೆ ಸೂರ್ಯ ಮತ್ತು ಬುಧ
ತುಳಸಿ ಪೂಜೆಯ ನಿಯಮಗಳು
ಶಾಸ್ತ್ರಗಳ ಪ್ರಕಾರ ತುಳಸಿಗೆ ನಿಯಮಿತವಾಗಿ ನೀರನ್ನು ಅರ್ಪಿಸುವುದರಿಂದ ಲಕ್ಷ್ಮಿದೇವಿಯು ಸಂತುಷ್ಟಳಾಗುತ್ತಾಳೆ. ಆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ. ಆದರೆ ಯಾವಾಗಲೂ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿದ ನಂತರವೇ ತುಳಸಿಗೆ ನೀರನ್ನು ಅರ್ಪಿಸಬೇಕು.
ತುಳಸಿಗೆ ನೀರು ಅರ್ಪಿಸಿದ ನಂತರ ಪ್ರದಕ್ಷಿಣೆ ಹಾಕಬೇಕು. ಕನಿಷ್ಠ 3 ಬಾರಿ ತುಳಸಿಯ ಪ್ರದಕ್ಷಿಣೆ ಹಾಕುವುದು ಉತ್ತಮ. ನಿಮ್ಮ ಮನೆಯಲ್ಲಿ ಪ್ರದಕ್ಷಿಣೆಗೆ ಸ್ಥಳವಿಲ್ಲದಿದ್ದರೆ ಅಥವಾ ಪ್ರದಕ್ಷಿಣೆ ಮಾಡಲಾಗದಂತಹ ಸ್ಥಳದಲ್ಲಿ ಸಸ್ಯವನ್ನು ನೆಟ್ಟರೆ ನಿಂತುಕೊಂಡೇ 3 ಬಾರಿ ತಿರುಗಬಹುದು.
ಶಾಸ್ತ್ರಗಳ ಪ್ರಕಾರ ತುಳಸಿಗೆ ನೀರನ್ನು ಅರ್ಪಿಸಿದ ನಂತರ ಸರಿಯಾಗಿ ನಿಯಮ ಪಾಲಿಸಬೇಕು. ಅಲ್ಲದೆ ಮಂತ್ರವನ್ನು ಜಪಿಸುವುದು ಅವಶ್ಯಕ. ನಿಯಮಾನುಸಾರ ಪೂಜೆ ಮಾಡಿದರೆ ಮಾತ್ರ ಲಕ್ಷ್ಮಿಯ ಕೃಪೆ ಸಿಗುತ್ತದೆ. ಜೊತೆಗೆ ವಿಷ್ಣುವಿನ ಆಶೀರ್ವಾದವೂ ಸಿಗುತ್ತದೆ.
ಇದನ್ನೂ ಓದಿ: ಈ ರಾಶಿಯ ಯುವತಿಯನ್ನು ಮದುವೆಯಾದ್ರೆ ಕಡುಬಡವ ಕೂಡ ಶ್ರೀಮಂತನಾಗ್ತಾನೆ
ಪ್ರದಕ್ಷಿಣೆ ಮಾಡುವಾಗ ಈ ಮಂತ್ರ ಜಪಿಸಬೇಕು
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತಾಯಿ ತುಳಸಿಯ ಆಶೀರ್ವಾದವನ್ನು ಪಡೆಯಲು ನಿಯಮಿತವಾಗಿ ನೀರನ್ನು ಅರ್ಪಿಸುವುದರ ಜೊತೆಗೆ ಈ ಮಂತ್ರವನ್ನು ಜಪಿಸುವುದು ಸಹ ಅಗತ್ಯ. ‘ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ ಆದಿ ವ್ಯಾಧಿ ಹರ ನಿತ್ಯಂ, ತುಲಸೀ ತ್ವಂ ನಮೋಸ್ತುತೇ’ ಈ ಮಂತ್ರದಿಂದ ನೀರನ್ನು ಅರ್ಪಿಸಿ ಮತ್ತು ಪ್ರದಕ್ಷಿಣೆ ಮಾಡುವುದರಿಂದ ಲಕ್ಷ್ಮಿ ದೇವಿಯು ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.